ಪದೇ ಪದೆ ಒಂದೊಂದು ನಂಬರ್‌ನಿಂದ ವಾಟ್ಸಪ್‌ಗೆ ಮೆಸೇಜ್‌, ಯುವಕನಿಗೆ ಕಾದಿತ್ತು ಶಾಕ್‌

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 13 APRIL 2024

SHIMOGA : ಜಿ ಮೇಲ್‌ ಹ್ಯಾಕ್‌ ಮಾಡಿದ್ದು ಗೂಗಲ್‌ ಡ್ರೈವ್‌ನಲ್ಲಿರುವ ಪ್ರಿಯತಮೆಯ ಫೋಟೊಗಳನ್ನು ಎಡಿಟ್‌ ಮಾಡಿ ಸ್ನೇಹಿತರು, ಕುಟುಂಬದವರಿಗೆ ಕಳುಹಿಸುವುದಾಗಿ ಬೆದರಿಸಿ ಯುವಕನಿಂದ 4 ಲಕ್ಷ ರೂ. ಹಣ ವಸೂಲಿ ಮಾಡಲಾಗಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗ ಜಿಲ್ಲೆಯ ಗ್ರಾಮವೊಂದರ ಯುವಕನ (ಹೆಸರು, ಊರು ಗೌಪ್ಯ) ವಾಟ್ಸಪ್‌ಗೆ ಅಪರಿಚಿತ ನಂಬರ್‌ನಿಂದ ಮೆಸೇಜ್‌ ಬಂದಿತ್ತು. ಜಿ ಮೇಲ್‌ ಹ್ಯಾಕ್‌ ಮಾಡಿದ್ದು, ಗೂಗಲ್‌ ಡ್ರೈವ್‌ನಲ್ಲಿರುವ ಪ್ರಿಯತಮೆ ಜೊತೆಗಿನ ಫೋಟೊಗಳನ್ನು ಎಡಿಟ್‌ ಮಾಡಿ ಸ್ನೇಹಿತರು, ಸಂಬಂಧಿಕರಿಗೆ ಕಳುಹಿಸುವುದಾಗಿ ಬೆದರಿಕೆ ಒಡ್ಡಲಾಗಿತ್ತು. ಅಲ್ಲದೆ ಪದೇ ಪದೆ ಬೇರೆ ನಂಬರ್‌ಗಳಿಂದ ವಾಟ್ಸಪ್‌ ಮತ್ತು ಇನ್‌ಸ್ಟಾಗ್ರಾಂ ಮೂಲಕ ಮೆಸೇಜ್‌ ಮಾಡಿ ಹಣಕ್ಕೆ ಬೇಡಿಕೆ ಇಡಲಾಗಿತ್ತು.

ಹೆದರಿದ ಯುವಕ ಹಂತ ಹಂತವಾಗಿ 4 ಲಕ್ಷ ರೂ. ಹಣವನ್ನು ಬೆದರಿಕೆ ಒಡ್ಡಿದಾತ ತಿಳಿಸಿದ ಖಾತೆಗಳಿಗೆ ವರ್ಗಾಯಿಸಿದ್ದಾನೆ. ಕೊನೆಗೆ ಯುವಕ ಪೊಲೀಸರ ಮೊರೆಗೆ ಹೋಗಿದ್ದಾನೆ.

ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಬೆಳಗಿನ ಜಾವ ಪೊಲೀಸರ ದಾಳಿ, ಮನೆಗಳಲ್ಲಿ ಶೋಧ, ಕಾರಣವೇನು? ಎಲ್ಲೆಲ್ಲಿ ನಡೆಯಿತು ದಾಳಿ?

Leave a Comment