SHIVAMOGGA LIVE NEWS | 8 AUGUST 2023
SHIMOGA : ಟೆಲಿಗ್ರಾಂ ಆಪ್ಗೆ (Telegram App) ಬಂದ ಮಸೇಜ್ ನಂಬಿ ಹಣ ಹೂಡಿಕೆ (Money Deposit) ಮಾಡಿದ್ದ ಶಿವಮೊಗ್ಗ ಜಿಲ್ಲೆಯ ಯುವಕನೊಬ್ಬ 5.56 ಲಕ್ಷ ರೂ. ಹಣ ಕಳೆದುಕೊಂಡಿದ್ದಾನೆ.
ಏನಿದು ಪ್ರಕರಣ?
ಇಂದಿರಾ ಎಂಬ ಹೆಸರಿನಲ್ಲಿ ಶಿವಮೊಗ್ಗ ಜಿಲ್ಲೆಯ ಯುವಕನ (ಹೆಸರು ಗೌಪ್ಯ) ಟೆಲಿಗ್ರಾಂಗೆ ಏ.18ರಂದು ಮೆಸೇಜ್ ಬಂದಿತ್ತು. ಬಿಟ್ ಕಾಯಿನ್ನಲ್ಲಿ (Bit Coin) ಹಣ ಡೆಪಾಸಿಟ್ ಮಾಡಿದರೆ ಅಧಿಕ ಲಾಭಾಂಶ ಸಿಗಲಿದೆ. ಲಾಭದ ಜೊತೆಗೆ ಡೆಪಾಸಿಟ್ ಹಣವನ್ನು ರೀಫಂಡ್ ಮಾಡಲಾಗುತ್ತದೆ ಎಂದು ಮೆಸೇಜ್ ಕಳುಹಿಸಿದ್ದರು. ಇದನ್ನು ನಂಬಿದ ಯುವಕ ತನ್ನ ಬ್ಯಾಂಕ್ ಖಾತೆಯಿಂದ 2.89 ಲಕ್ಷ ರೂ. ತನ್ನ ಸ್ನೇಹಿತರ ಖಾತೆಯಿಂದ 2.67 ಲಕ್ಷ ರೂ. ಹಣವನ್ನು ಹೂಡಿಕೆ ಮಾಡಿದ್ದ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಹಂಪ್ಗೆ ಬೈಕ್ ಸವಾರ ಬಲಿ, ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಡೆಪಾಸಿಟ್ ಹಣ ಮತ್ತು ಲಾಭವನ್ನು ರೀಫಂಡ್ ಮಾಡಬಹುದು ಎಂದು ಕಾದರು ಪ್ರಯೋಜನವಾಗಲಿಲ್ಲ. ವಂಚನೆಗೊಳಗಾಗಿರುವುದು ಅರಿವಾಗುತ್ತಿದ್ದಂತೆ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಈ ಸಂಬಂಧ ತನಿಖೆ ನಡೆಯುತ್ತಿದೆ.
ಹೂಡಿಕೆ ಮಾಡುವಾಗ ಎಚ್ಚರ
ಲಕ್ಷಾಂತರ ರೂ. ಹಣ ಹೂಡಿಕೆ ಮಾಡುವ ಮುನ್ನ ಜನರು ಎಚ್ಚರ ವಹಿಸಬೇಕಿದೆ. ಅನಾಮಿಕ ಮೆಸೇಜ್ ನಂಬಿ ಹಣ ಹೂಡಿಕೆ ಮಾಡಿದರೆ ವಂಚನೆಗೊಳಗಾಗುವ ಸಾದ್ಯತೆ ಹೆಚ್ಚು. ಹಣ ಹೂಡಿಕೆ ಮಾಡುವ ಮೊದಲು ಹೂಡಿಕೆ ಮಾಡುತ್ತಿರುವ ಸಂಸ್ಥೆ ಅಥವಾ ವ್ಯಕ್ತಿಯ ಪೂರ್ವಪರ ಪರಿಶೀಲಿಸಬೇಕು. ಇಲ್ಲವಾದಲ್ಲಿ ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ.