ಶಾಂತಿನಗರ ಕಲ್ಲು ತೂರಾಟ ಪ್ರಕರಣ, ಪರಿಹಾರಕ್ಕೆ ಒತ್ತಾಯ, ಪಾಲಿಕೆಯಲ್ಲಿ ಸದಸ್ಯರ ನಡುವೆ ಮಾತಿನ ಚಕಮಕಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Shivamogga-Live-Number-1-Website

SHIVAMOGGA LIVE NEWS | 22 NOVEMBER 2023

SHIMOGA : ಈದ್‌ ಮೆರವಣಿಗೆ ಸಂದರ್ಭ ರಾಗಿಗುಡ್ಡದಲ್ಲಿ ಸಂಭವಿಸಿದ್ದ ಕಲ್ಲು ತೂರಾಟ ಪ್ರಕರಣದಲ್ಲಿ 18 ಮನೆಗಳಿಗೆ ಹಾನಿಯಾಗಿದೆ. ಈ ಕೂಡಲೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದಸ್ಯ ಧೀರರಾಜ್‌ ಹೊನ್ನವಿಲೆ ಮೇಯರ್‌ ಅವರನ್ನು ಒತ್ತಾಯಿಸಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಧೀರರಾಜ್‌ ಹೊನ್ನವಿಲೆ ಕೇಳಿದ್ದೇನು?

ಈದ್‌ ಮೆರವಣಿಗೆ ಸಂದರ್ಭ ಶಾಂತಿನಗರದಲ್ಲಿ 18 ಮನೆಗಳಿಗೆ ಹಾನಿಯಾಗಿದೆ. ಪಾಲಿಕೆ ವತಿಯಿಂದ ಪರಿಹಾರ ನೀಡಬೇಕು. ಇನ್ನು, ಶಾಂತಿ ನಗರ ಸೂಕ್ಷ್ಮ ಪ್ರದೇಶವಾಗಿದ್ದು ಸಿಸಿ ಕ್ಯಾಮರಾ ಅಳವಡಿಸುವಂತೆ ಜಿಲ್ಲಾ ರಕ್ಷಣಾಧಿಕಾರಿ ಅವರು ಆಯುಕ್ತರಿಗೆ ಎರಡು ಬಾರಿ ಪತ್ರ ಬರೆದಿದ್ದಾರೆ. ಇದಕ್ಕೆ ಆಯುಕ್ತರು ಯಾವುದೆ ಪ್ರತಿಕ್ರಿಯೆ ನೀಡಿಲ್ಲ ಎಂದು ಧೀರರಾಜ್‌ ಹೊನ್ನವಿಲೆ ಸಭೆಗೆ ತಿಳಿಸಿದರು.

ಇದನ್ನೂ ಓದಿ – ಸದ್ಯದಲೇ ಶಿವಮೊಗ್ಗದಿಂದ ಮತ್ತಷ್ಟು ಮಾರ್ಗಕ್ಕೆ ವಿಮಾನಯಾನ, ಇಲ್ಲಿದೆ ಸಂಸದರು ಹೇಳಿದ 5 ಪ್ರಮುಖಾಂಶ

ಪರಿಹಾರ ನೀಡಲು ಸಾಧ್ಯವಿಲ್ಲ

ಇದೆ ಸಂದರ್ಭ ಪೌರಾಡಳಿತ ಕಾನೂನುಗಳನ್ನು ಉಲ್ಲೇಖಿಸಿದ ಆಯುಕ್ತ ಮಾಯಣ್ಣ ಗೌಡ, ಗಲಭೆಗಳಿಂದ ಹಾನಿಗೆ ಪಾಲಿಕೆ ವತಿಯಿಂದ ಪರಿಹಾರ ನೀಡಲು ಸಾಧ್ಯವಿಲ್ಲ. ಪಾಲಿಕೆ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಬೇಕು. ಸರ್ಕಾರದ ವತಿಯಿಂದ ಪರಿಹಾರ ಬಿಡುಗಡೆಯಾಗಬೇಕು ಎಂದು ತಿಳಿಸಿದರು.

Shivamogga Live news

ಆಡಳಿತ, ಪ್ರತಿಪಕ್ಷಗಳ ಮಾತಿನ ಸಮರ

ಕಲ್ಲು ತೂರಾಟ ಪ್ರಕರಣ ಸಂಭವಿಸಿ ತಿಂಗಳುಗಳೆ ಕಳೆದೆದೆ. ಬಿಜೆಪಿಯವರು ರಾಜಕೀಯಕ್ಕಾಗಿ ಶಾಂತಿನಗರ ವಿಷಯ ಬಳಕೆ ಮಾಡಿಕೊಂಡರು. ಆದರೆ ಪರಿಹಾರ ವಿತರಿಸಿಲ್ಲ. ಪಾಲಿಕೆ ಬೊಕ್ಕಸ ಬರಿದಾಗಿದೆ. ಹಾಗಾಗಿ ಈತನಕ ಪರಿಹಾರ ವಿತರಣೆ ಮಾಡಿಲ್ಲ. ಈ ಕೂಡಲೆ ಸರ್ಕಾರಕ್ಕೆ ಶಿಫಾರಸು ಮಾಡಿ ಎಂದು ವಿರೋಧ ಪಕ್ಷ ಕಾಂಗ್ರೆಸ್‌ನ ಸದಸ್ಯರು ಮೇಯರ್‌ ಅವರನ್ನು ಆಗ್ರಹಿಸಿದರು. ಇದರಿಂದ ಕೆರಳಿದ ಆಡಳಿತರೂಢ ಬಿಜೆಪಿ ಸದಸ್ಯರು ಪಾಲಿಕೆ ಆರ್ಥಿಕವಾಗಿ ಸುಸ್ಥಿತಿಯಲ್ಲಿದೆ. ಸರ್ಕಾರದ ಬಳಿ ಹಣವಿಲ್ಲ ಎಂದು ತಿರುಗೇಟು ನೀಡಿದರು. ಈ ಸಂದರ್ಭ ಮಾತಿಗೆ ಮಾತು ಬೆಳೆದು ಗದ್ದಲ ನಿರ್ಮಾಣವಾಯಿತು.

ಎಂಎಲ್‌ಎ ಹೇಳಿಕೆ, ಮತ್ತೆ ಗದ್ದಲ

ಈ ಸಂದರ್ಭ ಮಧ್ಯ ಪ್ರವೇಶಿಸಿ ಮಾತನಾಡಿದ ಶಾಸಕ ಎಸ್‌.ಎನ್.ಚನ್ನಬಸಪ್ಪ, ಹಿಂದೂ ಸಮಾಜದ ಮೇಲೆ ದಾಳಿ ಮಾಡಿದವರಿಗೆ ಪರಿಹಾರ ನೀಡಬಾರದು. ಹಿಂದೂಗಳ ಮನೆಗಳನ್ನು ಮಾತ್ರ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ದಸರಾ ಆಚರಣೆಗೆ ಸರ್ಕಾರ ಪರಿಹಾರ ನೀಡಿಲ್ಲ. ಸರ್ಕಾರ ದಿವಾಳಿಯಾಗಿದೆ. ಹಾಗಾಗಿ ಪಾಲಿಕೆ ವತಿಯಿಂದಲೆ ಪರಿಹಾರ ಘೋಷಣೆ ಮಾಡಿ ಎಂದು ಮೇಯರ್‌ ಅವರನ್ನು ಒತ್ತಾಯಿಸಿದರು. ಇದರಿಂದ ಕಾಂಗ್ರೆಸ್‌ ಸದಸ್ಯರು ಕೆರಳಿದರು. ಈ ವೇಳೆ ಮತ್ತೆ ಮಾತಿನ ಚಕಮಕಿ ನಡೆಯಿತು.

ಕೊನೆಗೆ ಮೇಯರ್‌ ಶಿವಕುಮಾರ್‌ ಅವರು, ಶಾಂತಿನಗರದಲ್ಲಿ ಹಾನಿಗೀಡಾದ ಮನೆಗಳಿಗೆ ಪಾಲಿಕೆ ವತಿಯಿಂದ ಪರಿಹಾರ ನೀಡಲಾಗುವುದು ಎಂದು ಘೋಷಿಸಿದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : November 22, 2023

Leave a Comment