ವರದಿ ಜಾರಿಯಾಗದಿದ್ದರೆ ಹೋರಾಟ, ನಾರಾಯಣ ಗುರು ವಿಚಾರ ವೇದಿಕೆ ಎಚ್ಚರಿಕೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 28 NOVEMBER 2023

SHIMOGA : ಕಾಂತರಾಜ್ ಆಯೋಗದ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯನ್ನು ಸರ್ಕಾರ ತಕ್ಷಣ ಜಾರಿಗೊಳಿಸಬೇಕು. ಇಲ್ಲವಾದಲ್ಲಿ ನಾರಾಯಣ ಗುರು (narayana guru) ವಿಚಾರ ವೇದಿಕೆ ವತಿಯಿಂದ ಹೋರಾಟ ನಡೆಸಲಾಗುತ್ತದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಪ್ರವೀಣ್ ಹಿರೇಇಡಗೋಡು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರೇಇಡಗೋಡು, ವರದಿಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವಿರೋಧ ವ್ಯಕ್ತಪಡಿಸುತ್ತಿವೆ. ಕಾಂತರಾಜ್ ಆಯೋಗದ ವರದಿಯನ್ನು ಸರ್ಕಾರ ಸ್ವೀಕರಿಸಬೇಕು. ವೈಜ್ಞಾನಿಕ ವರದಿ ಜಾರಿಯಾಗದೆ ಇದ್ದಲ್ಲಿ ಹಿಂದುಳಿದ ಜಾತಿಗಳಿಗೆ ಅನ್ಯಾಯವಾಗಲಿದೆ ಎಂದರು.

ಇದನ್ನೂ ಓದಿ- ‘ಒಂದು SCREEN SHOT ವಾಟ್ಸಪ್‌ ಮಾಡಿದರೆ 250 ರೂ. ಸಿಗುತ್ತೆ’, ನಂಬಿದ ಶಿವಮೊಗ್ಗದ ಯುವಕನಿಗೆ ಆಗಿದ್ದೇನು?

ಪ್ರಮುಖರಾದ ಸುಧಾಕರ್ ಶೆಟ್ಟಿಹಳ್ಳಿ, ಉಮೇಶ್, ಪುನಿತ್ ಬೆಳ್ಳೂರು, ಮೋಹನ್, ಲಕ್ಷ್ಮಿಕಾಂತ ಚಿಮಣೂರು, ಮಂಜುನಾಥ ಪುರದಾಳ್ ಸೇರಿದಂತೆ ಹಲವರು ಇದ್ದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment