ಶಿವಮೊಗ್ಗದಲ್ಲಿ ಅದ್ಧೂರಿಯಾಗಿ ಸಾಗಿತು ಅಂಬಾರಿ ಮೆರವಣಿಗೆ, ಹೇಗಿತ್ತು ವೈಭವ? ಫೋಟೊ ನ್ಯೂಸ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 24 OCTOBER 2023

SHIMOGA : ದಸರಾ (dasara) ಅಂಗವಾಗಿ ನಗರದಲ್ಲಿ ನಾಡದೇವಿ ಚಾಮುಂಡೇಶ್ವರಿ ಮೂರ್ತಿ ಅದ್ಧೂರಿ ಮೆರವಣಿಗೆ ನಡೆಯಿತು. ದೊಡ್ಡ ಸಂಖ್ಯೆಯ ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ನಗರದ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಅಂಬಾರಿ ಮೆರವಣಿಗೆ ಆರಂಭವಾಯಿತು. ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್‌.ಎನ್.ಚನ್ನಬಸಪ್ಪ, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಮೇಯರ್‌ ಶಿವಕುಮಾರ್‌, ಕಮಿಷನರ್‌ ಮಾಯಣ್ಣಗೌಡ ಸೇರಿದಂತೆ ಪಾಲಿಕೆ ಸದಸ್ಯರು, ಅಧಿಕಾರಿಗಳು ಈ ಸಂದರ್ಭ ಹಾಜರಿದ್ದರು.

ಇದನ್ನೂ ಓದಿ- ಶಿವಮೊಗ್ಗ ದಸರಾ, ನಗರದ ರಸ್ತೆಗಳು ಜಗಮಗ, ಎಲ್ಲೆಲ್ಲಿ ಹೇಗಿದೆ ವಿದ್ಯುತ್‌ ದೀಪಾಲಂಕಾರ? – PHOTO NEWS

ಕೋಟೆ ರಸ್ತೆ, ಗಾಂಧಿ ಬಜಾರ್‌, ಶಿವಪ್ಪನಾಯಕ ವೃತ್ತ, ಅಮೀರ್‌ ಅಹಮದ್‌ ಸರ್ಕಲ್‌, ನೆಹರು ರಸ್ತೆ, ಗೋಪಿ ಸರ್ಕಲ್‌, ದುರ್ಗಿಗುಡಿ, ಜೈಲ್‌ ವೃತ್ತ, ಜೈಲ್‌ ರಸ್ತೆಯಿಂದ ಫ್ರೀಡಂ ಪಾರ್ಕ್‌ವರೆಗೆ ಮೆರವಣಿಗೆ ಸಾಗಿತು. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು, ನಗರದ ಪ್ರಮುಖ ದೇವಸ್ಥಾನದ ಉತ್ಸವ ಮೂರ್ತಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

p1

p2

p3

p4

p5

p6

p7

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment