ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 21 NOVEMBER 2023
SHIMOGA : ಹೈದರಾಬಾದ್, ತಿರುಪತಿ ಮತ್ತು ಗೋವಾಗೆ ಶಿವಮೊಗ್ಗದಿಂದ ವಿಮಾನಯಾನ ಸೇವೆ ಆರಂಭವಾಗಿದೆ. ಸ್ಟಾರ್ ಏರ್‌ನ ವಿಮಾನ ಇವತ್ತು ಶಿವಮೊಗ್ಗದಿಂದ ಹಾರಾಟ ಆರಂಭಿಸಿದೆ. ಮೊದಲ ದಿನವೇ ಈ ಮೂರು ಮಾರ್ಗದಲ್ಲಿ 300ಕ್ಕೂ ಹೆಚ್ಚು ಮಂದಿ ಪ್ರಯಾಣಿಸಿದ್ದಾರೆ.
ವಾಟರ್ ಕೆನಾನ್ ಸ್ವಾಗತ
ಹೈದರಾಬಾದ್‌ನಿಂದ ಬೆಳಗ್ಗೆ 9.30ಕ್ಕೆ ಹೊರಟಿದ್ದ ಸ್ಟಾರ್ ಏರ್ ಎಂಬ್ರಿಯರ್ ಇ175ಎಲ್‌ಆರ್ ಬೆಳಗ್ಗೆ 10.43ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಯಿತು. ಶಿವಮೊಗ್ಗದಲ್ಲಿ ಸ್ಟಾರ್ ಏರ್‌ಗೆ ವಾಟರ್ ಕೆನಾನ್ ಸ್ವಾಗತ ನೀಡಲಾಯಿತು. ಹೈದರಾಬಾದ್‌ನಿಂದ 43 ಪ್ರಯಾಣಿಕರು ಆಗಮಿಸಿದ್ದರು. ಸ್ಟಾರ್ ಏರ್ ವತಿಯಿಂದ ಪ್ರತಿ ಪ್ರಯಾಣಿಕರನ್ನು ಸ್ವಾಗತಿಸಲಾಯಿತು.
ಹೇಗಿದೆ ಮೊದಲ ಸ್ಟಾರ್ ಏರ್ ವಿಮಾನ?
ಸ್ಟಾರ್ ಏರ್ ಸಂಸ್ಥೆ ಶಿವಮೊಗ್ಗದಿಂದ ಹೈದರಾಬಾದ್, ತಿರುಪತಿ ಮತ್ತು ಗೋವಾಗೆ ಒಂದೇ ವಿಮಾನ ಹರಿಸುತ್ತಿದೆ. ಇದು ಎಂಬ್ರಿಯರ್ ಇ175ಎಲ್‌ಆರ್ ಮಾದರಿ ವಿಮಾನ. ಇದರಲ್ಲಿ ಒಟ್ಟು 75 ಸೀಟ್‌ಗಳಿವೆ. ಈ ಪೈಕಿ 12 ಬಿಸ್ನೆಸ್ ಕ್ಲಾಸ್ ಸೀಟ್‌ಗಳು. ಉಳಿದ ಸೀಟುಗಳು ಒಂದು ಬದಿ ಎರಡು ಮತ್ತೊಂದು ಬದಿ ಎರಡು ಸೀಟುಗಳಿವೆ. ಪ್ರತಿ ಗಂಟೆಗೆ 800 ಕಿ.ಮೀ ವೇಗದಲ್ಲಿ ಈ ವಿಮಾನ ಹಾರಲಿದೆ. ಸಮುದ್ರ ಮಟ್ಟಕ್ಕಿಂತಲೂ 35 ಸಾವಿರ ಅಡಿ ಮೇಲೆ ಹಾರುವ ಸಾಮರ್ಥ್ಯ ಹೊಂದಿದೆ. ಇನ್ನು, ವಿಮಾನದ ಒಳಗೆ ಇಂಜಿನ್ ಸದ್ದು ಅತ್ಯಂತ ಕಡಿಮೆ ಕೇಳಲಿದೆ ಎಂದು ಸ್ಟಾರ್ ಏರ್ ತಿಳಿಸಿದೆ.
ತಿರುಪತಿ, ಗೋವಾ, ಹೈದರಾಬಾದ್
ಸ್ಟಾರ್ ಏರ್ ವಿಮಾನ ಮೊದಲ ದಿನ ತಿರುಪತಿ, ಗೋವಾ, ಹೈದರಾಬಾದ್‌ಗೆ ಹಾರಾಟ ನಡೆಸಿದೆ. ಬೆಳಗ್ಗೆ 11.50ಕ್ಕೆ ಶಿವಮೊಗ್ಗದಿಂದ ಟೇಕಾಫ್ ಆಗಿ ಮಧ್ಯಾಹ್ನ 12.42ಕ್ಕೆ ತಿರುಪತಿ ತಲುಪಿದೆ. ಮಧ್ಯಾಹ್ನ 1.18ಕ್ಕೆ ತಿರುಪತಿಯಿಂದ ಹೊರಟು ಮಧ್ಯಾಹ್ನ 2.09ಕ್ಕೆ ಶಿವಮೊಗ್ಗ ತಲುಪಿತ್ತು. ಮಧ್ಯಾಹ್ನ 2.47ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 3.25ಕ್ಕೆ ಗೋವಾದಲ್ಲಿ ಲ್ಯಾಂಡ್ ಆಗಿತ್ತು. ಸಂಜೆ 4.17ಕ್ಕೆ ಗೋವಾದಿಂದ ಹೊರಟು ಸಂಜೆ 5.01ಕ್ಕೆ ಶಿವಮೊಗ್ಗ ತಲುಪಿತ್ತು. ಸಂಜೆ 5.32ಕ್ಕೆ ಶಿವಮೊಗ್ಗದಿಂದ ಹೈದರಾಬಾದ್‌ಗೆ ಹಾರಾಟ ಆರಂಭಿಸಿದೆ.
ಇದನ್ನೂ ಓದಿ – KSRTC ವತಿಯಿಂದ 20 ಲಾರಿ ಖರೀದಿ, ಇನ್ಮುಂದೆ ‘ನಮ್ಮ ಕಾರ್ಗೊ’ಗೆ ಮತ್ತಷ್ಟು ಬಲ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422