ರೈಲ್ವೆ ಸುದ್ದಿ: ತಿಪಟೂರು ನಿಲ್ದಾಣದಲ್ಲಿ ಜನಶತಾಬ್ದಿ (jan shatabdi) ರೈಲುಗಳ ನಿಲುಗಡೆಯನ್ನು ಮುಂದುವರಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ಇದರೊಂದಿಗೆ ಬೇಸಿಗೆಯ ದಟ್ಟಣೆ ನಿರ್ವಹಿಸಲು ಹೈದರಾಬಾದ್–ಬೆಳಗಾವಿ ನಡುವಿನ ವಿಶೇಷ ರೈಲು ಸೇವೆಯನ್ನು ವಿಸ್ತರಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.
ತಿಪಟೂರಿನಲ್ಲಿ ಜನಶತಾಬ್ದಿ ನಿಲುಗಡೆ
ತಿಪಟೂರು ನಿಲ್ದಾಣದಲ್ಲಿ ಜನಶತಾಬ್ದಿ ರೈಲುಗಳ ನಿಲುಗಡೆಯು 2026ರ ಮೇ 16ರಿಂದ ಮುಂದಿನ ಆದೇಶದವರೆಗೆ ಮುಂದುವರಿಯಲಿದೆ. ಪ್ರಸ್ತುತ ಇರುವ ಸಮಯದ ವೇಳಾಪಟ್ಟಿಯಂತೆಯೇ ಈ ರೈಲುಗಳು ನಿಲ್ದಾಣದಲ್ಲಿ ನಿಲ್ಲಲಿವೆ ಎಂದು ತಿಳಿಸಲಾಗಿದೆ.

- ರೈಲು ಸಂಖ್ಯೆ 12079/12080: ಕೆಎಸ್ಆರ್ ಬೆಂಗಳೂರು–ಎಸ್ಎಸ್ಎಸ್ ಹುಬ್ಬಳ್ಳಿ–ಕೆಎಸ್ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್.
- ರೈಲು ಸಂಖ್ಯೆ 12089/12090: ಕೆಎಸ್ಆರ್ ಬೆಂಗಳೂರು–ಶಿವಮೊಗ್ಗ ಟೌನ್–ಕೆಎಸ್ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್.

ಹೈದರಾಬಾದ್–ಬೆಳಗಾವಿ ವಿಶೇಷ ರೈಲು
ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ಹೈದರಾಬಾದ್–ಬೆಳಗಾವಿ ಸಾಪ್ತಾಹಿಕ ವಿಶೇಷ ರೈಲಿನ (07043/07044) ಸೇವೆ ಒಂದು ಹೆಚ್ಚುವರಿ ಟ್ರಿಪ್‌ಗೆ ವಿಸ್ತರಿಸಿದೆ.
- ಹೈದರಾಬಾದ್–ಬೆಳಗಾವಿ (07043): ಈ ಹಿಂದೆ ಏಪ್ರಿಲ್ 30ಕ್ಕೆ ಕೊನೆಗೊಳ್ಳಬೇಕಿದ್ದ ಈ ರೈಲು, ಈಗ ಮೇ 7ರಂದು ಹೆಚ್ಚುವರಿಯಾಗಿ ಒಂದು ಸಂಚಾರ ನಡೆಸಲಿದೆ.
- ಬೆಳಗಾವಿ–ಹೈದರಾಬಾದ್ (07044): ಈ ಹಿಂದೆ ಮೇ 1ಕ್ಕೆ ಕೊನೆಗೊಳ್ಳಬೇಕಿದ್ದ ಈ ರೈಲು, ಈಗ ಮೇ 8ರಂದು ಒಂದು ಹೆಚ್ಚುವರಿ ಸಂಚಾರ ನಡೆಸಲಿದೆ.
ಈ ಸಂಬಂಧ ನೈಋತ್ಯ ರೈಲ್ವೆಯ ಸಿಪಿಆರ್‌ಒ ಡಾ. ಮಂಜುನಾಥ ಕನಮಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಶಿವಮೊಗ್ಗ ವಿಮಾನ ನಿಲ್ದಾಣ ಕೇಂದ್ರಕ್ಕೆ ಹಸ್ತಾಂತರ ಆಗುತ್ತಾ? ಖಾಸಗಿ ನಿರ್ವಾಹಣೆಗೆ ವಹಿಸಲಾಗುತ್ತಾ?
I just like the valuable information you provide in your articles. I’ll bookmark your weblog and test again here regularly. I’m moderately certain I’ll be informed many new stuff proper right here! Best of luck for the following!