ವಿದ್ಯುತ್‌ ಕಂಬಕ್ಕೆ ಬಸ್‌ ಡಿಕ್ಕಿ, ಪ್ರಯಾಣಿಕರಿಗೆ ಕರೆಂಟ್‌ ಶಾಕ್‌, ಇಬ್ಬರು ಆಸ್ಪತ್ರೆಗೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 2 AUGUST 2023

SAGARA : ಖಾಸಗಿ ಬಸ್‌ ವಿದ್ಯುತ್‌ ಕಂಬಕ್ಕೆ (Electric Pole) ಡಿಕ್ಕಿ ಹೊಡೆದು ವಿದ್ಯುತ್‌ ತಂತಿ ಬಸ್‌ ಮೇಲೆ ಬಿದ್ದಿದೆ. ಬಸ್‌ ಪ್ರಯಾಣಿಕರಿಗೆ ವಿದ್ಯುತ್‌ ಶಾಕ್‌ನ ಅನುಭವವಾಗಿದೆ ಎಂದು ತಿಳಿದು ಬಂದಿದೆ.

Bus-Hits-Electric-Pole-near-Sigandur.

ಸಾಗರ ತಾಲೂಕು ಗೆಣಸಿನಕುಣಿ ಬಳಿ ಘಟನೆ ಸಂಭವಿಸಿದೆ. ಸಿಗಂದೂರು ಕಡೆಯಿಂದ ಸಾಗರಕ್ಕೆ ಬರುವ ಬಸ್‌ ವಿದ್ಯುತ್‌ ಕಂಬಕ್ಕೆ (Electric Pole) ಡಿಕ್ಕಿ ಹೊಡೆದಿದೆ. ವಿದ್ಯುತ್‌ ಕಂಬ ತುಂಡಾಗಿ ವಯರ್‌ ಬಸ್‌ ಮೇಲೆ ಬಿದ್ದಿದೆ ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ – 25 ಕೆ.ಜಿ ಅಕ್ಕಿ, 5 ಕೆ.ಜಿ ಟೊಮೆಟೊ, ದಿನಸಿ ಪೂರೈಸುವಂತೆ ಪ್ರಾಂಶುಪಾಲರಿಗೆ ಅತಿಥಿ ಉಪನ್ಯಾಸಕರ ಮನವಿ, ಕಾರಣವೇನು?

ಘಟನೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯವಾಗಿತ್ತು. ಗಾನವಿ ಎಂಬ ವಿದ್ಯಾರ್ಥಿನಿ ಪ್ರಜ್ಞೆ ಕಳೆದುಕೊಂಡಿದ್ದಳು. ಆಕೆಯನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಗಾನವಿ ಸೇರಿದಂತೆ ಇಬ್ಬರನ್ನು ಆಂಬುಲೆನ್ಸ್‌ ಮೂಲಕ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

Parishrama NEET Academy

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment