ಎಸ್ಸೆಸ್ಸೆಲ್ಸಿ ಪಾಸಾದ ಮಹಿಳೆಯರಿಗೆ ಶಿವಮೊಗ್ಗದಲ್ಲಿ ಸ್ವಯಂ ಉದ್ಯೋಗ ಕುರಿತು ಉಚಿತ ತರಬೇತಿ

SHIVAMOGGA LIVE NEWS | 4 OCTOBER 2023 ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

SHIMOGA : ಸ್ವಯಂ ಉದ್ಯೋಗ (Self Employment) ಕೈಗೊಳ್ಳಲು ಇಚ್ಚಿಸುವ ಮಹಿಳಾ ಉದ್ಯಮಾಕಾಂಕ್ಷಿಗಳಿಗೆ ಅ.11 ರಿಂದ 20 ರವರೆಗೆ ಶಿವಮೊಗ್ಗದ ಕೈಗಾರಿಕಾ ಕೇಂದ್ರದಲ್ಲಿ ಉಚಿತ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಾಯೋಜಕತ್ವದಲ್ಲಿ ಧಾರವಾಡದ ಕರ್ನಾಟಕ ಉದ್ಯಮಶೀಲತಾಭಿವೃದ್ದಿ ಸಂಸ್ಥೆಯಿಂದ (ಸಿಡಾಕ್) ಈ ತರಬೇತಿ ನೀಡಲಾಗುತ್ತಿದೆ.

one-minute-news-notifications.webp

ಇದನ್ನೂ ಓದಿ- ಶಿವಮೊಗ್ಗಕ್ಕೆ ಬಂದಿದ್ದ 10 ಸರ್ಕಾರಿ ಹೈಟೆಕ್‌ ಬಸ್‌ಗಳ ಪೈಕಿ 8 ಬಸ್‌ ವಾಪಸ್‌, ಈ ನಿರ್ಧಾರವೇಕೆ?

ಅರ್ಹತೆಗಳೇನು?

18 ರಿಂದ 55 ವರ್ಷದೊಳಗಿನ 10 ನೇ ತರಗತಿ ಪಾಸಾದ ಮಹಿಳಾ ಉದ್ಯಮಾಕಾಂಕ್ಷಿಗಳು ತರಬೇತಿಗೆ ಅರ್ಹರಾಗಿರುತ್ತಾರೆ. ಆಸಕ್ತರು ಜಂಟಿ ನಿರ್ದೇಶಕರ ಕಚೇರಿ, ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರ, 3ನೇ ಮಹಡಿ, ಶಿವಪ್ಪನಾಯಕ ಕಾಂಪ್ಲೆಕ್ಸ್, ನೆಹರು ರಸ್ತೆ, ಶಿವಮೊಗ್ಗ ಹಾಗೂ ಸಿಡಾಕ್ ತರಬೇತುದಾರ ಅವಿನಾಶ ಎ, ಮೊ.ಸಂ: 9164811887 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅರ್ಜಿಯೊಂದಿಗೆ 2 ಪಾಸ್‍ಪೋರ್ಟ್ ಅಳತೆಯ ಫೋಟೊ ಹಾಗೂ ಆಧಾರ್ ಕಾರ್ಡ್ ಪ್ರತಿಯನ್ನು ಸಲ್ಲಿಸಬೇಕು. ತರಬೇತಿ ವಸತಿ ರಹಿತವಾಗಿದ್ದು ಊಟೋಪಚಾರ ಒದಗಿಸಲಾಗುವುದು ಎಂದು ಸಿಡಾಕ್ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment