ಉಚಿತವಾಗಿ ಕ್ರೆಡಿಟ್‌ ಸ್ಕೋರ್‌ ಪರಿಶೀಲಿಸಲು ಬಂದಿದೆ app? ಏನಿದು ಕ್ರೆಡಿಟ್‌ ಸ್ಕೋರ್?‌ ಪ್ರಯೋಜನವೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
SHIVAMOGGA LIVE NEWS | 29 OCTOBER 2023
➤ ಸುದ್ದಿಯ ಮುಂದಿನ 7 ಪ್ಯಾರಾಗಳು ಕೆಳಗಿವೆ.

APP LOKA : ಬ್ಯಾಂಕ್‌ ಸಾಲ ಪಡೆಯಲು ಕ್ರೆಡಿಟ್‌ ಸ್ಕೋರ್‌ (Credit Score) ಬಹಳ ಮುಖ್ಯ. ಇದರಲ್ಲಿ ಏರುಪೇರಾಗಿದ್ದರೆ ಸಾಲ ಸಿಗುವುದು ಕಷ್ಟ. ಹಾಗಾಗಿ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಕ್ರಿಡಿಟ್‌ ಸ್ಕೋರ್‌ ಪರಿಶೀಲಿಸಿಕೊಳ್ಳುವುದು ಅಗತ್ಯ. ಆದರೆ ಉಚಿತವಾಗಿ ತಿಳಿಸುವವರು ಕಡಿಮೆ. ಈ ಸಮಸ್ಯೆಗೆ ಒಂದು appನಿಂದ ಪರಿಹಾರ ಸಿಗಲಿದೆ.

APP LOKA NEW THUMBNAIL

ಕ್ರೆಡಿಟ್‌ ಸ್ಕೋರ್‌ ಅನ್ನುವುದು ನಮ್ಮ ಆರ್ಥಿಕ ಚುಟುವಟಿಕೆಯ ಪಕ್ಷಿ ನೋಟ. 300 ರಿಂದ 850ರವರಗೆ ಪಾಯಿಂಟ್‌ಗಳಿರಲಿವೆ. ನಿಮ್ಮ ಸ್ಕೋರ್‌ ಎಷ್ಟಿದೆ ಅನ್ನುವುದರ ಆಧಾರದ ಮೇಲೆ ಸಾಲ ಮತ್ತು ಇತರೆ ಬ್ಯಾಂಕಿಂಗ್‌ ಸೌಲಭ್ಯ ಲಭಿಸುತ್ತವೆ.

ಕ್ರೆಡಿಟ್‌ ಸ್ಕೋರ್‌ ಪರಿಶೀಲನೆಗೆ ಹಣ

ಕ್ರೆಡಿಟ್‌ ಇನ್‌ಫರ್‌ಮೇಷನ್‌ ಬ್ಯೂರೊ (ಸಿಬಿಲ್)‌ ಸಂಸ್ಥೆ ಕ್ರಿಡಿಟ್‌ ಸ್ಕೋರ್‌ಗಳ ನಿರ್ವಹಣೆ ಮಾಡುತ್ತದೆ. ಈ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಕ್ರಿಡಿಟ್‌ ಸ್ಕೋರ್‌ ಪರಿಶೀಲನೆಗೆ 550 ರೂ. ನಿಂದ 1200 ರೂ. ಪಾವತಿ ಮಾಡಬೇಕು. ಇದೆ ಕಾರಣಕ್ಕೆ ಹಲವರು ಕ್ರೆಡಿಟ್‌ ಸ್ಕೋರ್‌ ಪರಿಶೀಲನೆಯ ಉಸಾಬರಿಗೆ ಹೋಗುವುದಿಲ್ಲ.

ಇದನ್ನೂ ಓದಿ- ಸತತ 11 ಗಂಟೆ ಮೂರು ಕಡೆ ಪರಿಶೀಲಿಸಿದ ಇಡಿ ಅಧಿಕಾರಿಗಳು

ಉಚಿತವಾಗಿ ಪರಿಶೀಲಿಸಬಹುದು

ಕ್ರೆಡಿಟ್‌ ಸ್ಕೋರ್‌ಗಳ ಪರಿಶೀಲನೆಗೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ One Score ಎಂಬ app ಲಭ್ಯವಿದೆ. ಇದರಲ್ಲಿ ಉಚಿತವಾಗಿ ಕ್ರಿಡಿಟ್‌ ಸ್ಕೋರ್‌ ಪರಿಶೀಲಿಸಬಹುದು. ಅಲ್ಲದೆ ಸ್ಕೋರ್‌ ಏರಿಳಿತದ ಕುರಿತು ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯ. APP ಡೌನ್‌ಲೋಡ್‌ ಮಾಡಿ ಪ್ಯಾನ್‌ ಕಾರ್ಡ್‌ ಮಾಹಿತಿ, ವಿಳಾಸ ಸೇರಿದಂತೆ ಕೆಲವು ಪ್ರಮುಖ ಮಾಹಿತಿ ದಾಖಲಿಸಬೇಕು. ಇದರಲ್ಲಿ ಪ್ರಕಟವಾಗುವ ಕ್ರಿಡಿಟ್‌ ಸ್ಕೋರ್‌ ಬಹುತೇಕ ನಿಖರ ಎಂಬ ಅಭಿಪ್ರಾಯವಿದೆ.

Leave a Comment