ಗಾಂಜಾ ಸೇವಿಸಿದ್ದ ಬ್ಯಾಂಕ್‌ ಉದ್ಯೋಗಿ ಭದ್ರಾವತಿಯಲ್ಲಿ ಅರೆಸ್ಟ್‌ – 3 ಫಟಾಫಟ್‌ ಕ್ರೈಮ್‌ ನ್ಯೂಸ್‌

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 7 AUGUST 2023

ಸುತ್ತುಕೋಟೆಯಲ್ಲಿ ರಸ್ತೆ ದಾಟುವಾಗ ಬೈಕ್‌ ಡಿಕ್ಕಿ

SHIMOGA : ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರಿಗೆ ಸುತ್ತುಕೋಟೆ ಬಳಿ ಬೈಕ್‌ FATAFAT NEWS 1 jpgಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದಾರೆ. ಶಿಕಾರಿಪುರ ತಾಲೂಕು ಹಾರೋಗೊಪ್ಪ ಗ್ರಾಮದ ಚಂದ್ರಾನಾಯ್ಕ್‌ ಗಾಯಗೊಂಡಿದ್ದಾರೆ. ಸುತ್ತುಕೋಟೆಯಲ್ಲಿ ಅಂಗಡಿಗೆ ತೆರಳಲು ರಸ್ತೆ ದಾಟುವಾಗ ಘಟನೆ ಸಂಭವಿಸಿದೆ. ವೇಗವಾಗಿ ಬಂದ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ ಡಿಕ್ಕಿ ಹೊಡೆದಿದೆ. ಚಂದ್ರಾನಾಯ್ಕ್‌ ಅವರನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.webp" alt="FATAFAT-MORE-NEWS" width="1080" height="50" />

ಸಾಕು ನಾಯಿ ವಿಚಾರಕ್ಕೆ ಜಗಳ, ಸಹೋದರಿಯರ ಮೇಲೆ ಹಲ್ಲೆ

BHADRAVATHI : ಮನೆಯೊಂದರ ಮುಂದೆ ಸಾಕು ನಾಯಿ ಗಲೀಜು FATAFAT NEWS 2 jpgಮಾಡಿದ ವಿಚಾರಕ್ಕೆ ಜಗಳವಾಗಿ ಸಹೋದರಿಯರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಶಿಕ್ಷಕಿ ಸೌಮ್ಯಾ ಮತ್ತು ಆಕೆಯ ಸಹೋದರಿ ಕಾವ್ಯಾ ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ. ಸಹೋದರಿಯರು ಸಾಕಿದ್ದ ನಾಯಿ ಮನೆಯೊಂದರ ಮುಂದೆ ಗಲೀಜು ಮಾಡಿತ್ತು. ಇದೆ ವಿಚಾರವಾಗಿ ಜಗಳವಾಗಿತ್ತು. ಭದ್ರಾವತಿ ತಾಲೂಕು ಕಡದಕಟ್ಟೆಯಲ್ಲಿ ಘಟನೆ ಸಂಭವಿಸಿದೆ. ಹಲ್ಲೆ ನಡೆಸಿದ ಆರೋಪ ಸಂಬಂಧ ಮೂವರ ವಿರುದ್ಧ ಭದ್ರಾವತಿ ನ್ಯೂ ಟೌನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಟೀ ಗ್ಲಾಸ್‌ನಿಂದ ಕ್ಯಾಂಟೀನ್‌ ಮಾಲೀಕನ ತಲೆಗೆ ಹೊಡೆದು, ಡಿಚ್ಚಿ ಕೊಟ್ಟ ಗ್ರಾಹಕ, ಕಾರಣವೇನು?

FATAFAT-MORE-NEWS

ಗಾಂಜಾ ಸೇವಿಸಿದ್ದ ಸಹಕಾರ ಸೊಸೈಟಿ ಬ್ಯಾಂಕ್‌ ಉದ್ಯೋಗಿ ಅರೆಸ್ಟ್‌

BHADRAVATHI : ನಡುರಸ್ತೆಯಲ್ಲಿ ಅಸಭ್ಯವಾಗಿ ವರ್ತಿಸುತ್ತ, FATAFAT NEWS 3 jpgಅವಾಚ್ಯವಾಗಿ ಬೈದಾಡುತ್ತಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಆತನ ಗಾಂಜಾ ಸೇವನೆ ಮಾಡಿರುವುದು ಗೊತ್ತಾಗಿದೆ. ಭದ್ರಾವತಿಯ ಸಹಕಾರಿ ಸೊಸೈಟಿ ಬ್ಯಾಂಕ್‌ ಒಂದರಲ್ಲಿ ಕೆಲಸ ಮಾಡುತ್ತಿರುವ ಬೆಂಗಳೂರು ಮೂಲದ ವಿಘ್ನೆಶ್‌ ಎಂಬಾತನನ್ನು ಬಂಧಿಸಲಾಗಿದೆ. ಭದ್ರಾವತಿಯ ನ್ಯೂ ಟೌನ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

PARISHRAMA neet academy

Leave a Comment