ಹೊಸಮನೆ ಕೆಂಡಾರ್ಚನೆ ಜಾಗದಲ್ಲಿ ಸಮುದಾಯ ಭವನ, ನ್ಯಾಯಾಲಯದ ಮೊರೆ ಹೋಗುವ ಎಚ್ಚರ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Shivamogga-Live-Number-1-Website

SHIVAMOGGA LIVE NEWS | 18 NOVEMBER 2023

SHIMOGA : ದೇಗುಲ ಆಡಳಿತ ಮಂಡಳಿ, ಪಾಲಿಕೆ ಸದಸ್ಯೆ, ಸ್ಥಳೀಯರು ಮತ್ತು ಭಕ್ತರ ವಿರೋಧದ ನಡುವೆ ಹೊಸಮನೆಯ ಅಂತರಘಟ್ಟಮ್ಮ ದೇವಸ್ಥಾನಕ್ಕೆ ಸೇರಿದ ಕೆಂಡಾರ್ಚನೆ ಜಾಗದಲ್ಲಿ ಸಮುದಾಯ ಭವನ (Community hall) ನಿರ್ಮಾಣಕ್ಕೆ ಯೋಜಿಸಲಾಗಿದೆ. ಇದಕ್ಕೆ ಪಾಲಿಕೆ ವತಿಯಿಂದ ಅವಕಾಶ ನೀಡಬಾರದು ಎಂದು ಹೊಸಮನೆ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎನ್.‌ಮಂಜುನಾಥ್‌ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯ 32ನೇ ವಾರ್ಡ್ ಹೊಸಮನೆ ಬಡಾವಣೆ ಹಳೆಯ ನಗರವಾಗಿದ್ದು, ಅತ್ಯಂತ ಕಿರಿದಾದ ರಸ್ತೆ ಮತ್ತು ಹೆಚ್ಚು ಜನರಿರುವ ವಸತಿ ಪ್ರದೇಶವಾಗಿದೆ. ಈ ಬಡಾವಣೆಯ 3ನೇ ತಿರುವಿನಲ್ಲಿ ದೊಡ್ಡಮ್ಮ – ಜಲದುರ್ಗಮ್ಮ ದೇವಸ್ಥಾನ ಸಮಿತಿ ವತಿಯಿಂದ ಸಮುದಾಯ ಭವನ ನಿರ್ಮಿಸಲು ಅನುಮತಿಗಾಗಿ ನಗರ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ಜಾಗ ಅಂತರಘಟ್ಟಮ್ಮ – ದೊಡ್ಡಮ್ಮ ದೇವಸ್ಥಾನಕ್ಕೆ ಸೇರಿದ ಕೆಂಡದಾರ್ಚನೆ ಜಾಗವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ- ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ, ಜಯನಗರಕ್ಕೆ ಸಿದ್ದೇಗೌಡ, ರಿಲೀವ್‌ ಆಗ್ತಾರಾ ಅಂಜನ್‌ ಕುಮಾರ್‌?

ಈ ಜಾಗದಲ್ಲಿ ಸಮುದಾಯ ಭವನ (Community Hall) ನಿರ್ಮಿಸಿದರೆ ಕೆಂಡಾರ್ಚನೆಗೆ ಜಾಗ ಇರುವುದಿಲ್ಲ. ಇನ್ನು, ಪಾಲಿಕೆ ಸದಸ್ಯೆ ರೇಖಾ ರಂಗನಾಥ್‌ ಅವರು ಸ್ಥಾಯಿ ಸಮಿತಿ ಸಭೆಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ವಿರೋಧ ಮಾಡಿದ್ದಾರೆ. ಇನ್ನು, ದಾಖಲೆಗಳಲ್ಲಿ ನಕ್ಷೆಯನ್ನು ಕೂಡ ತಿದ್ದಲಾಗಿದೆ. ಹಾಗಾಗಿ ಸಮುದಾಯ ಭವನ ನಿರ್ಮಾಣ ಯೋಜನೆಯನ್ನು ಪುನರ್‌ ಪರಿಶೀಲಿಸಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುತ್ತದೆ. ಅಲ್ಲದೆ ನ್ಯಾಯಾಲಯದ ಮೊರೆ ಹೋಗಲಾಗುತ್ತದೆ ಎಂದು ಮಂಜುನಾಥ್‌ ಎಚ್ಚರಿಸಿದರು.

ಸಮಿತಿಯ ಮುಖಂಡರಾದ ಎನ್.ರಮೇಶ್‌ ಬಾಬು, ಶಿವಮೂರ್ತಿ, ಕೆ.ಶ್ರೀನಿವಾಸ್‌, ಕೆ.ಫಕೀರಪ್ಪ ಇತರರಿದ್ದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : November 18, 2023

Leave a Comment