ವಾಟ್ಸಪ್‌ನಿಂದ ಹೆಲ್ಪ್‌ಲೈನ್‌ ಆರಂಭಕ್ಕೆ ನಿರ್ಧಾರ, ನೀವೂ ಕೊಡಬಹುದು ದೂರು, ಹೇಗೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
SHIVAMOGGA LIVE NEWS | 21 FEBRUARY 2024
➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

WHATSAPP : ಹರಡುತ್ತಿರುವ ರಾಶಿಗಟ್ಟಲೆ ಸುಳ್ಳು ಸುದ್ದಿಗಳಿಗೆ ತಡೆಯೊಡ್ಡಲು ವಾಟ್ಸಪ್‌ ಸಂಸ್ಥೆ ಮಹತ್ವದ ಹೆಜ್ಜೆ ಇರಿಸಿದೆ. ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಮತ್ತು ಡೀಪ್‌ ಫೇಕ್‌ಗಳ ಪತ್ತೆಗೆ ಫ್ಯಾಕ್ಟ್‌ ಚೆಕ್‌ ಹೆಲ್ಪ್‌ಲೈನ್‌ ಆರಂಭಿಸಲು ನಿರ್ಧರಿಸಿದೆ. ಈ ಸಂಬಂಧ ವಾಟ್ಸಪ್‌ನ ಮಾತೃ ಸಂಸ್ಥೆ ಮೆಟಾ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಹೇಗೆ ಕಾರ್ಯನಿರ್ವಹಿಸುತ್ತೆ ಹೆಲ್ಪ್‌ಲೈನ್‌?

ಸುಳ್ಳು ಸುದ್ದಿ ಮತ್ತು ಮಾಹಿತಿಗಳು ವಾಟ್ಸಪ್‌ನಲ್ಲಿ ಅತ್ಯಂತ ವೇಗವಾಗಿ ಹರಡುತ್ತಿವೆ. ಇವುಗಳಿಗೆ ಕಡಿವಾಣ ಹಾಕಲು ಹೆಲ್ಪ್‌ಲೈನ್‌ ಪ್ರಾರಂಭಿಸಲಾಗಿದೆ. ವಾಟ್ಸಪ್‌ನಲ್ಲಿ ಹರಿದಾಡುತ್ತಿರುವ ಮಾಹಿತಿ ನಿಜವೋ, ಸುಳ್ಳೋ ಎಂದು ಮೆಸೇಜ್‌ ಮಾಡಿದರೆ ಸಾಕು. ಅದನ್ನು ಖಚಿತಪಡಿಸಲಾಗುತ್ತದೆ. ಇಂಗ್ಲೀಷ್‌, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಈ ಹೆಲ್ಪ್‌ಲೈನ್‌ ಕಾರ್ಯನಿರ್ವಹಿಸಲಿದೆ.

ಬಳಕೆದಾರರು ಹೆಲ್ಪ್‌ಲೈನ್‌ಗೆ ಕಳುಹಿಸುವ ಮಾಹಿತಿಯನ್ನು ಸ್ವತಂತ್ರ ಸಂಸ್ಥೆಗಳ ಮೂಲಕ ಸತ್ಯಾಸತ್ಯತೆ ಪರಿಶೀಲಿಸಲಾಗುತ್ತದೆ ಎಂದು ಮೆಟಾ ತಿಳಿಸಿದೆ. ಇದಕ್ಕಾಗಿ ಮಿಸ್‌ಇನ್ಫರ್ಮೇಷನ್‌ ಕಾಂಬ್ಯಾಟ್‌ ಅಲಯನ್ಸ್‌ ಜೊತೆಗೆ ಸಹಯೋಗ ಪಡೆಯಲಾಗಿದೆ ಎಂದು ಮೆಟಾ ತಿಳಿಸಿದೆ. ಮಂದಿನ ತಿಂಗಳಿಂದ ಈ ಹೆಲ್ಪ್‌ಲೈನ್‌ ಕಾರ್ಯಾರಂಭ ಮಾಡಲಿದೆ.

ಇದನ್ನೂ ಓದಿ – ವಾಟ್ಸಪ್‌ ಸ್ಟೇಟಸ್‌ ಪ್ರಿಯರಿಗೆ ಗುಡ್‌ ನ್ಯೂಸ್‌, ಸದ್ಯದಲ್ಲೆ ಬರಲಿದೆ ಹೊಸ ಫೀಚರ್

Leave a Comment