ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 8 DECEMBER 2023
SHIMOGA : ಆಸ್ಪತ್ರೆಯಲ್ಲಿ ನೈಟ್ ಶಿಫ್ಟ್ ಕೆಲಸ ಮುಗಿಸಿ ಮರಳಿದಾಗ ಮನೆಯ ಬಾಗಿಲಿನ ಬೀಗ ಮುರಿದು ಚಿನ್ನಾಭರಣ, ನಗದು ಕಳ್ಳತನವಾಗಿದೆ (Theft). ಶಿವಮೊಗ್ಗ ತಾಲೂಕು ಮುದುವಾಲ ಗ್ರಾಮದ ಕುಸುಮಾ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ.
ಕುಸುಮಾ ಅವರು ಮಲ್ನಾಡ್ ಲೈಫ್ ಲೈನ್ ಆಸ್ಪತ್ರೆಯಲ್ಲಿ ಹೌಸ್ ಕೀಪಿಂಗ್ (house keeping) ಕೆಲಸ ಮಾಡುತ್ತಿದ್ದಾರೆ. ಡಿ.2ರಂದು ರಾತ್ರಿ ನೈಟ್ ಶಿಫ್ಟ್ ಕೆಲಸಕ್ಕೆ ತೆರಳಿದ್ದರು. ಮರುದಿನ ಬೆಳಗ್ಗೆ ಮನೆ ಬಂದಾಗ ಬೀಗ ಒಡೆಯಲಾಗಿತ್ತು. ಒಳಗೆ ಹೋಗಿ ಪರಿಶೀಲಿಸಿದಾಗ ಬೀರುವಿನ ಬೀಗ ಮುರಿದು 10 ಸಾವಿರ ರೂ. ನಗದು ಸೇರಿದಂತೆ 73 ಸಾವಿರ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕಳವು (Theft)ಮಾಡಲಾಗಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ- ಭದ್ರಾವತಿಯಲ್ಲಿ ಮದ್ಯ ಸೇವಿಸಿದ್ದವನಿಗೆ 11 ಸಾವಿರ ರೂ. ದಂಡ, ಕಾರಣವೇನು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422