ಈದ್‌ ಮಿಲಾದ್‌ ಮೆರವಣಿಗೆ, ಶಿವಮೊಗ್ಗದಲ್ಲಿ ಅದ್ಧೂರಿ ಸಿದ್ಧತೆ, ಎಲ್ಲೆಲ್ಲಿ ಹೇಗಿದೆ ಅಲಂಕಾರ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 1 OCTOBER 2023

SHIMOGA : ಈದ್‌ ಮಿಲಾದ್‌ ಮೆರವಣಿಗೆ (Procession) ಹಿನ್ನೆಲೆ ಶಿವಮೊಗ್ಗ ನಗರ ಹಸಿರುಮಯವಾಗಿದೆ. ಮುಸ್ಲಿಂ ಸಮುದಾಯ ಹೆಚ್ಚಿರುವ ಬಡಾವಣೆಗಳಲ್ಲಿ ವಿವಿಧ ಅಲಂಕಾರ ಮಾಡಲಾಗಿದೆ. ಅಮೀರ್‌ ಅಹಮದ್‌ ಸರ್ಕಲ್‌ನಲ್ಲಿ ಮೆಕ್ಕಾ ಮದೀನಾ ಮಾದರಿ ಅಲಂಕಾರ ಮಾಡಲಾಗಿದ್ದು ಇದರ ಮುಂದೆ ಸೆಲ್ಫಿ, ಫೋಟೋಗೆ ಜನರು ಮುಗಿಬಿದ್ದಿದ್ದಾರೆ.

ಎಎ ಸರ್ಕಲ್‌ ಹಸಿರುಮಯ ಮಾಡಲಾಗಿದೆ. ಮೆಕ್ಕಾ ಮದೀನಾ ಮಾದರಿ ಇರಿಸಲಾಗಿದೆ. ಇನ್ನು, ಸರ್ಕಲ್‌ ಪಕ್ಕದಲ್ಲಿ ಎರಡು ಫಿರಂಗಿಗಳನ್ನು ಇಡಲಾಗಿದೆ. ಸರ್ಕಲ್‌ನಲ್ಲಿ ಟಿಪ್ಪು ಸುಲ್ತಾನ್‌ ಬೃಹತ್‌ ಕಟೌಟ್‌ ನಿರ್ಮಿಸಲಾಗಿದೆ. ಶನಿವಾರ ರಾತ್ರಿಯಿಂದಲೆ ವಿವಿಧೆಡೆಯ ಜನರು ಸರ್ಕಲ್‌ಗೆ ಬಂದು ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

ವಿವಿಧೆಡೆ ಭರ್ಜರಿ ಅಲಂಕಾರ

ನಗರದ ವಿವಿಧೆಡೆ ಮುಸ್ಲಿಂ ಸಮುದಾಯದವರು ಹೆಚ್ಚಿರುವ ಪ್ರದೇಶದಲ್ಲಿ ಅದ್ಧೂರಿ ಅಲಂಕಾರ ಮಾಡಲಾಗಿದೆ. ಶಿವಮೊಗ್ಗದ ಬೈಪಾಸ್‌ ರಸ್ತೆ, ಆರ್‌ಎಂಎಲ್‌ ನಗರ, ಸೂಳೆಬೈಲು, ರೈಲ್ವೆ ನಿಲ್ದಾಣದ ಸಮೀಪದ ಅಮೀರ್‌ ಅಹಮದ್‌ ಕಾಲೋನಿ ಸೇರಿದಂತೆ ವಿವಿಧೆಡೆ ಜಗಮಗ ಲೈಟುಗಳ ಸಹಿತ ಅಲಂಕಾರ ಮಾಡಲಾಗಿದೆ.

ಇದನ್ನೂ ಓದಿ – 314 ರೈಲು ವೇಳಾಪಟ್ಟಿ ಬದಲು, ಶಿವಮೊಗ್ಗದ ಯಾವ್ಯಾವ ರೈಲುಗಳ ಸಮಯ ಬದಲು?

ಇವತ್ತು ನಗರದಲ್ಲಿ ಮೆರವಣಿಗೆ

ಈದ್‌ ಮಿಲಾದ್‌ ಅಂಗವಾಗಿ ಶಿವಮೊಗ್ಗದ ಗಾಂಧಿ ಬಜಾರ್‌ನಲ್ಲಿರುವ ಮಸೀದಿ ಮುಂಭಾಗದಿಂದ ಮಧ್ಯಾಹ್ನ ಮೆರವಣಿಗೆ (Procession) ಆರಂಭವಾಗಲಿದೆ. ಮುಸ್ಲಿಂ ಸಮುದಾಯದವರು ದೊಡ್ಡ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ನಗರದ ವಿವಿಧೆಡೆ ಮೆರವಣಿಗೆ ಸಾಗಲಿದೆ.

Eid Milad Procession

Eid Milad Procession

Eid Milad Procession

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment