ಶಿವಮೊಗ್ಗ – ಸಾಗರ ಹೆದ್ದಾರಿಯಲ್ಲಿ ಗುಂಡಿಗಳಿಂದ ಕಾದಿದೆ ಗಂಡಾಂತರ, ರಸ್ತೆ ಬಿರುಕಿನಿಂದ ಅಪಾಯ ನಿಶ್ಚಿತ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 25 DECEMBER 2023

SAGARA : ಶಿವಮೊಗ್ಗ – ಸಾಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ಗುಂಡಿಗಳು ಬಾಯ್ತೆರೆದಿವೆ. ಸ್ವಲ್ಪ ಯಾಮಾರಿದರು ವಾಹನ ಸವಾರರಿಗೆ ಪ್ರಾಣಾಪಾಯ ತಪ್ಪಿದ್ದಲ್ಲ.

ಎಲ್ಲೆಲ್ಲಿ ಗುಂಡಿಗಳಿವೆ?

ಸಾಗರದಿಂದ ಶಿವಮೊಗ್ಗ ಕಡೆಗೆ ತೆರಳುವವರಿಗೆ ಐಗಿನಬೈಲು ಸಮೀಪ ಸೇತುವೆ ಮೇಲೆ ಬೃಹತ್‌ ಗುಂಡಿ ಕಾಣಸಿಗುತ್ತದೆ. ಡಾಂಬರ್‌ ಕಿತ್ತು ಹೋಗಿದ್ದು ಸೇತುವೆಗೆ ಅಳವಡಿಸಿರುವ ಕಂಬಿಗಳು ಗೋಚರಿಸುತ್ತಿವೆ. ಇನ್ನು, ಆನಂದಪುರದಲ್ಲಿಯು ಹೆದ್ದಾರಿ ಮೇಲೆ ಗುಂಡಿಗಳಿವೆ. ಆಚಾಪುರ, ಗಿಳಾಲಗುಂಡಿ, ಕೋಣೆ ಹೊಸೂರು, ಸನ್ನಿವಾಸದ ಬಳಿ ಹೆದ್ದಾರಿಯಲ್ಲಿ ಗುಂಡಿಗಳಿವೆ. ಅದರಲ್ಲೂ ಕೋಣೆ ಹೊಸೂರು ಸಮೀಪ ಸಾಲಾಗಿ ಗುಂಡಿಗಳಿವೆ.

ಸಾಗರದಿಂದ ಐಗಿನಬೈಲು ತನಕ ಹೆದ್ದಾರಿ ಚನ್ನಾಗಿದೆ. ಇದೆ ಕಲ್ಪನೆಯಲ್ಲಿಯೇ ವಾಹನ ಸವಾರರು ವೇಗ ಹೆಚ್ಚಿಸಿದರೆ ದಿಢೀರ್‌ ಎದುರಾಗುವ ಗುಂಡಿಗಳು ಜೀವಕ್ಕೆ ಕುತ್ತು ತರುತ್ತವೆ. ಗುಂಡಿಗಳನ್ನು ತಪ್ಪಿಸಲು ಹೋಗಿ ಹಲವು ಅಪಘಾತಗಳು ಕೂಡ ಸಂಭವಿಸಿವೆ ಅನ್ನುತ್ತಾರೆ ಸ್ಥಳೀಯರು.

ರಸ್ತೆ ಮಧ್ಯದಲ್ಲಿ ಬಿರುಕು..!

ಇನ್ನು, ಚೋರಡಿ ಮತ್ತು ಕುಂಸಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಯಲ್ಲಿ ಬಿರುಕು ಬಿಟ್ಟಂತಾಗಿದೆ. ದ್ವಿಚಕ್ರ ವಾಹನ ಸವಾರರ ಪಾಲಿಗಂತು ಈ ಬಿರುಕು ಕಂಟವಾಗಿದೆ. ಹೆದ್ದಾರಿಯ ಗುಂಡಿಗಳು, ಬಿರುಕುಗಳನ್ನು ಬಂದ್‌ ಮಾಡಿದರೆ ವಾಹನ ಸವಾರರು ನಿಶ್ಚಿಂತೆಯಿಂದ ಈ ಮಾರ್ಗದಲ್ಲಿ ಓಡಾಡಬಹುದಾಗಿದೆ.

ಇದನ್ನೂ ಓದಿ – ವಾಹನ ಸವಾರರ ಹುಷಾರ್‌, ಶಿವಮೊಗ್ಗದ ಈ ರಸ್ತೆಯಲ್ಲಿ ನಿಮ್ಮ ಕೈ, ಕಾಲುಗಳಿಗೆ ನೀವೆ ಜವಾಬ್ದಾರರು

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : December 25, 2023

Leave a Comment