ಪ್ರಸಿದ್ಧ ಗುಳುಗುಳಿ ಶಂಕರ ದೇವಸ್ಥಾನದಲ್ಲಿ ಕಳ್ಳತನ, ಕಿಟಕಿ ಸರಳು ಮುರಿದು ಒಳ ನುಗ್ಗಿದ ಕಳ್ಳರು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 14 SEPTEMBER 2023

RIPPONPETE : ಪ್ರಸಿದ್ಧ ಗುಳುಗುಳಿ ಶಂಕರ (Guluguli Shankara) ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಹುಂಡಿ (Hundi) ಒಡೆದಿರುವ ಕಳ್ಳರು ಅಂದಾಜು ಒಂದು ಲಕ್ಷ ರೂ. ಕಾಣಿಕ ಹಣ ಕದ್ದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ.

ರಿಪ್ಪನ್‌ಪೇಟೆ ಸಮೀಪದ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಳುಗುಳಿ ಶಂಕರ ಎಂದು ಪ್ರಸಿದ್ಧವಾಗಿರುವ ಶ್ರೀ ಶಂಕರೇಶ್ವರ ದೇಗುಲದಲ್ಲಿ ಕಳ್ಳತನವಾಗಿದೆ. ಮಂಗಳವಾರ ರಾತ್ರಿ ದೇಗುಲದ ಕಿಟಕಿಯ ಸರಳುಗಳನ್ನು ಮುರಿದು ಕಳ್ಳರು ಒಳಗೆ ನುಗ್ಗಿರುವ ಶಂಕೆ ಇದೆ. ಸಿಸಿಟಿವಿ ಮತ್ತು ಡಿವಿಆರ್‌ಗಳನ್ನು ಕಿತ್ತು ಕಾರ್ಣಿಕ ಪುಷ್ಕರಣಿಗೆ ಎಸೆಯಲಾಗಿದೆ.

ಇದನ್ನೂ ಓದಿ – ಇಂಟರ್‌ಸಿಟಿ ರೈಲು ಗಂಟೆಗಟ್ಟಲೆ ತಡವಾಗಿದ್ದಕ್ಕೆ ಕಾರಣ ಬಯಲು, ಕುಂಸಿಯ ಯುವಕರು, ಶಿವಮೊಗ್ಗದ ವ್ಯಾಪಾರಿಗಳು ಅರೆಸ್ಟ್‌

ಹುಂಡಿ ಒಡೆದು ಕಾಣಿಕೆ ಹಣವನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಘಟನೆ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment