ಶಿವಮೊಗ್ಗ ಪೊಲೀಸರಿಂದ ಕೋಲ್ಕತ್ತಾದಲ್ಲಿ ಕಾರ್ಯಾಚರಣೆ, ಆರೋಪಿ ಅರೆಸ್ಟ್‌, ಏನಿದು ಪ್ರಕರಣ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 24 JANUARY 2024

SHIMOGA : ಕೆಲಸಕ್ಕಿದ್ದ ಚಿನ್ನದ ಅಂಗಡಿಯಿಂದಲೇ ಬಂಗಾರ ಕಳ್ಳತನ ಮಾಡಿದ್ದ ಕೆಲಸಗಾರನನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಗಿದೆ. ಕೊಲ್ಕತ್ತಾ, ಹೈದರಾಬಾದ್‌ ಮತ್ತು ಸಿಕಂದರಾಬಾದ್‌ನಲ್ಲಿ 8.45 ಲಕ್ಷ ರೂ. ಮೌಲ್ಯದ ಬಂಗಾರವನ್ನು ವಶಕ್ಕೆ ಪಡೆಯಲಾಗಿದೆ. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಅದಿತೋ ಮಾಜಿ ಅಲಿಯಾಸ್‌ ಆದಿತ್ಯಾ (37) ಬಂಧಿತ. ಈತ ಶಿವಮೊಗ್ಗದ ಲಷ್ಕರ್‌ ಮೊಹಲ್ಲಾದ ಅನಿಸೂರ್‌ ಇಸ್ಲಾಂ ಅವರ ಚಿನ್ನ, ಬೆಳ್ಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಜ.4ರಂದು ಆಭರಣಗಳಿಗೆ ಪಾಲಿಶ್‌ ಮಾಡಿಸಿಕೊಂಡು ಬರುವುದು ತಿಳಿಸಿ 130 ಬಂಗಾರದೊಂದಿಗೆ ನಾಪತ್ತೆಯಾಗಿದ್ದ.

ಕೋಲ್ಕತ್ತಾದಲ್ಲಿ ಆರೋಪಿ ಅರೆಸ್ಟ್‌

ಪ್ರಕರಣದ ತನಿಖೆ ನಡೆಸಿದ ಕೋಟೆ ಠಾಣೆ ಪೊಲೀಸರು ಆರೋಪಿ ಅದಿತೋ ಮಾಜಿಯನ್ನು ಕೋಲ್ಕತ್ತಾದಲ್ಲಿ ಬಂಧಿಸಿದ್ದಾರೆ. ವಿಚಾರಣೆ ಬಳಿಕ ಕೋಲ್ಕತ್ತಾದಲ್ಲಿ 2.70 ಲಕ್ಷ ರೂ. ಮೌಲ್ಯದ 45 ಗ್ರಾಮ ಬಂಗಾರ, ಹೈದರಾಬಾದ್‌ ಮತ್ತು ಸಿಕಂದರಾಬಾದ್‌ನಲ್ಲಿ 85 ಗ್ರಾಮ ಬಂಗಾರ ವಶಪಡಿಸಿಕೊಂಡಿದ್ದಾರೆ. ಈತನ ಬಳಿಯಿಂದ ಒಟ್ಟು 8.45 ಲಕ್ಷ ರೂ. ಮೌಲ್ಯದ 130 ಗ್ರಾಂ ಬಂಗಾರವನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ – ಶಿವಮೊಗ್ಗದ ವ್ಯಾಪಾರಿಗೆ ಬಂತು 2 ಕೊರಿಯರ್‌, ಒಂದು ರಿಜಿಸ್ಟರ್‌ ಪೋಸ್ಟ್‌, ಓಪನ್‌ ಮಾಡಿದಾಗ ಕಾದಿತ್ತು ಶಾಕ್

ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌, ಹೆಚ್ಚುವರಿ ರಕ್ಷಣಾಧಿಕಾರಿಗಳಾದ ಅನಿಲ್‌ ಕುಮಾರ್‌ ಭೂಮರೆಡ್ಡಿ, ಕಾರಿಯಪ್ಪ ಎ.ಜಿ ಮಾರ್ಗದರ್ಶದಲ್ಲಿ, ಡಿವೈಎಸ್‌ಪಿ ಬಾಲರಾಜ್.ಬಿ ಅವರ  ಮೇಲ್ವಿಚಾರಣೆಯಲ್ಲಿ ಕೋಟೆ ಠಾಣೆ ಇನ್ಸ್‌ಪೆಕ್ಟರ್‌ ರವಿ ಪಾಟೀಲ್ ನೇತೃತ್ವದ ಕಾರ್ಯಾಚರಣೆ ನಡೆಸಲಾಯಿತು. ಪಿಎಸ್‌ಐ ಕುಮಾರ್, ಪಿಸ್‌ಐ ಸಿ.ಆರ್ ಕೊಪ್ಪದ್, ಎಎಸ್‌ಐ ಟಿ.ಶ್ರೀಹರ್ಷ ಮತ್ತು ಸಿಬ್ಬಂದಿ ಅಣ್ಣಪ್ಪ, ನಾಗರಾಜ, ಆಂಜಿನಪ್ಪ, ಕಿಶೋರ ಮತ್ತು  ಜಯಶ್ರೀ ಅವರ ತಂಡ ಆರೋಪಿಯನ್ನು ಬಂಧಿಸಿದೆ.

Leave a Comment