ಪುರುಷರಲ್ಲಿ ಪ್ರಾಸ್ಟೇಟ್‌ ಹಿಗ್ಗುವಿಕೆ; ನಂಜಪ್ಪ ಆಸ್ಪತ್ರೆಯಲ್ಲಿ ಉಚಿತ ತಪಾಸಣೆ, ಈಗಲೆ ಹೆಸರು ನೋಂದಣಿಗೆ ಸೂಚನೆ

ಶಿವಮೊಗ್ಗ: ನಗರದ ಸಾಗರ ರಸ್ತೆಯ ಗಾಡಿಕೊಪ್ಪದಲ್ಲಿರುವ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯಲ್ಲಿ ಜೂನ್ 15 ರಿಂದ ಜುಲೈ 18 ರವರೆಗೆ ಬಿನೈನ್ ಪ್ರಾಸ್ಟಾಟಿಕ್ ಹೈಪೆರ್ಪ್ಲಾಸಿಯಾ (BPH) ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಬೆಳಗ್ಗೆ 10:30 ರಿಂದ ಮಧ್ಯಾಹ್ನ 3:30 ರವರೆಗೆ ಈ ಶಿಬಿರ ನಡೆಯಲಿದೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

60 ವರ್ಷ ಮೇಲ್ಪಟ್ಟ ಪುರುಷರಲ್ಲಿ ಹೆಚ್ಚಾಗಿ ಕಂಡುಬರುವ ಪ್ರಾಸ್ಟೇಟ್ ಗ್ರಂಥಿ ಹಿಗ್ಗುವಿಕೆ ಸಮಸ್ಯೆಗೆ ಪ್ರಖ್ಯಾತ ಇಂಟರ್ವೆನ್ಷನಲ್ ರೇಡಿಯಾಲಜಿಸ್ಟ್ ಡಾ. ನಿಶಿತಾ ಎಸ್. ಹೆಚ್. ಅವರು ಉಚಿತ ಸಮಾಲೋಚನೆ ನಡೆಸಲಿದ್ದಾರೆ. ಪದೇ ಪದೆ ಮೂತ್ರ ವಿಸರ್ಜನೆ, ಮೂತ್ರದ ವೇಳೆ ಉರಿ, ಮೂತ್ರದಲ್ಲಿ ರಕ್ತ ಹಾಗೂ ಕೆಳಹೊಟ್ಟೆ ನೋವಿನಂತಹ ಲಕ್ಷಣಗಳಿರುವವರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದು ಎಂದು ನಂಜಪ್ಪ ಆಸ್ಪತ್ರೆಯ ಡಿಜಿಎಂ ತ್ರಿವೇಣಿ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Nanjappa-Life-Care-Hospital-in-shimoga-Sagara-Road-Gadikoppa

ಶಸ್ತ್ರಚಿಕಿತ್ಸೆ ಇಲ್ಲದ ಚಿಕಿತ್ಸೆ

ಈ ಸಮಸ್ಯೆಗೆ ಶಸ್ತ್ರಚಿಕಿತ್ಸೆ (ಆಪರೇಷನ್) ಇಲ್ಲದೆ, ಸೂಜಿಗಾತ್ರದ ರಂಧ್ರದ ಮೂಲಕ ಅತ್ಯಾಧುನಿಕ ಪ್ರಾಸ್ಟೇಟ್ ಆರ್ಟರಿ ಎಂಬೋಲೈಸೇಶನ್ (PAE) ವಿಧಾನದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಈ ಚಿಕಿತ್ಸೆ ಪಡೆದವರು ಕೇವಲ ಒಂದೇ ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಶೀಘ್ರ ಗುಣಮುಖರಾಗಬಹುದು ಎಂದು ತಿಳಿಸಿದ್ದಾರೆ. ಶಿಬಿರದ ಅಂಗವಾಗಿ ಪಿಎಇ ಚಿಕಿತ್ಸೆಯ ವೆಚ್ಚದ ಮೇಲೆ ಶೇ.40 ರಷ್ಟು ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿ ಹಾಗೂ ಮುಂಗಡ ಕಾಯ್ದಿರಿಸುವಿಕೆಗೆ ಮೊಬೈಲ್ ಸಂಖ್ಯೆ: 8050616525 ಸಂಪರ್ಕಿಸಬಹುದು ಎಂದು ಆಸ್ಪತ್ರೆಯ ಎಂದು ತಿಳಿಸಿದ್ದಾರೆ.

Shivamogga Live Promotion

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.