ಆರ್ಯ ಈಡಿಗ ಸಂಘದ ಅಮೃತ ಮಹೋತ್ಸವ, ಜಾಗೃತಿ ಸಮಾವೇಶ, ಉದ್ಘಾಟನೆಗೆ ಸಿಎಂ, ಡಿಸಿಎಂ

SHIVAMOGGA LIVE NEWS | 8 DECEMBER 2023

SHIMOGA : ರಾಜ್ಯ ಪ್ರದೇಶ ಆರ್ಯ ಈಡಿಗ (Ediga) ಸಂಘದ ಅಮೃತ ಮಹೋತ್ಸವ ಹಾಗೂ ಜಾಗೃತಿ ಸಮಾವೇಶ ಡಿ.10ರಂದು ಬೆಳಿಗ್ಗೆ 11ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ ತಿಳಿಸಿದರು‌.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಧರ್‌ ಹುಲ್ತಿಕೊಪ್ಪ, ಸಂಘಕ್ಕೆ 75 ವರ್ಷ ತುಂಬಿದ ಹಿನ್ನೆಲೆ ಸಮಾಜದವರ ಅಹವಾಲು, ಸಲಹೆ, ಸೂಚನೆ ಆಲಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸುವರು‌. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಟ ಶಿವರಾಜ್ ಕುಮಾರ್, ಈಡಿಗ ಸಂಸ್ಥಾನ ಮಠದ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ  ಭಾಗವಹಿಸುವರು‌ ಎಂದರು.

ಇದನ್ನೂ ಓದಿ- ಶಿವಮೊಗ್ಗದಲ್ಲಿ ಶಾಲೆ ಜಾಗ ಪರಿಶೀಲನೆ ಕಾರ್ಯಕ್ರಮದ ಬಳಿಕ ವ್ಯಕ್ತಿ ಮೇಲೆ ಹಲ್ಲೆ

ಸಮಾವೇಶದಲ್ಲಿ ಶರಾವತಿ, ಚಕ್ರ, ವರಾಹಿ, ಸಾವೇಹಕ್ಲು ಮುಳುಗಡೆ ಸಂತ್ರಸ್ತರ ಸಮಸ್ಯೆ, ಬಗರ್‌ಹುಕುಂ ರೈತರಿಗೆ ಹಕ್ಕುಪತ್ರ ವಿತರಣೆ, ಈಡಿಗ (Ediga) ಅಭಿವೃದ್ಧಿ ನಿಗಮಕ್ಕೆ ಅನುದಾನ, ಸಿಗಂದೂರು ದೇವಸ್ಥಾನದ ಭೂಮಿ ಸಮಸ್ಯೆ, ಸೋಗಾನೆ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಹೆಸರಿಡುವ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಪ್ರಮುಖರಾದ ಕಲಗೋಡು ರತ್ನಾಕರ್‌, ಜಿ. ಮಂಜುನಾಥ್, ಪ್ರವೀಣ್ ಹೀರೆಇಡಗೋಡು, ಹೊನ್ನಪ್ಪ, ಎಂ.ಬಿ. ರಾಜಪ್ಪ, ರಾಜಪ್ಪ ತೇಕ್ಲೆ, ಗಣಪತಿ ಹುಲ್ತಿಕೊಪ್ಪ, ರಘುಪತಿ, ರವಿ, ಧರ್ಮರಾಜ್ ಇದ್ದರು.

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : December 8, 2023 at 1:00 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಡಿಸೆಂಬರ್ 8, 2023

Leave a Comment