ಶಿವಮೊಗ್ಗದ ಒಡ್ಡಿಕೊಪ್ಪ ಸಮೀಪ ವೀಲಿಂಗ್‌ ಮಾಡಿದ್ದ ವಿಡಿಯೋ ವೈರಲ್‌, ಆಮೇಲೆ ಆಗಿದ್ದೇನು?

SHIVAMOGGA LIVE NEWS | 23 NOVEMBER 2023 (ಈ ಸುದ್ದಿಯನ್ನು ಇನ್ನು 50 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

SHIMOGA : ವೀಲಿಂಗ್‌ ಮಾಡಿರುವ ವೈರಲ್‌ ಫೋಟೊ, ವಿಡಿಯೋಗಳ ಆಧಾರದ ಮೇಲೆ ಬೈಕ್‌ ಪತ್ತೆ ಹಚ್ಚಿ ಮಾಲೀಕನ ವಿರುದ್ಧ 9 ಸಾವಿರ ರೂ. ದಂಡ ವಿಧಿಸಲಾಗಿದೆ. ಒಡ್ಡಿನಕೊಪ್ಪದಿಂದ ಎಂಆರ್‌ಎಸ್‌ವರೆಗೆ ಎನ್‌.ಆರ್.ಪುರ ರಸ್ತೆಯಲ್ಲಿ ಯುವಕನೊಬ್ಬ ವೀಲಿಂಗ್‌ ಮಾಡಿರುವ ವಿಡಿಯೋ ವೈರಲ್‌ ಆಗಿತ್ತು.

ನ್ಯೂ ಮಂಡ್ಲಿಯ ಸಾದಿಕ್‌ ಶೇಕ್‌ (19) ಎಂಬಾತ ಹಿಂಬದಿ ಸವಾರನನ್ನು ಕೂರಿಸಿಕೊಂಡು ವೀಲಿಂಗ್‌ ಮಾಡಿ ಅಪಾಯಕಾರಿ ಸ್ಥಿತಿಯಲ್ಲಿ ವಾಹನ ಚಲಾಯಿಸಿದ್ದ. ವಾಹನದ ನಂಬರ್‌ ಆಧಾರದ ಮೇಲೆ ದ್ವಿಚಕ್ರ ವಾಹನ ಚಾಲನೆ ಮಾಡಿದ್ದ ಸಾದಿಕ್‌ ಶೇಕ್‌ನನ್ನು ಪತ್ತೆ ಹಚ್ಚಲಾಗಿತ್ತು. ಆತನ ಬಳಿ ಡ್ರೈವಿಂಗ್‌ ಲೈಸೆನ್ಸ್‌ ಇರಲಿಲ್ಲ. ಹೆಲ್ಮೆಟ್‌ ಧರಿಸದೆ ಅತಿ ವೇಗವಾಗಿ ವಾಹನ ಚಾಲನೆ ಮಾಡಿದ್ದ. ಈ ಹಿನ್ನೆಲೆ ವಾಹನದ ಮಾಲೀಕ ಸಾದಿಕ್‌ ಶೇಕ್‌ನ ತಂದೆ ಸಲೀಂ ಶೇಕ್‌ಗೆ 9 ಸಾವಿರ ರೂ. ದಂಡ ವಿಧಿಸಲಾಗಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ಟ್ರಾಫಿಕ್‌ ಠಾಣೆ ಇನ್ಸ್‌ಪೆಕ್ಟರ್‌ ಸಂತೋಷ್‌ ಕುಮಾರ್‌, ಪೂರ್ವ ಸಂಚಾರ ಠಾಣೆ ಪಿಎಸ್‌ಐ ನವೀನ್‌ ಕುಮಾರ್ ಮಠಪತಿ, ಸಿಬ್ಬಂದಿ ಶ್ರೀನಿವಾಸ್‌ ವೀಲಿಂಗ್‌ ಮಾಡುತ್ತಿದ್ದ ಯುವಕನನ್ನು ಪತ್ತೆ ಹಚ್ಚಿ ದಂಡ ವಿಧಿಸಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಸ್ವಲ್ಪ ಯಾಮಾರಿದರೂ ಜನರಿಗೆ ಕರೆಂಟ್‌ ಶಾಕ್‌ ಪಕ್ಕಾ, ಬೆಂಗಳೂರು ಘಟನೆಯಿಂದ ಎಚ್ಚೆತ್ತುಕೊಳ್ಳುತ್ತ ಆಡಳಿತ?

JOB NEWS

Jnanasudha Institutions Jobs
ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Leave a Comment