SHIVAMOGGA LIVE NEWS | 27 DECEMBER 2023
SAGARA : ಪರವಾನಗಿ ಇಲ್ಲದೆ ಜಾನುವಾರುಗಳನ್ನು ಗೂಡ್ಸ್ ವಾಹನವೊಂದರಲ್ಲಿ ಸಾಗಿಸುತ್ತಿದ್ದ ಆರೋಪದ ಹಿನ್ನೆಲೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಗೂಡ್ಸ್ ವಾಹನ, ಅದರ ಬೆಂಗಾವಲಾಗಿ ತೆರಳುತ್ತಿದ್ದ ಕಾರು ಮತ್ತು ನಾಲ್ಕು ಜಾನುವಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ಅನಾಮಧೇಯ ಫೋನ್ ನೀಡಿದ ಸುಳಿವು
ಸಾಗರ ಗ್ರಾಮಾಂತರ ರಾತ್ರಿ ಕರೆ ಮಾಡಿದ ವ್ಯಕ್ತಿಯೊಬ್ಬ ಗೂಡ್ಸ್ ವಾಹನದಲ್ಲಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ. ಬೆಂಗಾವಲಿನಲ್ಲಿ ಒಂದು ಕಾರು ಚಲಿಸುತ್ತಿದೆ ಎಂದು ಮಾಹಿತಿ ನೀಡಿದ್ದರು. ಈ ಹಿನ್ನೆಲೆ ಹೈವೇ ಪ್ಯಾಟ್ರೋಲ್ ವಾಹನಕ್ಕೆ ಬಳಸಗೋಡು ಬಳಿ ಗೂಡ್ಸ್ ವಾಹನ ಮತ್ತು ಕಾರು ಪತ್ತೆಯಾಗಿತ್ತು. ಎರಡು ವಾಹನಗಳನ್ನು ತಡೆದ ಪೊಲೀಸರು ಕಾರಿನಿಂದ್ದ ಮೂವರನ್ನು ಕೆಳಗಿಳಿಸಲಾಯಿತು. ಇನ್ನು ಗೂಡ್ಸ್ ವಾಹನದಲ್ಲಿ ಇದ್ದ ಇಬ್ಬರನ್ನು ಕೆಳಗಿಳಿಯಲು ಸೂಚಿಸಿದರು. ಈ ವೇಳೆ ಚಾಲಕ ಕೆಳಗಿಳಿದಿದ್ದು, ಪಕ್ಕದ ಸೀಟಿನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಕೆಳಗಿಳಿದು ಪಕ್ಕದ ಕಾಡಿನೊಳಗೆ ಓಡಿ ಹೋಗಿದ್ದ.
ಇದನ್ನೂ ಓದಿ – ಗ್ರಾಹಕನ ದುಡ್ಡು ಬ್ಯಾಂಕ್ ಸಿಬ್ಬಂದಿಯ ಪತ್ನಿ, ತಂದೆ ಖಾತೆಗೆ ವರ್ಗ, ವಿದೇಶದಿಂದ ಬಂದ ಈ ಮೇಲ್‌ನಿಂದ ಹೊರಬಿತ್ತು ಸತ್ಯ
ಮಾಹಿತಿ ನೀಡಲು ವಿಫಲ
ಇನ್ನು ವಾಹನದಲ್ಲಿದ್ದ ನಾಲ್ವರನ್ನು ವಿಚಾರಣೆ ಮಾಡಿದಾಗ ಬಳಸಗೋಡು ಮತ್ತು ಜೋಗಿಗದ್ದೆ ಗ್ರಾಮಗಳಲ್ಲಿ ಜಾನುವಾರುಗಳನ್ನು ಖರೀದಿಸಿದ್ದು, ಮಾರಾಟ ಮಾಡಿದವರ ಹೆಸರು ಗೊತ್ತಿಲ್ಲ ಎಂದು ತಿಳಿಸಿದ್ದರು. ಈ ಹಿನ್ನೆಲೆ ವಾಹನಗಳು, ಜಾನುವಾರುಗಳನ್ನು ವಶಕ್ಕೆ ಪಡೆಯಲಾಯಿತು. ಸಚಿನ್, ಬಾಷಾ, ಮುದಾಸಿರ್, ಮುತಾಲಿಬ್, ಮಂಜಪ್ಪ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ, KSRTC ಬಸ್ ತಡೆದು ಆಕ್ರೋಶ

About The Editor
ನಿತಿನ್ ಆರ್.ಕೈದೊಟ್ಲು





