ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 28 SEPTEMBER 2023
SAGARA : ಇರುವಕ್ಕಿ ಗ್ರಾಮ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಕಲ್ಲುಕ್ವಾರಿಗಳಿಗೆ (Stone Mining) ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಗ್ರಾಮಸ್ಥರು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಇರುವಕ್ಕಿ ಗ್ರಾಮದ ಸರ್ವೆ ನಂಬರ್ 30 ಹಾಗೂ 31ರಲ್ಲಿ ಹೊಸದಾಗಿ ಕಲ್ಲುಕ್ವಾರಿ ಆರಂಭಿಸಲು ಕೆಲವರು ಮುಂದಾಗಿದ್ದಾರೆ. ಈ ಪ್ರದೇಶ ಶರಾವತಿ ಉಪ ನದಿಯ ದಂಡೆ. ಕಲ್ಲುಕ್ವಾರಿಗೆ (Stone Mining) ಅವಕಾಶ ನೀಡಿದರೆ ಕೃಷಿ ಚಟುವಟಿಕೆಗೆ ನೀರು ಪೂರೈಸಲು ತೊಂದರೆಯಾಗುತ್ತದೆ. ಪರಿಸರ ನಾಶವಾಗಲಿದ್ದು, ನೀರು ಮಲಿನಗೊಳ್ಳುವ ಸಾದ್ಯತೆ ಇದೆ. ಆದ್ದರಿಂದ ಈ ಭಾಗದಲ್ಲಿ ಕಲ್ಲುಕ್ವಾರಿಗೆ ಅವಕಾಶ ನೀಡಬಾರದು ಒತ್ತಾಯಿಸಿದರು.
ಇದನ್ನೂ ಓದಿ – ಮಧ್ಯರಾತ್ರಿಯಲ್ಲು ಗಾಂಧಿ ಬಜಾರ್ ಮುಂದೆ ಜಮಾಯಿಸಿದ್ದರು ಸಾವಿರಾರು ಜನ
ಗ್ರಾಮಸ್ಥರಾದ ಮಂಜುನಾಥ್, ಜಗದೀಶ್, ಮೇಘರಾಜ್, ಲೋಕೇಶ್, ಗಣಪತಿ, ಸಂತೋಷ್, ಸೋಮಶೇಖರ, ಜ್ಞಾನೇಶ್, ಪ್ರಶಾಂತ್ ಇದ್ದರು.
LATEST NEWS
- BREAKING NEWS – ಕಾಂಪೌಂಡ್ ಹಾರಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕರಡಿ

- ಅಡಿಕೆ ಕಳ್ಳರ ಹಾವಳಿ, ರಾತ್ರೋರಾತ್ರಿ ಲಕ್ಷ ಲಕ್ಷದ ಅಡಿಕೆ ನಾಪತ್ತೆ, ಎಲ್ಲಿ? ಏನಾಯ್ತು?

- ಮಹಿಳೆಯರೆ ಹುಷಾರ್, ಶಿವಮೊಗ್ಗದಲ್ಲಿ ಸಂಘದ ಸಾಲದ ಹೆಸರಲ್ಲಿ ನಡೆಯಿತು ಮಹಾ ವಂಚನೆ, ಆಗಿದ್ದೇನು?

- ಅತ್ತೆ ಮನೆಯಿಂದ ಶಿವಮೊಗ್ಗದ ಮನೆಗೆ ಮರಳಿದ ವ್ಯಕ್ತಿಗೆ ಬಿಗ್ ಶಾಕ್, ಆಗಿದ್ದೇನು?

- ಇವತ್ತೂ ಮಳೆ ಮುನ್ಸೂಚನೆ, ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ? ಶಿವಮೊಗ್ಗದ ಹವಾಮಾನ ವರದಿ

About The Editor
ನಿತಿನ್ ಆರ್.ಕೈದೊಟ್ಲು
















