ಕುವೆಂಪು ವಿವಿಯಲ್ಲಿ ಕೌನ್ಸೆಲಿಂಗ್‌, ಮೊದಲ ದಿನ ಶೇ.85ರಷ್ಟು ಮೆರಿಟ್‌ ಸೀಟ್‌ ಭರ್ತಿ, ಹೇಗಿತ್ತು ವ್ಯವಸ್ಥೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 27 NOVEMBER 2023

SHANKARAGHATTA : ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಪ್ರವೇಶ ಕೌನ್ಸೆಲಿಂಗ್‌ ಪ್ರಕ್ರಿಯೆ ಆರಂಭವಾಗಿದೆ. ಮೊದಲ ದಿನ ಮೆರಿಟ್‌ ಸೀಟ್‌ಗಳನ್ನು ಭರ್ತಿ ಮಾಡಿಕೊಳ್ಳಲಾಯಿತು. 33 ಸ್ನಾತಕೋತ್ತರ ವಿಭಾಗಗಳಲ್ಲಿ ಶೇ.85ರಷ್ಟು ಮೆರಿಟ್‌ ಸೀಟುಗಳು ಭರ್ತಿಯಾಗಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮೂರು ದಿನದ ಕೌನ್ಸೆಲಿಂಗ್‌

ವಿಶ್ವವಿದ್ಯಾಲಯದ ಮುಖ್ಯ ಆವರಣ, ಕಡೂರು ಪಿ.ಜಿ.ಕೇಂದ್ರ, ಚಿಕ್ಕಮಗಳೂರು ಪಿಜಿ ಕೇಂದ್ರ ಮತ್ತು 20ಕ್ಕೂ ಹೆಚ್ಚು ಸ್ನಾತಕೋತ್ತರ ಕಾಲೇಜುಗಳ ಎಲ್ಲಾ ವಿಭಾಗಗಳಿಗೆ ನವೆಂಬರ್ 27, 28 ಮತ್ತು 29ರಂದು ಪ್ರವೇಶಾತಿ ಕೌನ್ಸೆಲಿಂಗ್ ಹಮ್ಮಿಕೊಳ್ಳಲಾಗಿದೆ. ಮೆರಿಟ್‌ ಸೀಟ್‌ಗಳ ಕೌನ್ಸೆಲಿಂಗ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ನ.28 ಹಾಗೂ 29ರಂದು ಪೇಮೆಂಟ್ ಮತ್ತು ಇತರೆ ಕೋಟಾಗಳ ಸೀಟುಗಳಿಗೆ ಪ್ರವೇಶಾತಿ ನಡೆಯಲಿದೆ.

ಇದನ್ನೂ ಓದಿ – 2024ರ ಸರ್ಕಾರಿ ರಜೆಗಳ ಪಟ್ಟಿ ಪ್ರಕಟಿಸಿದ ಸರ್ಕಾರ, ಎಷ್ಟು ರಜೆಗಳಿವೆ?

ಇವತ್ತು ಆಫ್‌ಲೈನ್‌ನಲ್ಲಿ ಶುಲ್ಕ ಭರಿಸುವವರ ಸಂಖ್ಯೆ ಹೆಚ್ಚಾಗಿತ್ತು. ಹಾಗಾಗಿ ಬ್ಯಾಂಕ್‌ನಲ್ಲಿ ಹೆಚ್ಚುವರಿ ಮೂರು ಕೌಂಟರ್‌ ತೆರೆಯಲಾಗಿತ್ತು. ಬಸವ ಸಭಾ ಭವನ ಹಾಗೂ ಜೀವ ವಿಜ್ಞಾನ ಸಮುಚ್ಛಯದಲ್ಲಿಯು ಶುಲ್ಕ ಭರಿಸುವ ಕೌಂಟರ್‌ಗಳನ್ನು ತೆರೆಯಲಾಗಿತ್ತು.

Kuvmepu University's PG courses 2023-24 academic year admission

Kuvmepu University's PG courses 2023-24 academic year admission

Kuvmepu University's PG courses 2023-24 academic year admission

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment