ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಅದ್ಧೂರಿ ಮೆರವಣಿಗೆ, ಹೇಗಿತ್ತು? ಏನೇನಿತ್ತು?

SHIVAMOGGA LIVE NEWS | 15 APRIL 2024

ELECTION NEWS : ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ನಾಮಪತ್ರ ಸಲ್ಲಿಕೆ ಹಿನ್ನೆಲೆ ಶಿವಮೊಗ್ಗದಲ್ಲಿ ಮೆರವಣಿಗೆ ಮತ್ತು ಸಾರ್ವಜನಿಕ ಸಭೆ ಆಯೋಜಿಸಲಾಗಿತ್ತು. ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್‌ ಗಣಪತಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

geetha shivarajkumar nomination

ರಾಮಣ್ಣ ‍ಶ್ರೇಷ್ಠಿ ಪಾರ್ಕ್‌, ಗಾಂಧಿ ಬಜಾರ್‌, ಶಿವಪ್ಪನಾಯಕ ಪ್ರತಿಮೆ, ನೆಹರೂ ರಸ್ತೆ, ಗೋಪಿ ಸರ್ಕಲ್‌ ಮೂಲಕ ಸಾಗಿತು. ಬಾಲರಾಜ ಅರಸ್‌ ರಸ್ತೆಯಲ್ಲಿ ಬಹಿರಂಗ ಸಭೆ ನಡೆಸಲಾಯಿತು.

ಹೇಗಿತ್ತು? ಏನೇನಿತ್ತು ಮೆರವಣಿಗೆಯಲ್ಲಿ?

ಲೋಕಸಭೆ ಕ್ಷೇತ್ರದ ವಿವಿಧೆಡೆಯಿಂದ ದೊಡ್ಡ ಸಂಖ್ಯೆಯ ಕಾಂಗ್ರೆಸ್‌ ಕಾರ್ಯಕರ್ತರು ಆಗಮಿಸಿದ್ದರು. ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಅವರೊಂದಿಗೆ ನಟ ಶಿವರಾಜ್‌ ಕುಮಾರ್‌, ಸಚಿವ ಮಧು ಬಂಗಾರಪ್ಪ, ಶಾಸಕರಾದ ಬಿ.ಕೆ.ಸಂಗಮೇಶ್ವರ, ಬೇಳೂರು ಗೋಪಾಲಕೃಷ್ಣ ಸೇರಿದಂತೆ ಕಾಂಗ್ರೆಸ್‌ ಮುಖಂಡರು ಇದ್ದರು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.

geetha shivarajkumar nomination

ಶಿವಣ್ಣನ ಫೋಟೊಗೆ ಮುಗಿಬಿದ್ದ ಜನ

ಮೆರವಣಿಗೆಯ ಹಾದಿ ಉದ್ದಕ್ಕು ನಟ ಶಿವರಾಜ್‌ ಕುಮಾರ್‌ ಅವರ ಫೋಟೊಗೆ ಜನರು ಮಗಿಬಿದ್ದರು. ರಸ್ತೆಯ ಇಕ್ಕೆಲದಲ್ಲಿ ನಿಂತ ಜನರು ತಮ್ಮ ಮೊಬೈಲ್‌ಗಳಲ್ಲಿ ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಂಡರು. ಶಿವಣ್ಣ ಎಂದು ಜನರು ಜೋರಾಗಿ ಕೂಗಿ ಅವರ ಗಮನ ಸೆಳೆಯಲು ಯತ್ನಿಸುತ್ತಿದ್ದು ಸಮಾನ್ಯವಾಗಿತ್ತು.

geetha shivarajkumar nomination

ರಣ ಬಿಸಲಿನಲ್ಲಿ ನಡೆದ ಜನ

ಇನ್ನು, ವಿಪರೀತ ಬಿಸಿಲಿನಲ್ಲಿ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಜನರು ಬಾಯಾರಿಕೆ ತಡೆಯಲಾಗಿದೆ ಅಲ್ಲಲ್ಲಿ ಅಂಗಡಿಗಳಲ್ಲಿ ನೀರು, ಪಾನೀಯ ಖರೀದಿಗೆ ಮುಗಿಬಿದ್ದಿದ್ದರು. ಕಾಂಗ್ರೆಸ್‌ ಪಕ್ಷದ ವತಿಯಿಂದ ನೀರು ವಿತರಣೆ ಮಾಡಲಾಯಿತು. ಆದರೆ ಅದು ಸಾಕಾಗದರೆ ಜನರು ಪರಿತಪಿಸಿದರು.

geetha shivarajkumar nomination dk shivakumar

ಇದನ್ನೂ ಓದಿ – ಬೆಂಗಳೂರಿನಲ್ಲಿರುವ ಶಿವಮೊಗ್ಗದವರ ಮತಗಳಿಗೆ ಲಗ್ಗೆ ಹಾಕಿದ ಬಿಜೆಪಿ, ಸಮ್ಮಿಲನದಲ್ಲಿ ಯಾರೆಲ್ಲ ಏನೇನು ಹೇಳಿದರು?

Geetha-Shivaraj-kumar-road-show-in-Shimoga.

Leave a Comment