ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 12 SEPTEMBER 2023
SHIMOGA : ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ (Peace Meeting) ಆಚರಿಸಿ ಜಿಲ್ಲೆಗೆ ಗೌರವ ತರೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸೌಹಾರ್ದ ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು.
ಎರಡು ಹಬ್ಬಕ್ಕೆ ತೊಂದರೆ ಆಗದ ರೀತಿ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ. ಎಲ್ಲಾ ಅನುಮತಿ ಒಂದೆ ಕಡೆ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಕಾನೂನು ಚೌಕಟ್ಟಿನಲ್ಲಿ ಹಬ್ಬ ಆಚರಣೆ ಮಾಡೋಣ. ತಾನು ಕೂಡ ಸಂಭ್ರಮದಲ್ಲಿ ಭಾಗಿಯಾಗಲಿದ್ದೇನೆ ಎಂದು ತಿಳಿಸಿದರು.
ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಹಬ್ಬಗಳು ಸಂತೋಷ, ಸಂಭ್ರಮಕ್ಕೆ ಇರುವುದು. ಸಮನ್ವಯತೆ ಮತ್ತು ಸಹಬಾಳ್ವೆ ಕುರಿತು ಸದಾ ಮಾತನಾಡುತ್ತೇವೆ. ಈಗ ಅದನ್ನು ಆಚರಣೆಗೆ ತರಲು ಭಗವಂತನೆ ಇಂತಹ ಅವಕಾಶ ಕಲ್ಪಿಸಿದ್ದಾನೆ. ವೈಭವಕ್ಕೆ ಧಕ್ಕೆ ಬಾರದ ಹಾಗೆ ಆಚರಣೆಗಳು ನಡೆಯುತ್ತವೆ. ಎಲ್ಲರು ಒಟ್ಟಾಗಿ ಹಬ್ಬ ಆಚರಣೆ ಮಾಡಬೇಕಿದೆ. ಅಹಿತಕರ ಘಟನೆ ಮಾಡಲು ಮುಂದಾದರೆ ಜಿಲ್ಲಾಡಳಿತದ ಜೊತೆ ಸೇರಿ ಸದೆಬಡಿಯೋಣ ಎಂದರು.
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಮಾತನಾಡಿ, ಗಣಪತಿ, ಈದ್ ಹಬ್ಬದ ಹಿನ್ನಲೆ 40-50 ದಿನದಿಂದ ಸಿದ್ದತೆ ಮಾಡಿಕೊಂಡಿದ್ದೇವೆ. ಅನೇಕ ಸಭೆಗಳನ್ನು ನಡೆಸುತ್ತಿದ್ದೇವೆ. ಜಿಲ್ಲೆಯಲ್ಲಿ ಶಾಂತಿ ಕಾಪಾಡಬೇಕಾಗುತ್ತದೆ. ಹಬ್ಬಗಳು ಪವಿತ್ರ ದಿನ. ದೇವರಿಗೆ ಹೋಗಿ ಭಕ್ತಿ ಸಮರ್ಪಣೆ ಮಾಡಬೇಕು, ಮೆರವಣಿಗೆಯಲ್ಲಿ ಭಾಗವಹಿಸಬೇಕು. ಇಂತಹ ಸಂದರ್ಭ ಕಿಡಿಗೇಡಿಗಳು ಸಮಸ್ಯೆ ಮಾಡಲು ಮುಂದಾದರೆ ಪೊಲೀಸ್ ಇಲಾಖೆ ಸಹಿಸುವುದಿಲ್ಲ. ಹಬ್ಬದ ಸಂದರ್ಭ ಪೊಲೀಸ್ ಇಲಾಖೆ ಜೊತೆ ಕರ್ತವ್ಯಕ್ಕೆ ಸ್ವಯಂ ಸೇವಕರಾಗಲು ಅವಕಾಶ ಕಲ್ಪಿಸಿದ್ದೇವೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನೆರಡು ದಿನದಲ್ಲಿ ಸ್ವಯಂ ಸೇವಕರಿಗೆ ತರಬೇತಿ ನೀಡಲಿದ್ದೇವೆ ಎಂದರು.
ಇದನ್ನೂ ಓದಿ – ಬೆಳ್ಳಂಬೆಳಗ್ಗೆ ಶಿವಮೊಗ್ಗ ಜಿಲ್ಲೆಯಲ್ಲಿ 241 ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ, ಖುದ್ದು ಫೀಲ್ಡಿಗಿಳಿದ ರಕ್ಷಣಾಧಿಕಾರಿ
ಸಭೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು. ಎರಡು ಹಬ್ಬಗಳನ್ನು ಶಾಂತಿಯುತವಾಗಿ ಆಚರಣೆ ಮಾಡುವ ಸಂಬಂಧ ಸಲಹೆಗಳನ್ನು ನೀಡಿದರು.
ಪೊಲೀಸ್ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422