SHIVAMOGGA LIVE NEWS | 5 JANUARY 2024 ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
SAGARA : ಎಂಎಸ್ಐಎಲ್ ಮದ್ಯದ ಅಂಗಡಿಯ ಒಳಗಿದ್ದ ಲಾಕರ್ ಮೀಟಿ 2.95 ಲಕ್ಷ ರೂ. ಹಣ ಕಳ್ಳತನ ಮಾಡಲಾಗಿದೆ. ಅಂಗಡಿಯ ಮೋಲ್ಡ್ ಶೀಟ್ ಮೀಟಿ ಕಳ್ಳರು ಒಳ ನುಗ್ಗಿ ಹಣ ಕಳ್ಳತನ ಮಾಡಿದ್ದಾರೆ.
ಸಾಗರ ಪಟ್ಟಣದ ಬಿ.ಹೆಚ್.ರಸ್ತೆಯ ಜಂಬಗಾರುವಿನಲ್ಲಿರುವ ಎಂಎಸ್ಐಎಲ್ ಮದ್ಯದ ಅಂಗಡಿಯಲ್ಲಿ ಕಳ್ಳತನ ಮಾಡಲಾಗಿದೆ. ಮಾಲೀಕ ಆನಂದಪ್ಪ ಅವರು ಆಯಾ ದಿನದ ವ್ಯಾಪಾರದ ಹಣವನ್ನು ಅಂಗಡಿಯಲ್ಲೇ ಇರುವ ಲಾಕರ್ನಲ್ಲಿ ಇರಿಸಿ ಮರುದಿನ ಬೆಳಗ್ಗೆ ಬ್ಯಾಂಕ್ಗೆ ಪಾವತಿಸುತ್ತಿದ್ದರು.
ಇದನ್ನೂ ಓದಿ – ಸಿಗಂದೂರು ಜಾತ್ರೆಗೆ ದಿನಾಂಕ ನಿಗದಿ, ಏನೆಲ್ಲ ಕಾರ್ಯಕ್ರಮ ಇರಲಿದೆ? ಯಾರೆಲ್ಲ ಭಾಗವಹಿಸ್ತಾರೆ?
ಡಿ.31ರಂದು ರಾತ್ರಿ ಎಂದಿನಂತೆ ವ್ಯಾಪಾರ ಮುಗಿಸಿ ಬಾಗಿಲಿಗೆ ಬೀಗ ಹಾಕಿ ತೆರಳಿದ್ದರು. ಹೊಸ ವರ್ಷದ ದಿನ ಬೆಳಗ್ಗೆ ಅಂಗಡಿ ಬಾಗಿಲು ತೆಗೆದು ಒಳ ಹೋದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಸಾಗರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
