ದೀವರ ಸಾಂಸ್ಕೃತಿಕ ವೈಭವ, ಮೂವರಿಗೆ ಪ್ರಶಸ್ತಿ, ದೊಡ್ಡ ಸಮಾವೇಶದ ದಿನಾಂಕ ಪ್ರಕಟಿಸಿದ ಮಿನಿಸ್ಟರ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 27 NOVEMBER 2023

SHIMOGA : ಧೀರ ದೀವರ ಬಳಗ, ಹಳೆಪೈಕ ದೀವರ (deevara) ಸಂಸ್ಕೃತಿ ಸಂವಾದ ಬಳಗದ ವತಿಯಿಂದ ಈಡಿಗ ಸಮುದಾಯ ಭವನದಲ್ಲಿ ದೀವರ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾರಗನಜಡ್ಡು ಶ್ರೀಕ್ಷೇತ್ರ ಕಾರ್ತಿಕೇಯ ಪೀಠದ ಶ್ರೀ ಯೋಗೇಂದ್ರ ಅವಧೂತ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು.

ಯಾರೆಲ್ಲ ಏನೇನು ಹೇಳಿದರು?

ದೀವರ ಸಾಂಸ್ಕೃತಿಕ ವೈಭವವು ದೊಡ್ಡ ಶಕ್ತಿಯಾಗಿದೆ. ಆದರೆ ಈ ವೈಭವ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಹರಿದು ಹೋಗುತ್ತಿದೆ. ನಮ್ಮ ಸಂಸ್ಕೃತಿ ಉಳಿಸಲು ಎಲ್ಲರು ಒಟ್ಟಾಗಬೇಕಿದೆ.ಶ್ರೀ ಯೋಗೇಂದ್ರ ಅವಧೂತ, ಶ್ರೀ ‍ಕ್ಷೇತ್ರ ಕಾರ್ತಿಕೇಯ ಪೀಠ

ದೀವರ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಧಾರೆ ಎರೆಯುವ ಕೆಲಸ ಆಗಬೇಕಿದೆ. ಮಕ್ಕಳಿಗೆ ನಮ್ಮ ಸಂಸ್ಕೃತಿ ಆಚಾರ, ವಿಚಾರಗಳನ್ನು ತಿಳಿಸಬೇಕಿದೆ. ಅನಂತ ಕಾಲದವರೆಗೆ ನಮ್ಮ ಸಂಸ್ಕೃತಿ ಉಳಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕಿದೆ.ಶ್ರೀ ರೇಣುಕಾನಂದ ಸ್ವಾಮೀಜಿ, ನಿಟ್ಟೂರು ನಾರಾಯಣಗುರು ಸಂಸ್ಥಾನ

ದೀವರು ಎಂದರೆ ಮಲೆನಾಡ ಸಂಸ್ಕೃತಿಯ ಬುಡಕಟ್ಟು. ಈ ಬಳಗ ಜನರ ಮನದಲ್ಲಿ ನೋಂದಣಿ ಆಗಿದೆ. ಹಳ್ಳಿಯ ರೈತನಿಂದ ಹಿಡಿದು ಗಡಿಯಲ್ಲಿನ ಯೋಧ ಕೂಡ ಈ ಕಾರ್ಯಕ್ರಮಕ್ಕೆ ಬೆಂಬಲ ನೀಡಿದ್ದಾರೆ. ಸಂಸ್ಕೃತಿ, ಕಲೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಕೆಲಸ ಆಗಬೇಕಿದೆ.ನಾಗರಾಜ ನೇರಿಗೆ, ದೀವರ ಸಾಂಸ್ಕೃತಿಕ ವೈಭವ ಸಂಚಾಲಕ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿಸೆಂಬರ್‌ 10ರಂದು ಆರ್ಯ ಈಡಿಗ ಹಾಗೂ ಉಪ ಪಂಗಡಗಳ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾವೇಶದ ಅಧ್ಯಕ್ಷತೆ ವಹಿಸಿ, ಅಹವಾಲು ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆ ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ನವೆಂಬರ್‌ 30ರಂದು ಪೂರ್ವಭಾವಿ ಸಭೆ ಆಯೋಜಿಸಲಾಗಿದೆ.ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ

ಮೂವರಿಗೆ ಧೀರ ದೀವರ ಪ್ರಶಸ್ತಿ

ಕಾರ್ಯಕ್ರಮದಲ್ಲಿ ದೀವರ ಸಾಂಸ್ಕತಿಕ ವೈಭವದಲ್ಲಿ ಬೂಮಣ್ಣಿ ಬುಟ್ಟಿ, ಹಸೆ ಚಿತ್ತಾರ ಸ್ಪರ್ಧೆಯಲ್ಲಿ 98 ಕಲಾವಿದರು ಭಾಗವಹಿಸಿದ್ದರು. ಬುಟ್ಟಿ ಚಿತ್ತಾರ ವಿಭಾಗದಲ್ಲಿ ಅಮೃತ ವರ್ಷಿಣಿ ಚಂದ್ರಗುತ್ತಿ ಪ್ರಥಮ, ನೀಲಾವತಿ ಕುಗ್ವೆ ದ್ವಿತೀಯ, ಕಾವ್ಯ ಆಲಹಳ್ಳಿ ತೃತೀಯ ಬಹುಮಾನ ಪಡೆದಿದ್ದಾರೆ. ಹಸೆ ಚಿತ್ತಾರ ವಿಭಾಗದಲ್ಲಿ ಸ್ವಾತಿ ಪುನೀತ್ ಹೆಬ್ಬೂರು ಪ್ರಥಮ, ರಚನಾ ಸಾಗರ್ ದ್ವಿತೀಯ, ರಂಜಿತಾ ಮರಸ ತೃತೀಯ ಬಹುಮಾನ ಪಡೆದರು.

ಇದನ್ನೂ ಓದಿ – ಶಿವಮೊಗ್ಗದ ಸಾಗರ ರಸ್ತೆಯಲ್ಲಿ ಸರಣಿ ಅಪಘಾತ, ಡಿವೈಡರ್ ಹತ್ತಿದ ಓಮ್ನಿ ಕಾರು

ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಎಸ್. ರಾಮಪ್ಪ, ಹಿರಿಯ ಹಸೆ ಚಿತ್ತಾರ ಕಲಾವಿದೆ ಲಕ್ಷ್ಮಮ್ಮ ಗಡೇಮನೆ, ಅಂತರಾಷ್ಟ್ರೀಯ ಡೊಳ್ಳುಕುಣಿತ ಕಲಾವಿದ ಬಿ.ಟಾಕಪ್ಪ ಕಣ್ಣೂರು ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧುಬಂಗಾರಪ್ಪ ಅವರು ‘ಧೀರ ದೀವರು’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ , ಸುರೇಶ್ ಕೆ. ಬಾಳೆಗುಂಡಿ, ಜಿ.ಡಿ. ನಾರಾಯಣಪ್ಪ, ಕೆಎಎಸ್ ಅಧಿಕಾರಿಗಳಾದ ಕೆ. ಚೆನ್ನಪ್ಪ, ಹೆಚ್.ಕೆ. ಕೃಷ್ಣಮೂರ್ತಿ, ಶ್ರೀಧರ್ ಆರ್. ಹುಲ್ತಿಕೊಪ್ಪ, ಮೋಹನ್ ಚಂದ್ರಗುತ್ತಿ, ರಾಜನಂದಿನಿ ಕಾಗೋಡು, ಗೀತಾಂಜಲಿ ದತ್ತಾತ್ರೇಯ, ಅಣ್ಣಪ್ಪ ಮಳಿಮಠ, ರವಿರಾಜ್‌ ಸಾಗರ್ ಇದ್ದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment