SHIVAMOGGA LIVE NEWS | 14 FEBRUARY 2024
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
SHIMOGA : ಜಿಲ್ಲೆಯವರೆ ನಿರ್ಮಿಸಿ, ನಿರ್ದೇಶಿಸಿರುವ ಶಾಖಾಹಾರಿ ಕನ್ನಡ ಸಿನಿಮಾ ಫೆ.16ರಂದು ತೆರೆಕಾಣಲಿದೆ. ಈಗಾಗಲೇ ಟ್ರೇಲರ್ ಮತ್ತು ಹಾಡುಗಳು ಜನ ಮೆಚ್ಚುಗೆ ಪಡೆದಿದೆ. ನಟರಾದ ರಂಗಾಯಣ ರಘು ಮತ್ತು ಗೋಪಾಲಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಚಿತ್ರತಂಡ ಶಿವಮೊಗ್ಗದಲ್ಲಿ ಇವತ್ತು ಸುದ್ದಿಗೋಷ್ಠಿ ನಡೆಸಿ, ಸಿನಿಮಾದ ಕುರಿತು ಮಾಹಿತಿ ನೀಡಿದರು.
ಯಾರೆಲ್ಲ ಏನೇನು ಹೇಳಿದರು?
ರಾಜೇಶ್ ಕೀಳಂಬಿ, ನಿರ್ಮಾಪಕ : ನಟರಾದ ಸುದೀಪ್, ರಕ್ಷಿತ್ ಶೆಟ್ಟಿ ಶಾಖಾಹಾರಿ ಸಿನಿಮಾದ ಟ್ರೇಲರ್ ಮೆಚ್ಚಿದ್ದಾರೆ. ಸಿನಿಮಾ ನಿರ್ಮಾಣ ಬೆಂಗಳೂರಿಗೆ ಸೀಮಿತ ಆಗಬಾರದು. ಶಿವಮೊಗ್ಗದಲ್ಲೂ ಚಿತ್ರ ನಿರ್ಮಾಣ ಮಾಡಬಹುದು ಎಂದು ಸಾಬೀತುಪಡಿಸುವ ಪ್ರಯತ್ನ ಈ ಶಾಖಾಹಾರಿ. ಸಿನಿಮಾದ ಶಕ್ತಿ ಇರುವುದು ಕಥೆಯಲ್ಲಿ. ಇಬ್ಬರು ನಟರು ರಂಗಾಯಣ ರಘು, ಗೋಪಲಕೃಷ್ಣ ದೇಶಪಾಂಡೆ ಅವರು ನಟಿಸಿದ್ದಾರೆ. ಸುಜಯ್ ಶಾಸ್ತ್ರಿ, ಪ್ರತಿಮಾ ನಾಯಕ್, ಹರಿಣಿ, ವಿನಯ್, ಶ್ರೀಹರ್ಷ ಗೋಬಟ್, ನಿಧಿ ಹೆಗಡೆ ಮುಂತಾದವರು ಅಭಿನಯಿಸಿದ್ದಾರೆ.
ಸಂದೀಪ್ ಸುಂಕದ್, ನಿರ್ದೇಶಕ : ನಾಟಕಕಾರ ಎಸ್.ಆರ್.ಗಿರೀಶ್ ಅವರ ನಾಟಕದ ತುಣುಕು ಇಟ್ಟುಕೊಂಡು ಈ ಕಥೆ ರಚಿಸಲಾಗಿದೆ. ಈಗಿನ ಟ್ರೆಂಡ್ಗೆ ತಕ್ಕ ಹಾಗೆ ಕಥೆ ಸಿದ್ಧಪಡಿಸಲಾಗಿದೆ. ಕೌತುಕ ಸನ್ನಿವೇಶಗಳನ್ನು ಸೃಷ್ಠಿಸಿ ಶಿವಮೊಗ್ಗದ ತೀರ್ಥಹಳ್ಳಿ ಸುತ್ತಮುತ್ತ ಚಿತ್ರಿಕರಣ ಮಾಡಲಾಗಿದೆ.
ಗೋಪಾಲಕೃಷ್ಣ ದೇಶಪಾಂಡೆ, ನಟ : ಅಪರೂಪದ ಮತ್ತು ಸರಳವಾದ ಕಥೆ. ಶಿವಮೊಗ್ಗದ ಜನರು ನಿರ್ದೇಶಿಸಿ, ನಿರ್ಮಿಸಿದ್ದಾರೆ. ಇನ್ಸ್ಪೆಕ್ಟರ್ ಪಾತ್ರದಲ್ಲಿ ನಟಿಸಿದ್ದೇನೆ. ಸಿನಿಮಾ ಎಮೋಷನಲ್ ಕ್ರೈಮ್ ಥ್ರಿಲ್ಲರ್. ಇಂತಹ ಕಥೆಯನ್ನು ಆಯ್ಕೆ ಮಾಡಿ ನಿರ್ಮಿಸುವುದು ಸುಲಭದ ಸಂಗತಿಯಲ್ಲ.
ಸಹ ನಿರ್ಮಾಪಕಿ ರಂಜಿನಿ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿ ಇದ್ದರು.
ಇದನ್ನೂ ಓದಿ – ಜಮೀನಿನಲ್ಲಿ ಸಿಕ್ತು ರಾಶಿಗಟ್ಟಲೆ ಚಿನ್ನದ ಸರಗಳು, ಮೂಟೆಯಲ್ಲಿ ತಂದು ಮಾರಾಟ, ಆಮೇಲೆ ಆಗಿದ್ದೇನು?
LATEST NEWS
- ವರ್ಷ ಪೂರ್ತಿ ರಂಗ ಚಟುವಟಿಕೆ, ಉದ್ಘಾಟನೆಯ ದಿನಾಂಕ ಪ್ರಕಟ, ಏನಿದು ಕಾರ್ಯಕ್ರಮ?

- ಸರ್ಕಾರಿ ಮಹಿಳಾ ನೌಕರರ ಸಂಘ ಅಸ್ಥಿತ್ವಕ್ಕೆ, ಉದ್ದೇಶವೇನು? ರಾಜ್ಯಾಧ್ಯಕ್ಷೆ ಏನೆಲ್ಲ ಹೇಳಿದರು?

- ಅರ್ಧಕ್ಕರ್ಧ ಶಿವಮೊಗ್ಗ ಸಿಟಿಯಲ್ಲಿ ಫೆಬ್ರವರಿ 7ರಂದು ಇಡೀ ದಿನ ಕರೆಂಟ್ ಇರಲ್ಲ, ಯಾವ್ಯಾವ ಏರಿಯಾ? ಇಲ್ಲಿದೆ ಲಿಸ್ಟ್

- ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತಷ್ಟು ತಗ್ಗಿದ ತಪಮಾನ, ಯಾವ್ಯಾವ ತಾಲೂಕಿನಲ್ಲಿ ಎಷ್ಟಿದೆ?

- ಶಿವಮೊಗ್ಗ ಮಾರಿಕಾಂಬಾ ಜಾತ್ರೆ, ಪಂದ್ಯ ಗೆದ್ದವರಿಗೆ ಎರಡು ಟಗರು

About The Editor
ನಿತಿನ್ ಆರ್.ಕೈದೊಟ್ಲು






