ಚೋರಡಿ ಸುತ್ತಮುತ್ತ ಕಾಡಾನೆ ಪ್ರತ್ಯಕ್ಷ, ತೋಟ, ಗದ್ದೆಯಲ್ಲಿ ಸಂಚಾರ, ಬೆಳೆ ನಷ್ಟದಿಂದ ಕಂಗಾಲದ ರೈತ

SHIVAMOGGA LIVE NEWS | 19 OCTOBER 2023 (ಈ ಸುದ್ದಿಯನ್ನು ಇನ್ನು 44 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

SHIMOGA : ಚೋರಡಿ ಸಮೀಪದ ಕೆಂಚನಾಳ, ಹೊರಬೈಲು ಸುತ್ತಮುತ್ತ ಕಾಡಾನೆಗಳು ಗದ್ದೆ ತೋಟಕ್ಕೆ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ. ಇದರಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಬೆಳೆ ಹಾನಿ ತಪ್ಪಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

191023-Elephant-enters-agriculture-fields-near-choradi.webp

ಎಲ್ಲೆಲ್ಲಿ ದಾಳಿ ಮಾಡಿವೆ?

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ಎರಡು ದಿನದ ಹಿಂದೆ ಕೆಂಚನಾಳ ಸಮೀಪದ ಗಾಳಿಬೈಲಿನಲ್ಲಿ ಮೂರು ಆನೆಗಳು ಗದ್ದೆ ಮತ್ತು ತೋಟಕ್ಕೆ ನುಗ್ಗಿ ಭತ್ತ, ಅಡಿಕೆ, ಬಾಳೆ ಹಾಳು ಮಾಡಿವೆ. ಹೊರಬೈಲಲ್ಲಿ ಸೋಮವಾರ ರಾತ್ರಿ ಎರಡು ಆನೆಗಳು ಕಬ್ಬು ಮತ್ತು ಭತ್ತದ ಹಾಳಿಗಳಲ್ಲಿ ಓಡಾಡಿ ಬೆಳೆ ಹಾಳು ಮಾಡಿವೆ. ತೋಟಕ್ಕೆ ನುಗ್ಗಿ ಬಾಳೆ ಮತ್ತು ಅಡಕೆ ಸಸಿಗಳನ್ನು ಮುರಿದು ಹಾಕಿವೆ.

ಮಂಜಪ್ಪ, ಮಂಜಣ್ಣ, ನಾಗರಾಜ, ಶಿವಣ್ಣ ಮತ್ತಿತರ ರೈತರ ಬೆಳೆಗಳಿಗೆ ಹಾನಿಯಾಗಿದೆ. ಈ ಭಾಗದಲ್ಲಿ ಮೊದಲ ಬಾರಿಗೆ ಆನೆಗಳು ಕಾಣಿಸಿಕೊಂಡಿವೆ. ಜನವಸತಿ ಪ್ರದೇಶದ ಕಡೆ ಬಂದಿರುವುದು ಒಂಟಿ ಮನೆ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ರೈತರು ರಾತ್ರಿ ವೇಳೆ ಪಂಪ್‌ಸೆಟ್ ಆನ್ ಮಾಡುವುದಕ್ಕೆ ಗದ್ದೆ ಮತ್ತು ತೋಟಕ್ಕೆ ಹೋಗಲು ಹಿಂಜರಿಯುತ್ತಿದ್ದಾರೆ.

JOB NEWS

Jnanasudha Institutions Jobs
ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Leave a Comment