ಶಿವಮೊಗ್ಗ ಜನಶತಾಬ್ದಿ, ತಾಳಗುಪ್ಪ ಎಕ್ಸ್‌ಪ್ರೆಸ್‌ ಸೇರಿ 19 ರೈಲುಗಳಿಗೆ ಹೆಚ್ಚುವರಿ ಬೋಗಿ, ಯಾವ್ಯಾವ ರೈಲುಗಳು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 21 DECEMBER 2023

RAILWAY NEWS : ಕ್ರಿಸ್‌ಮಸ್‌ ಮತ್ತು ಹೊಸ ವರ್ಷಾಚರಣೆ ರಜೆ ಹಿನ್ನೆಲೆ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. ಈ ಹಿನ್ನೆಲೆ ನೈಋತ್ಯ ರೈಲ್ವೆ 19 ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲು ತೀರ್ಮಾನಿಸಿದೆ. ಈ ಪೈಕಿ ಶಿವಮೊಗ್ಗದ ಮೂರು ರೈಲುಗಳಿವೆ.

ಶಿವಮೊಗ್ಗದ ರೈಲುಗಳು

ಬೆಂಗಳೂರು – ಶಿವಮೊಗ್ಗ – ಬೆಂಗಳೂರು ಜನಶತಾಬ್ದಿ (ರೈಲು ಸಂಖ್ಯೆ 12089 – 12090) – ಒಂದು ಚೇರ್‌ ಕಾರ್‌ ಬೋಗಿ – ಡಿ.21ರಿಂದ ಫೆ.1ರವರೆಗೆ ಹೆಚ್ಚುವರಿ ಬೋಗಿ.

ಮೈಸೂರು – ತಾಳಗುಪ್ಪ – ಮೈಸೂರು (ರೈಲು ಸಂಖ್ಯೆ 16205 – 16206) – ಒಂದು ಚೇರ್‌ ಕಾರ್‌ ಬೋಗಿ – ಡಿ.22 ರಿಂದ ಜನವರಿ 2ರವರೆಗೆ ಹೆಚ್ಚುವರಿ ಬೋಗಿ

ಮೈಸೂರು – ತಾಳಗುಪ್ಪ – ಮೈಸೂರು (ರೈಲು ಸಂಖ್ಯೆ 16227 – 16228) – ಡಿ.22 ರಿಂದ ಜನವರಿ 2ರವರೆಗೆ ಹೆಚ್ಚುವರಿ ಬೋಗಿ.

ಉಳಿದ ರೈಲುಗಳಿಗೆ ಹಚ್ಚುವರಿ ಬೋಗಿ

ಒಂದು ಎಸಿ 3 ಟೈರ್‌ ಎಕಾನಮಿ ಬೋಗಿ – ಬೆಂಗಳೂರು – ಮಿರಾಜ್‌ – ಬೆಂಗಳೂರು (16589/16590), ಬೆಂಗಳೂರು – ಬೆಳಗಾವಿ – ಬೆಂಗಳೂರು (20653/20654)

Electric-Locomotive-train-for-Shimoga

ಒಂದು ಸಕೆಂಡ್‌ ಕ್ಲಾಸ್‌ ಸ್ಲೀಪರ್‌ ಕೋಚ್‌ – ಹುಬ್ಬಳ್ಳಿ – ಬೆಂಗಳೂರು – ಹುಬ್ಬಳ್ಳಿ (17391/17392), ಬೆಂಗಳೂರು – ಹೊಸಪೇಟೆ – ಬೆಂಗಳೂರು (06243/06244), ಹೊಸಪೇಟೆ – ಹರಿಹರ – ಹೊಸಪೇಟೆ (06245/06246), ವಾಸ್ಕೊಡಗಾಮ – ಯಶವಂತಪುರ – ವಾಸ್ಕೊಡಗಾಮ (17309/17310), ಯಶವಂತಪುರ – ಕಾರಟಗಿ – ಯಶವಂತಪುರ (06545/06546), ಮೈಸೂರು – ಬೆಳಗಾವಿ -ಮೈಸೂರು (17301/17302), ಮೈಸೂರು – ಬಾಗಲಕೋಟೆ – ಮೈಸೂರು (17307/17308), ಬೆಂಗಳೂರು – ನಾಂದೇಡ್‌ – ಬೆಂಗಳೂರು (16593/16594), ಸರ್‌.ಎಂ.ವಿ.ಟರ್ಮಿನಲ್‌ – ಮುರುಡೇಶ್ವರ – ಸರ್‌.ಎಂ.ವಿ. ಟರ್ಮಿನಲ್‌ (16585/16586), ಬೆಂಗಳೂರು – ಕನ್ಯಾಕುಮಾರಿ – ಬೆಂಗಳೂರು (16525/16526), ಹುಬ್ಬಳ್ಳಿ – ಕೂಚುವೇಲಿ – ಹುಬ್ಬಳ್ಳಿ (12777/12778).

ಎರಡು ಚೇರ್‌ ಕಾರ್‌ ಬೋಗಿ – ಬೆಂಗಳೂರು – ಹುಬ್ಬಳ್ಳಿ – ಬೆಂಗಳೂರು (12079/12080)

ಒಂದು 3 ಟೈರ್‌ ಎಸಿ ಕೋಚ್‌ – ಯಶವಂತಪುರ – ಕೂಚುವೇಲಿ – ಯಶವಂತಪುರ (12079/12080)

ಇದನ್ನೂ ಓದಿ – ಮೈಸೂರು-ಶಿವಮೊಗ್ಗ ಎಕ್ಸ್‌ಪ್ರೆಸ್‌ ರೈಲುಗಳು, ಯಾವ್ಯಾವ ರೈಲಿನ ಟೈಮಿಂಗ್‌ ಏನು? ಇಲ್ಲಿದೆ ಲಿಸ್ಟ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : December 21, 2023

Leave a Comment