SHIVAMOGGA LIVE NEWS | 13 APRIL 2024 (ಈ ಸುದ್ದಿಯನ್ನು ಇನ್ನು 35 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
HOLEHONNURU : ಕಲ್ಲಿಹಾಳ್ ವ್ಯಾಪ್ತಿಯಲ್ಲಿ 66/11 ಕೆವಿ ಮಾರ್ಗವನ್ನು ಹೊಸದಾಗಿ ನಿರ್ಮಿಸಲಾಗುತ್ತಿದೆ. ಕೂಡ್ಲಿಗೆರೆಯಲ್ಲಿ ತ್ರೈಮಾಸಿಕ ನಿರ್ವಹಣೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಏ.13 ಮತ್ತು 15ರಂದು ಬೆಳಗ್ಗೆ 10 ರಿಂದ ಸಂಜೆ 6ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಅರಬಿಳಚಿ, ಅರಬಿಳಚಿ ಕ್ಯಾಂಪ್, ಕೋಡಿಹಳ್ಳಿ, ಮಾರಶೆಟ್ಟಿಹಳ್ಳಿ, ತಿಮ್ಲಾಪುರ, ಡಿ.ಬಿ ಹಳ್ಳಿ, ಬೊಮ್ಮನಕಟ್ಟೆ, ದಾನವಾಡಿ, ಕಲ್ಲಾಪುರ, ಕೋಡಿಹೊಸೂರು, ತಟ್ಟೆಹಳ್ಳಿ, ವಡ್ಡರಹಟ್ಟಿ, ಕೂಡ್ಲಿಗೆರೆ, ಕಲ್ಲಪ್ಪನಹಳ್ಳಿ ಹೊಸಹಳ್ಳಿ, ಸೀತಾರಾಂಪುರ, ಹದಿಗೆರೆ ಕ್ಯಾಂಪ್, ತುಮರಿ, ಲಕ್ಕಪ್ಪನ ಕ್ಯಾಂಪ್ ಮತ್ತು ಅರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಬೆಳಗಿನ ಜಾವ ಪೊಲೀಸರ ದಾಳಿ, ಮನೆಗಳಲ್ಲಿ ಶೋಧ, ಕಾರಣವೇನು? ಎಲ್ಲೆಲ್ಲಿ ನಡೆಯಿತು ದಾಳಿ?
