ಶಿವಮೊಗ್ಗದಲ್ಲಿ ಬ್ಯಾಂಕ್‌ ಒಳಗೆ ಮ್ಯಾನೇಜರ್‌ಗೆ ಚಾಕು ತೋರಿಸಿ ಬೆದರಿಕೆ, ಕೆಲಕಾಲ ಆತಂಕ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 9 AUGUST 2023

SHIMOGA : ಮ್ಯಾನೇಜರ್‌ (Manager) ಒಬ್ಬರಿಗೆ ಬ್ಯಾಂಕ್‌ ಒಳಗೆ ಚಾಕು ತೋರಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ. ಸಾಲ ನೀಡದೆ ಇದ್ದರೆ ಕೊಲೆ ಮಾಡುವುದಾಗಿ ವ್ಯಕ್ತಿ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಚಿರತೆ ದಾಳಿಗೆ ಮಹಿಳೆ ಬಲಿ, ಗ್ರಾಮಸ್ಥರಲ್ಲಿ ಆತಂಕ

ಶಿವಮೊಗ್ಗ ತಾಲೂಕು ಹೊಸಳ್ಳಿ ಶಾಖೆಯ ಯುನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಘಟನೆ ಸಂಭವಿಸಿದೆ. ಆ.7ರಂದು ಮಧ್ಯಾಹ್ನ ವ್ಯಕ್ತಿಯೊಬ್ಬ ಬ್ಯಾಂಕಿಗೆ ಬಂದಿದ್ದು, ಹಸು ಸಾಲಕ್ಕೆ ಆಗ್ರಹಿಸಿದ್ದಾರೆ. ಅಲ್ಲದೆ ಬ್ಯಾಂಕ್‌ ಮ್ಯಾನೇಜರ್‌ ನಿರಂಜನ್‌ ಅವರಿಗೆ ಚಾಕು ತೋರಿಸಿ, ಜೀವ ಬೆದರಿಕೆ ಒಡ್ಡಿದ್ದಾನೆ.

ಇದನ್ನೂ ಓದಿ – ಇಂದಿರಾ ತಂದ ಸಂಕಷ್ಟ, ಒಂದೇ ಮೆಸೇಜ್‌ಗೆ ಶಿವಮೊಗ್ಗ ಜಿಲ್ಲೆಯ ಯುವಕ ಕಳೆದುಕೊಂಡ ಲಕ್ಷ ಲಕ್ಷ ಹಣ

ಚಾಕು ತೋರಿಸಿದ ವ್ಯಕ್ತಿಯನ್ನು ಅದೇ ಮೊದಲು ನೋಡಿದ್ದು. ಆತ ಯಾವುದೆ ಸಾಲಕ್ಕೆ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸಿಲ್ಲ ಎಂದು ಮ್ಯಾನೇಜರ್‌ ದೂರಿನಲ್ಲಿ ಆರೋಪಿಸಿದ್ದಾರೆ. ರೇವು ನಾಯ್ಕ ಎಂಬಾತನ ವಿರುದ್ಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PARISHRAMA neet academy

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment