ಆನವಟ್ಟಿ, ಶಿವಮೊಗ್ಗಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ, ಎಲ್ಲಿಗೆಲ್ಲ ತೆರಳಲಿದ್ದಾರೆ? ಯಾವೆಲ್ಲ ಸಭೆ ನಡೆಸಲಿದ್ದಾರೆ?

SHIVAMOGGA LIVE NEWS | 5 SEPTEMBER 2023

ಸುದ್ದಿಯ ಮುಂದಿನ ಭಾಗ ಕೆಳಗಿದೆ

SHIMOGA : ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಸೆ.5 ಮತ್ತು 6ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

60823-Minister-Madhu-Bangarappa.jpg
Nanjappa Hospital Advertisement

ಇಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಿಂದ ಹೊರಟು ರಾತ್ರಿ 10.30ಕ್ಕೆ ಆನವಟ್ಟಿ ತಲುಪಲಿದ್ದಾರೆ. ಸೆ.6ರಂದು ಬೆಳಗ್ಗೆ 8.30ಕ್ಕೆ ಮೂಡಿ ಏತ ನೀರಾವರಿ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 9.30ಕ್ಕೆ ಆನವಟ್ಟಿ ಕೆಎಸ್‌ಅರ್‌ಟಿಸಿ ಬಸ್‌ ನಿಲ್ದಾಣಕ್ಕೆ ಭೇಟಿ, ಬೆಳಗ್ಗೆ 10ಕ್ಕೆ ಆನವಟ್ಟಿಯಿಂದ ಶಿವಮೊಗ್ಗಕ್ಕೆ ಹೊರಡಲಿದ್ದಾರೆ.

ಇದನ್ನೂ ಓದಿ – 5 ತಿಂಗಳಿಂದ ಸಂಬಳವಿಲ್ಲ, 8 ತಿಂಗಳಿಂದ ಪ್ರಯಾಣ ಭತ್ಯೆ ಇಲ್ಲ, ಪ್ರತಿಭಟನೆಗೆ ಬಂದವರಿಗೆ ಸಿಕ್ತು ಮಹತ್ವದ ಭರವಸೆ

ಬೆಳಗ್ಗೆ 11.30ಕ್ಕೆ ಶಿವಮೊಗ್ಗದ ಕಾಡಾ ಕಚೇರಿಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಲಿದ್ದಾರೆ. ಕಂದಾಯ ಸಚಿವರೊಂದಿಗೆ ಮಧ್ಯಾಹ್ನ 1 ಗಂಟೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 5 ಗಂಟೆಗೆ ಶಿವಮೊಗ್ಗದಿಂದ ಬೆಂಗಳೂರಿಗೆ ನಿರ್ಗಮಿಸಲಿದ್ದಾರೆ ಎಂದು ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿ ಎಂ. ಕಿಶೋರ್‌ ಕುಮಾರ್‌ ತಿಳಿಸಿದ್ದಾರೆ.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment