ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 24 DECEMBER 2023
SHIMOGA : ಮೀಶೋ ಆನ್‌ಲೈನ್ ಶಾಪಿಂಗ್ ಸಂಸ್ಥೆ ಹೆಸರು ದುರ್ಬಳಕೆ ಮಾಡಿಕೊಂಡು ಬಹುಮಾನ ಬಂದಿದೆ ಎಂಬ ಅಂಚೆ ಕಳುಹಿಸಿ ಹೊಸನಗರ ತಾಲೂಕಿನ ರೈತನೊಬ್ಬನಿಗೆ 13.97 ಲಕ್ಷ ರೂ. ವಂಚಿಸಲಾಗಿದೆ. 15.50 ಲಕ್ಷ ರೂ. ಬಹುಮಾನ ಬಂದಿದೆ ಎಂದು ಪತ್ರ ಬಂದಿತ್ತು. ಇದನ್ನು ನಂಬಿದ ರೈತ (ಹೆಸರು ಗೌಪ್ಯ) ಪತ್ರದಲ್ಲಿದ್ದ ಹೆಲ್ಪ್‌ಲೈನ್ ನಂಬರ್‌ಗೆ ಕರೆ ಮಾಡಿದ್ದರು.
ಮೀಶೋ ಸಂಸ್ಥೆಯ ಸಿಆರ್‌ಒ ಎಂದು ಮಾತನಾಡಿದ ವ್ಯಕ್ತಿ ವಾಟ್ಸಪ್‌ನಲ್ಲಿ ದಾಖಲೆ ಕಳುಹಿಸುವಂತೆ ತಿಳಿಸಿದ್ದ. ಅದರಂತೆ ರೈತ ತನ್ನ ತಾಯಿಯ ಮತದಾನ ಗುರುತಿನ ಚೀಟಿಯ ದಾಖಲೆ ಕಳುಹಿಸಿದ್ದ. ಬಳಿಕ ಕರೆ ಮಾಡಿದ ವ್ಯಕ್ತಿಗಳು ಬಹುಮಾನದ ಹಣಕ್ಕೆ ತೆರಿಗೆ ಕಟ್ಟಬೇಕು, ಶೇ.1ರಷ್ಟು ಹಣವನ್ನು ಪಾವತಿಸಬೇಕು, ಲಂಚ ಕೋಡಬೇಕು, ಬಹುಮಾನದ ಹಣ ಡಬಲ್ ಆಗಿದ್ದು ಬ್ಯಾಂಕ್‌ಗೆ ತೆರಿಗೆ ಪಾವತಿಸಬೇಕು ಸೇರಿದಂತೆ ನಾನಾ ಕಾರಣ ಹೇಳಿ ರೈತನಿಂದ ಹಣ ಪಡೆದಿದ್ದಾರೆ.
ವಿವಿಧ ಬ್ಯಾಂಕ್ ಖಾತೆಗಳಿಗೆ ರೈತ ಒಟ್ಟು 13,97,938 ರೂ. ಹಣ ಕಟ್ಟಿದ್ದಾರೆ. ವಂಚನೆಗೊಳಗಾದ ಅರಿವಾದ ನಂತರ ರೈತ ದೂರು ನೀಡಿದ್ದಾರೆ. ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಕುವೆಂಪು ವಿಶ್ವವಿದ್ಯಾಲಯದ ವೆಬ್‌ಸೈಟ್ ಹ್ಯಾಕ್, ಇದೇ ಮೊದಲಲ್ಲಿ ಇಂತಹ ಕೃತ್ಯ, ಹ್ಯಾಕ್ ಮಾಡಿದ್ಯಾರು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422