SHIVAMOGGA LIVE NEWS | 11 DECEMBER 2023
ಪೊಲೀಸ್ ಠಾಣೆಯಲ್ಲಿ ರಕ್ತದಾನ ಶಿಬಿರ
HOLEHONNURU : ಪೊಲೀಸ್ ಇಲಾಖೆ ಮತ್ತು ಮೆಗ್ಗಾನ್ ಆಸ್ಪತ್ರೆ ರಕ್ತ ನಿಧಿ ಸಹಯೋಗದಲ್ಲಿ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಹೊಳೆಹೊನ್ನೂರು ಠಾಣೆ ಸಿಬ್ಬಂದಿ ಮತ್ತು ಸಾರ್ವಜನಿಕರು ರಕ್ತದಾನ ಮಾಡಿದರು. ಶಿಬಿರದಲ್ಲಿ 47 ಮಂದಿ ರಕ್ತದಾನ ಮಾಡಿದ್ದಾರೆ.
![]() |
ಶಿಕಾರಿಪುರದಲ್ಲಿ ಕಾಡಾನೆ ಪ್ರತ್ಯಕ್ಷ
SHIKARIPURA : ತಾಲೂಕಿನ ಯರೆಕೊಪ್ಪ, ಗೊಬ್ಬರದ ಹೊಂಡ, ಕಟ್ಟಿಗೆಹಳ್ಳ ಸುತ್ತಮುತ್ತ ಅಂಬ್ಲಿಗೊಳ್ಳ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಾಡಾನೆ ಕಾಣಿಸಿಕೊಂಡಿದೆ ಎನ್ನಲಾಗಿದೆ. ಇದರಿಂದ ಸುತ್ತಮುತ್ತಲ ರೈತರು ಆತಂಕಕ್ಕೀಡಾಗಿದಾರೆ. ಈ ಕುರಿತು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ಗ್ರಾಮಗಳಲ್ಲಿ ಪರಿಶೀಲನೆ ನಡೆಸಿದರು. ಅಲ್ಲದೆ ಸ್ಥಳೀಯರಿಗೆ ಕಾಡಾನೆ ಕುರಿತು ಜಾಗೃತಿ ಮೂಡಿಸಿದ್ದಾರೆ.
ಶಿವಮೊಗ್ಗದಲ್ಲಿ ರಾಗ ಅನುರಾಗ
SHIMOGA : ಅನಿಕೇತನ ಸೇವಾ ಟ್ರಸ್ಟ್ ವತಿಯಿಂದ ಕುವೆಂಪು ರಂಗಮಂದಿರದಲ್ಲಿ ರಾಗ ಅನುರಾಗ ಚಿತ್ರಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಸ್ತ್ರೀಯ ಸಂಗೀತದ ರಾಗ ಅಧಾರಿತ ಕಾರ್ಯಕ್ರಮದಲ್ಲಿ ಹಳೆಯ ಚಿತ್ರಗೀತೆಗಳನ್ನು ಹಾಡಲಾಯಿತು. ರಾಗಗಳ ಕುರಿತು ಸಭೀಕರಿಗೆ ಮಾಹಿತಿ ನೀಡಲಾಯಿತು. ಅನಿಕೇತನಾ ಸೇವಾ ಟ್ರಸ್ಟ್ನ ರಮೇಶ್ ಬಾಬು ಜಾಧವ್ ಉಪಸ್ಥಿತರಿದ್ದರು. ವಿನಯ್ ಶಿವಮೊಗ್ಗ ರಾಗಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ವಿಡಿಯೋ ಇಲ್ಲಿದೆ.
View this post on Instagram
ಇದನ್ನೂ ಓದಿ – ನಟಿ ಮಾಳವಿಕ ಅವಿನಾಶ್ಗೆ ಎದುರಾಗಿದ್ದ ಸಂಕಷ್ಟ ನಾಳೆ ನಿಮ್ಮನ್ನೂ ಕಾಡಬಹುದು, ಏನದು? ಪಾರಾಗೋದು ಹೇಗೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200