ಸದ್ಯದಲ್ಲೆ ವಾಟ್ಸಪ್‌ನಲ್ಲಿ ರಿಲೀಸ್‌ ಆಗಲಿದೆ 3 ಹೊಸ ಫೀಚರ್‌, ಯಾವುದದು? ಏನದರ ಪ್ರಯೋಜನ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
SHIVAMOGGA LIVE NEWS | 18 DECEMBER 2023
➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

WHATSAPP NEWS | ಬಳಕೆದಾರರ ಅನುಕೂಲಕ್ಕಾಗಿ ವಾಟ್ಸಪ್‌ ಮೂರು ಹೊಸ ಫೀಚರ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಈ ಮೂರು ಆಪ್ಷನ್‌ಗಳು ಸದ್ಯ ಟೆಸ್ಟಿಂಗ್‌ ಹಂತದಲ್ಲಿವೆ.

ಯಾವೆಲ್ಲ ಫೀಚರ್‌ ರಿಲೀಸ್‌ ಆಗುತ್ತಿದೆ?

ಫೀಚರ್‌ 1 : ಚಾನಲ್‌ ಅಲರ್ಟ್‌

ವಾಟ್ಸಪ್‌ ಚಾನಲ್‌ಗಳ ಈಗಾಗಲೆ ಫೇಮಸ್‌ ಆಗಿವೆ. ಆದರೆ ಚಾನಲ್‌ ಓನರ್‌ಗಳು ವಾಟ್ಸಪ್‌ನ ಗೈಡ್‌ಲೈನ್‌ ಧಿಕ್ಕರಿಸಿದರೆ ಎಚ್ಚರಿಸುವ ವ್ಯವಸ್ಥೆ ಇರಲಿಲ್ಲ. ಈಗ ಚಾನಲ್‌ ಅಲರ್ಟ್‌ ಮೂಲಕ ವಾಟ್ಸಪ್‌ ಚಾನಲ್‌ ಓನರ್‌ಗಳಿಗೆ ಎಚ್ಚರಿಕೆ ನೀಡಲು ಯೋಜಿಸಲಾಗಿದೆ. ಈ ಮೂಲಕ ವಾಟ್ಸಪ್‌ ಕಮ್ಯೂನಿಟಿ ಸ್ಟಾಂಡರ್ಡ್‌ ಗೈಡ್‌ಲೈನ್‌ ಪಾಲಿಸಿಕೊಂಡು ಚಾನಲ್‌ ನಡೆಸಲು ಅನುಕೂಲವಾಗಲಿದೆ.

ಫೀಚರ್ 2 : ಹಿಡನ್‌ ನ್ಯಾವಿಗೇಷನ್‌ ಬಾರ್‌

ವಾಟ್ಸಪ್‌ ಸ್ಕ್ರಿನ್‌ನ ಬಲ ಭಾಗದಲ್ಲಿ ಈವರೆಗೂ ನ್ಯಾವಿಗೇಷನ್‌ ಬಾರ್‌ ಕಾಣುತಿತ್ತು. ಇನ್ಮುಂದೆ ಈ ಅದು ಮಾಯವಾಗಲಿದೆ. ಹಾಗಾಗಿ ಚಾಟ್ಸ್‌, ಕಮ್ಯೂನಿಟಿ ಗ್ರೂಪ್‌, ಚಾನಲ್‌ ಅಪ್‌ಡೇಟ್‌ ಎಲ್ಲವು ಇನ್ನಷ್ಟು ಬೋಲ್ಡ್‌ ಮತ್ತು ದೊಡ್ಡದಾಗಿ ಕಾಣಲಿದೆ.

ಫೀಚರ್‌ 3 : ಮೆಸೇಜ್‌ ಹುಡುಕಲು ದಿನಾಂಕ

ಹಳೆಯ ಅಥವಾ ಪ್ರತ್ಯೇಕ ಮೆಸೇಜ್‌ ಹುಡುಕಲು ಇನ್ಮುಂದೆ ಸ್ಕ್ರಾಲ್‌ ಮಾಡಿಕೊಂಡು ಕಷ್ಟಪಡಬೇಕಿಲ್ಲ. ವಾಟ್ಸಪ್‌ ಚಾಟ್‌ಗೆ ಹೋಗಿ ದಿನಾಂಕ ನಮೂದಿಸಿದರೆ ಸಾಕು. ಆ ದಿನದ ಎಲ್ಲ ಮೆಸೇಜ್‌ಗಳು ಪ್ರತ್ಯಕ್ಷವಾಗಲಿದೆ. ಸದ್ಯ ಈ ಮೂರು ಫೀಚರ್‌ಗಳು ಟೆಸ್ಟಿಂಗ್‌ ಹಂತದಲ್ಲಿದ್ದು ಸದ್ಯದಲ್ಲೇ ವಾಟ್ಸಪ್‌ ಅಪ್‌ಡೇಟ್‌ನಲ್ಲಿ ಕಾಣಿಸಲಿದೆ.

ಇದನ್ನೂ ಓದಿ – ಇನ್ಮುಂದೆ ವಾಟ್ಸಪ್‌ನಲ್ಲಿ VOICE MESSAGEಗೂ ಬರಲಿದೆ VIEW ONCE ಆಪ್ಷನ್‌, ಏನಿದು? ಬಳಸೋದು ಹೇಗೆ?

Leave a Comment