ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 15 APRIL 2024
LOKSABHA ELECTION : ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಚುನಾವಣಾ ಆಯೋಗಕ್ಕೆ ತಮ್ಮ ಆಸ್ತಿ ವಿವರ ಸಲ್ಲಿಸಿದ್ದಾರೆ. ಗೀತಾ ಶಿವರಾಜ್ ಕುಮಾರ್ ಅವರು ತಮ್ಮ ಪತಿ, ನಟ ಶಿವರಾಜ್ ಕುಮಾರ್, ಪುತ್ರಿ ನಿವೇದಿತಾ ಅವರ ಒಟ್ಟು ಆಸ್ತಿ 89.06 ಕೋಟಿ ರೂ. ಎಂದು ತಿಳಿಸಿದ್ದಾರೆ.
ಮೂವರ ಬಳಿ ಇರುವ ಹಣವೆಷ್ಟು?
ಗೀತಾ ಶಿವರಾಜ್ ಕುಮಾರ್ ಅವರ ಕೈಯಲ್ಲಿ 3 ಲಕ್ಷ ರೂ., ಕೋಟಕ್ ಮಹಿಂದ್ರ ಬ್ಯಾಂಕ್ನಲ್ಲಿ 64,821 ರೂ., ಹೆಚ್ಡಿಎಫ್ಸಿ ಬ್ಯಾಂಕ್ನ ಒಂದು ಖಾತೆಯಲ್ಲಿ 3,42,910 ರೂ., ಹೆಚ್ಡಿಎಫ್ಸಿ ಬ್ಯಾಂಕ್ನ ಮತ್ತೊಂದು ಖಾತೆಯಲ್ಲಿ 60,52, 935 ರೂ. ಹೊಂದಿದ್ದಾರೆ. ಪತಿ ಶಿವರಾಜ್ ಕುಮಾರ್ ಅವರ ಕೈಯಲ್ಲಿ 22,58,338 ರೂ. ಹೊಂದಿದ್ದಾರೆ. ಕೋಟಕ್ ಮಹೀಂದ್ರ ಬ್ಯಾಂಕ್ನಲ್ಲಿ 46,54,908 ರೂ., ಹೆಚ್ಡಿಎಫ್ಸಿ ಬ್ಯಾಂಕ್ನಲ್ಲಿ 4,35,93,810 ರೂ., ಹೊಂದಿದ್ದಾರೆ. ಪುತ್ರಿ ನಿವೇದಿತಾ ಅವರು ಹೆಚ್ಡಿಎಫ್ಸಿ ಬ್ಯಾಂಕ್ ಖಾತೆ ಹೊಂದಿದ್ದು ಅದರಲ್ಲಿ ಕೇವಲ 100 ರೂ., ಇದೆ ಎಂದು ತಿಳಿಸಿದ್ದಾರೆ.
ಮುತ್ತು ಸಿನಿ ಸರ್ವಿಸಸ್ನಲ್ಲಿ ಗೀತಾ ಶಿವರಾಜ್ ಕುಮಾರ್ 25,60,261 ರೂ., ಶಿವರಾಜ್ ಕುಮಾರ್ 1,64,27,423 ರೂ., ನಿವೇದಿತಾ 1 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಗೀತಾ ಪಿಕ್ಚರ್ಗೆ ಶಿವರಾಜ್ ಕುಮಾರ್ ಅವರು 6 ಕೋಟಿ ರೂ., ಧ್ರುವಕುಮಾರ್ ಎಂಬುವವರಿಗೆ 2.30 ಕೋಟಿ ರೂ., ಇತರರಿಗೆ 2.13 ಕೋಟಿ ರೂ. ನೀಡಿದ್ದಾರೆ ಎಂದು ತಿಳಿಸಲಾಗಿದೆ. ಇನ್ನು, ಗೀತಾ ಮತ್ತು ಶಿವರಾಜ್ ಕುಮಾರ್ ದಂಪತಿ ಬ್ಯಾಂಕ್ಗಳು ಮತ್ತು ಇತರೆಡೆ 24.16 ಕೋಟಿ ರೂ. ಸಾಲ ಹೊಂದಿದ್ದಾರೆ. ಶಿವರಾಜ್ ಕುಮಾರ್ ಅವರು 95.79 ಲಕ್ಷ ರೂ. ಆದಾಯ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡಿದ್ದಾರೆ.
ಕಾರುಗಳು, ಚಿನ್ನ ಬೆಳ್ಳಿ ಎಷ್ಟಿದೆ?
ಗೀತಾ ಶಿವರಾಜ್ ಕುಮಾರ್ ಅವರ ಹೆಸರಿನಲ್ಲಿ 1.07 ಕೋಟಿ ರೂ. ಮೌಲ್ಯದ ಟೊಯೋಟ ಹೈಬ್ರಿಡ್ ಕಾರು ಇದೆ. ಶಿವರಾಜ್ ಕುಮಾರ್ ಅವರ ಹೆಸರಿನಲ್ಲಿ ಟೊಯೋಟಾ ಫಾರ್ಚುನರ್, ಮಾರುತಿ ಎರ್ಟಿಗಾ, ವೋಲ್ವೊ ಎಸ್90 ವಾಹನಗಳಿವೆ. ಗೀತಾ ಶಿವರಾಜ್ ಕುಮಾರ್ ಅವರ ಬಳಿ 11,542 ಗ್ರಾಂ ಚಿನ್ನ, ವಜ್ರಾಭರಣ ಇದೆ. ಇದರ ಮೌಲ್ಯ 3.50 ಕೋಟಿ ರೂ., 30 ಕೆ.ಜಿ. ಬೆಳ್ಳಿ ವಸ್ತುಗಳಿವೆ. ಇದರ ಮೌಲ್ಯದ 3.40 ಲಕ್ಷ ರೂ. ಎಂದು ವರದಿಯಲ್ಲಿ ತಿಳಿಸಲಾಗಿದೆ.
ಕೃಷಿ ಜಮೀನು, ಕಮರ್ಷಿಯಲ್ ಬಿಲ್ಡಿಂಗ್
ಕನಕಪುರದ ಚಕ್ಕನಹಳ್ಳಿಯಲ್ಲಿ ಗೀತಾ ಮತ್ತು ಶಿವರಾಜ್ ಕುಮಾರ್ ಅವರ ಜಂಟಿ ಖಾತೆಯಲ್ಲಿ 5.05 ಎಕರೆ ಕೃಷಿ ಜಮೀನು. ಶಿವರಾಜ್ ಕುಮಾರ್ ಅವರ ಹೆಸರಿನಲ್ಲಿ ತಮಿಳುನಾಡಿನ ಈರೋಡು ಜಿಲ್ಲೆಯಲ್ಲಿ 3.46 ಎಕರೆ ಕೃಷಿ ಜಮೀನು. ಗೀತಾ ಅವರ ಹೆಸರಿನಲ್ಲಿ ಕೋರಮಂಗಲದಲ್ಲಿ 2400 ಚದರ ಅಡಿಯಲ್ಲಿ ವಾಣಿಜ್ಯ ಕಟ್ಟಡ. ಬೆಂಗಳೂರಿನ ನಾಗವಾರದ ಮಾನ್ಯತಾ ರೆಸಿಡೆನ್ಸಿಯಲ್ಲಿ 32,400 ಚದರ ಅಡಿಯಲ್ಲಿ ಜಂಟಿ ಖಾತೆಯಲ್ಲಿ ಮನೆ ಇದೆ. ಇವುಗಳ ಒಟ್ಟು ಮೌಲ್ಯ 65.50 ಕೋಟಿ ರೂ. ಎಂದು ತಿಳಿಸಲಾಗಿದೆ.
ಇದನ್ನೂ ಓದಿ – ಪತ್ನಿಗೆ ಸಾಲ ನೀಡಿದ ಈಶ್ವರಪ್ಪ, ಎಲ್ಲೆಲ್ಲಿ ಎಷ್ಟು ಆಸ್ತಿ ಹೊಂದಿದ್ದಾರೆ? ನಗದು, ಚಿನ್ನಾಭರಣ ಎಷ್ಟಿದೆ? ಇಲ್ಲಿದೆ ಡಿಟೇಲ್ಸ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422