ಶಿವಮೊಗ್ಗ ನಗರದಲ್ಲಿ ಒಂದೇ ದಿನ ಸಾವಿರ ಸಾವಿರ ಜನರಿಗೆ ಆರೋಗ್ಯ ತಪಾಸಣೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 30 OCTOBER 2023

SHIMOGA : ನಗರದ 50 ಸೇವಾ ಬಸ್ತಿಗಳಲ್ಲಿ ಒಂದೇ ದಿನ 5 ಸಾವಿರ ನಾಗರಿಕರ ಆರೋಗ್ಯ ತಪಾಸಣೆ ನಡೆಸಲಾಯಿತು. ಎನ್.ಎಂ.ಓ ಮತ್ತು ವಿಕಾಸ ಟ್ರಸ್ಟ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ (Health Camp) ಶಿಬಿರ ಆಯೋಜಿಸಲಾಗಿತ್ತು.

ನಗರದ ಪ್ರಮುಖ ವೈದ್ಯರು ಮತ್ತು ಸಿಮ್ಸ್ ವೈದಕೀಯ ಕಾಲೇಜು, ಶರಾವತಿ ದಂತ ವೈದ್ಯಕೀಯ ಕಾಲೇಜು, ಸುಬ್ಬಯ್ಯ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ವೈದ್ಯಕೀಯ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿ ಉಚಿತ ವೈದ್ಯಕೀಯ ಸೇವೆ ಒದಗಿಸಿದರು. 4457 ಜನರಿಗೆ ವೈದ್ಯಕೀಯ ತಪಾಸಣೆ, 65 ಮಕ್ಕಳಿಗೆ ಮತ್ತು 2257 ಜನರಿಗೆ ದಂತ ತಪಾಸಣೆ ನಡೆಸಲಾಯಿತು.

ಇದನ್ನೂ ಓದಿ- ಶಿವಮೊಗ್ಗ TO ಹೈದರಾಬಾದ್‌, ಗೋವಾ, ತಿರುಪತಿ ವಿಮಾನದ ಹಾರಾಟದ ದಿನಾಂಕ ಬದಲು, ಯಾವುದು ಹೊಸ ಡೇಟ್‌?

 ಒಂದೇ ದಿನ 5 ಸಾವಿರ ಜನರಿಗೆ ಆರೋಗ್ಯ ತಪಾಸಣೆ ಮಾಡಿರುವುದು ವಿದ್ಯಾರ್ಥಿ ಜೀವನದಲ್ಲಿ ಮಹೋನ್ನತ ಕೆಲಸ. ಇಂತಹ ಸೇವಾ ಮನೋಭವವನ್ನು ಮುಂದುವರೆಸಿಕೊಂಡು ಹೋಗುವುದು ಅಗತ್ಯ.ಡಾ.ಸೆಲ್ವಮಣಿ, ಜಿಲ್ಲಾಧಿಕಾರಿ

 2047 ರಲ್ಲಿ ಭಾರತ ವಿಶ್ವಗುರುವಾಗಿ ಮಾರ್ಗದರ್ಶನ ಮಾಡಲಿದೆ. ಮುಂದಿನ 5 ವರ್ಷ ಆರ್ಥಿಕತೆಯಲ್ಲಿ 3ನೇ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಭಾರತಾಂಬೆ ಸಿಂಹಾಸನದಲ್ಲಿ ವಿರಾಜಮಾನಳಾಗಿ ಎಲ್ಲಾ ರಂಗದಲ್ಲೂ ಮುನ್ನಡೆ ಸಾಧಿಸಿ, ಜಗತ್ತಿಗೆ ಮಾರ್ಗದರ್ಶನ ಮಾಡುವಂತಾಗಲು ನಾವು ಇನ್ನಷ್ಟು ಸೇವಾ ತತ್ಪರರಾಗಬೇಕು.ಮಧುಕರ್, ತೇಜಸ್‌ ಟ್ರಸ್ಟ್‌

50 ಸೇವಾ ಬಸ್ತಿಗಳಲ್ಲಿ ಇರುವ ಜನರ ಮನೆಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಮಧ್ಯಾಹ್ನದ ಮಾತೃ ಭೋಜನ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವೈದ್ಯರು ಮತ್ತು ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

health3

health2

health1

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment