ಶಿವಮೊಗ್ಗದಲ್ಲಿ ಅಮಿತ್‌ ಷಾ, ಪ್ರತಾಪ್‌ ಸಿಂಹ ಫೋಟೊಗೆ ಬೆಂಕಿ ಹಚ್ಚಿ ಆಕ್ರೋಶ, ಪ್ರಧಾನಿ ರಾಜೀನಾಮೆಗೆ ಒತ್ತಾಯ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Shivamogga-Live-Number-1-Website

SHIVAMOGGA LIVE NEWS | 19 DECEMBER 2023

SHIMOGA : ಸಂಸತ್‌ನಲ್ಲಿ ಸ್ಮೋಕ್‌ ಬಾಂಬ್‌ ಘಟನೆಗೆ ಸಂಬಂಧಿಸಿದಂತೆ ಸಂಸದ ಪ್ರತಾಪ್‌ ಸಿಂಹ ಅವರನ್ನು ಬಂಧಿಸಬೇಕು. ಘಟನೆ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‌ ಕಾರ್ಯಕರ್ತರು ಆಗ್ರಹಿಸಿದರು.

ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಸ್ಮೋಕ್‌ ಬಾಂಬ್‌ ಪ್ರಕರಣದ ಆರೋಪಿ ಮನೋರಂಜನ್‌ಗೆ ಸಂಸದ ಪ್ರತಾಪ್‌ ಸಿಂಹ ಪಾಸ್‌ ನೀಡಿದ್ದರು. ಈ ಹಿನ್ನೆಲೆ ಅವರನ್ನು ಬಂಧಿಸಬೇಕು. ಪ್ರಕರಣದ ಕುರಿತು ನ್ಯಾಯಾಂಗ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಅಮಿತ್‌ ಷಾ, ಪ್ರತಾಪ್‌ ಸಿಂಹ ಭಾವಚಿತ್ರಕ್ಕೆ ಬೆಂಕಿ

ಇದೇ ವೇಳೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಕೇಂದ್ರ ಗೃಹ ಸಚಿವ ಅಮಿತ್‌ ಷಾ, ಸಂಸದ ಪ್ರತಾಪ್‌ ಸಿಂಹ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಸಂಸತ್‌ನಲ್ಲಿನ ದಾಳಿ ಅತ್ಯಂತ ದುರದುಷ್ಟಕರ. ದಾಳಿಯ ರೂವಾರಿ ಸಂಸದ ಪ್ರತಾಪ್ ಸಿಂಹ ಅವರನ್ನು ವಜಾ ಮಾಡಿ, ಬಂಧಿಸಬೇಕು. ಆರೋಪಿಗಳು ಒಂದೂವರೆ ವರ್ಷದಿಂದ ಸಂಸತ್ ದಾಳಿಗೆ ಸಂಚು ರೂಪಿಸಿದ್ದಾರೆ. ದಾಳಿಯ ಹಿಂದೆ ಬಲವಾದ ಕೈ ಇದೆ. ಈ ಹಿನ್ನೆಲೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಯಾಗಬೇಕು. ಘಟನೆಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ನೇರ ಹೊಣೆ ಹೊತ್ತು ರಾಜೀನಾಮೆ ನೀಡಬೇಕು.ಹೆಚ್‌.ಎಸ್.ಸುಂದರೇಶ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ

ಪ್ರತಿಭಟನೆಯಲ್ಲಿ ಪ್ರಮುಖರಾದ ಆರ್‌.ಪ್ರಸನ್ನ ಕುಮಾರ್‌, ಎನ್‌.ರಮೇಶ್‌, ಚಂದ್ರ ಭೂಪಾಲ್‌, ಸೌಗಂಧಿಕ, ಹೆಚ್‌.ಪಿ.ಗಿರೀಶ್‌, ಇಸ್ಮಾಯಿಲ್‌ ಖಾನ್‌, ಕೆ.ರಂಗನಾಥ್‌, ಶಿ.ಜು.ಪಾಶಾ, ಎಂ.ಪ್ರವೀಣ ಕುಮಾರ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

Congress Protest in Shimoga

Congress Protest in Shimoga

Congress Protest in Shimoga

ಇದನ್ನೂ ಓದಿ – ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಗೆ ದಿನಾಂಕ ನಿಗದಿ, ಸಿದ್ಧತೆ ಕುರಿತು ಮಹತ್ವದ ಮೀಟಿಂಗ್

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : December 19, 2023

Leave a Comment