ಮೀಟಿಂಗ್‌ನಿಂದ ಮನೆಗೆ ಮರಳಿದಾಗ ಕಾಣೆಯಾಗಿದ್ದಳು ಸ್ನೇಹಿತೆ, ದೇವರ ಮನೆ ಪರಿಶೀಲಿಸಿದಾಗ ಕಾದಿತ್ತು ಶಾಕ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 4 NOVEMBER 2023

SHIMOGA : ಮನೆಗೆ ಬಂದಿದ್ದ ಸ್ನೇಹಿತೆ 1.20 ಲಕ್ಷ ರೂ. ವೆಚ್ಚದ ಚಿನ್ನಾಭರಣ, ನಗದು, ಮೊಬೈಲ್‌ ಕಳ್ಳತನ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗದ ಗೋಪಾಲಗೌಡ ಬಡಾವಣೆಯ ಶ್ರೀಲತಾ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಸ್ನೇಹಿತೆ ಚಂದ್ರಕಲಾ ಎಂಬಾಕೆ ಮೇಲೆ ಅನುಮಾನ ವ್ಯಕ್ತವಾಗಿದೆ.

ಏನಿದು ಪ್ರಕರಣ?

ಶ್ರೀಲತಾ ಮತ್ತು ಚಂದ್ರಕಲಾ ಹುಟ್ಟಿನಿಂದ ಪರಿಚಯ. ಶಿವಮೊಗ್ಗದ ಶ್ರೀಲತಾರ ಮನೆಗೆ ಚಂದ್ರಕಲಾ ಆಗಾಗ ಬಂದು ಉಳಿದು ಹೋಗುತ್ತಿದ್ದರು. ಅಂತೆಯೇ ಈಚೆಗೆ ಬಂದು ಉಳಿದಿದ್ದರು. ಅ.30ರಂದು ಶ್ರೀಲತಾ ಅವರು ಮಗನ ಶಾಲೆಯಲ್ಲಿ ಮೀಟಿಂಗ್‌ಗೆ ತೆರಳಿದ್ದರು. ಮನೆಗೆ ಮರಳಿದಾಗ ಮುಂಬಾಗಿಲು ತೆರೆದಿತ್ತು. ಒಳಗೆ ಚಂದ್ರಕಲಾ ಇರಲಿಲ್ಲ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ – 3 ಕ್ಯಾಮರಾ ಬಾಡಿಗೆಗೆ ಪಡೆದ, 7 ದಿನವಾದರು ಮರಳಲಿಲ್ಲ, ಮನೆ ಬಳಿ ಹೋದ ಫೋಟಗ್ರಾಫರ್‌ಗೆ ಕಾದಿತ್ತು ಆಘಾತ

ದೇವರ ಮನೆಯಲ್ಲಿದ್ದ ಒಂದು ಪರ್ಸ್‌ ನಾಪತ್ತೆಯಾಗಿತ್ತು. ಅದರಲ್ಲಿ ಬಂಗಾರದ ಉಂಗುರ, ಚೈನ್‌, ಬೆಳ್ಳಿ ಕಾಲು ಚೈನ್‌, 10 ಸಾವಿರ ರೂ. ನಗದು, ಹಳೆಯ ಸ್ಯಾಮ್‌ಸಂಗ್‌ ಮೊಬೈಲ್‌ ಫೋನ್‌ ಇತ್ತು. ಇವುಗಳ ಅಂದಾಜು ಮೌಲ್ಯ 1.20 ಲಕ್ಷ ರೂ. ವಸ್ತುಗಳಿದ್ದವು. ಈ ಹಿನ್ನೆಲೆ ಎಲ್ಲೆಡೆ ಚಂದ್ರಕಲಾಗಾಗಿ ಹುಡುಕಾಡಿದ ಶ್ರೀಲತಾ ಕೊನೆಗೆ ದೂರು ನೀಡಿದ್ದಾರೆ. ತುಂಗಾ ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ – ಪರಿಚಿತ ಅಂತಾ ಇನ್ನೋವಾ ಕಾರು ಕೊಟ್ಟರು, ಆಮೇಲೆ ಕಾರು ಇಲ್ಲ, ವ್ಯಕ್ತಿನೂ ಇಲ್ಲ, GPS ಚೆಕ್‌ ಮಾಡಿದಾಗ ಶಾಕ್

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment