ರೈತರ ಮಹಾ ಅಧಿವೇಶನದ ದಿನಾಂಕ ಪ್ರಕಟ, ಪೋಸ್ಟರ್‌ ರಿಲೀಸ್‌, ಏನೆಲ್ಲೆ ಚರ್ಚೆ ಆಗಲಿದೆ?

SHIVAMOGGA LIVE NEWS | 8 DECEMBER 2023

SHIMOGA : ಸಂಯುಕ್ತ ಕಿಸಾನ್ ಮೋರ್ಚಾ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ರಾಜ್ಯ ಸಂಘದ ವತಿಯಿಂದ ಬೆಂಗಳೂರಿನ ಫ್ರೀಡಂ ‍ಪಾರ್ಕ್‌ನಲ್ಲಿ (freedom park) ಡಿ.23ರಂದು ಬೆಳಿಗ್ಗೆ 11 ಗಂಟೆಗೆ ರೈತರ ಮಹಾ ಅಧಿವೇಶನ (session)  ಹಮ್ಮಿಕೊಳ್ಳಲಾಗಿದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾ‍ಧ್ಯಕ್ಷ ಕುರಬೂರು ಶಾಂತಕುಮಾರ್ ಹೇಳಿದರು.

ಇದನ್ನೂ ಓದಿ- ಶಿವಮೊಗ್ಗದಲ್ಲಿ ಡಿಎಸ್‌ಎಸ್‌ ಸಮಾವೇಶ, ಸಂವಿಧಾನದ ಕುರಿತು ಯಾರೆಲ್ಲ ಏನೇನು ಹೇಳಿದರು? ಇಲ್ಲಿದೆ ಡಿಟೇಲ್ಸ್‌

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುರಬೂರು ಶಾಂತಕುಮಾರ್‌, ರಾಜ್ಯದಲ್ಲಿ ಬರದ ಛಾಯೆ ಇದೆ. ಎಲ್ಲಾ ರೈತರ ಕೃಷಿ ಸಾಲ ಮನ್ನ ಮಾಡಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ, ಕಾನೂನು ಜಾರಿ ಆಗಬೇಕು. ಕಬ್ಬಿನ ದರ ಟನ್‌ಗೆ ಕನಿಷ್ಠ 4 ಸಾವಿರ ರೂ. ನಿಗದಿಪಡಿಸಬೇಕು ಸೇರಿದಂತೆ ವಿವಿಧ ಹಕ್ಕೊತ್ತಾಯವನ್ನು ಅಧಿವೇಶನದಲ್ಲಿ (session)  ಪ್ರಸ್ತಾಪಿಸಲಾಗುತ್ತದೆ ಎಂದು ತಿಳಿಸಿದರು.

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : December 8, 2023 at 12:20 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಡಿಸೆಂಬರ್ 8, 2023

Leave a Comment