ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 22 APRIL 2024
SHIMOGA : ರೂಫಿಂಗ್ ಶೀಟ್ ತೆರೆದು ಅಂಗಡಿಯೊಂದರ ಒಳಗೆ ನುಗ್ಗಿರುವ ಕಳ್ಳರು ಕ್ಯಾಶ್ ಬಾಕ್ಸ್ನಲ್ಲಿ ಇಟ್ಟಿದ್ದ 2.40 ಲಕ್ಷ ರೂ. ನಗದು ಕಳ್ಳತನ ಮಾಡಿದ್ದಾರೆ. ಶಿವಮೊಗ್ಗದ ಗಾರ್ಡನ್ ಏರಿಯಾದಲ್ಲಿರುವ ಸೋಲಂಕಿ ಟ್ರೇಡರ್ಸ್ನಲ್ಲಿ ಘಟನೆ ಸಂಭವಿಸಿದೆ.
ವ್ಯಾಪಾರದ ಹಣ 2.40 ಲಕ್ಷ ರೂ. ಅನ್ನು ಬ್ಯಾಂಕ್ಗೆ ಕಟ್ಟಬೇಕಿತ್ತು. ಅದನ್ನು ಎಣಿಸಿ ಏ.19ರ ರಾತ್ರಿ ಕ್ಯಾಶ್ ಬಾಕ್ಸ್ನಲ್ಲಿ ಇರಿಸಲಾಗಿತ್ತು. ಏ.20ರಂದು ಬೆಳಗ್ಗೆ ಅಂಗಡಿಯಲ್ಲಿ ಕೆಲಸ ಮಾಡುವವರು ಬಾಗಿಲು ತೆಗದಾಗ ಕ್ಯಾಶ್ ಬಾಕ್ಸ್ ತೆರೆದ ಸ್ಥಿತಿಯಲ್ಲಿತ್ತು. ಕಡತಗಳು ಚೆಲ್ಲಾಪಿಲ್ಲಿಯಾಗಿದ್ದವು. ಪರಿಶೀಲಿಸಿದಾಗ ಹಣ ಇರಲಿಲ್ಲ. ಕಳ್ಳರು ರೂಫಿಂಗ್ ಶೀಟ್ ತೆಗೆದು, ಗೋಡೋನ್ ಮೂಲಕ ಅಂಗಡಿಯೊಳಗೆ ನುಗ್ಗಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ದಿಢೀರ್ ಸ್ಥಗಿತಗೊಂಡ ಸಿಗಂದೂರು ಲಾಂಚ್ಗಳು, ಸ್ಥಳೀಯರು, ಪ್ರವಾಸಿಗರಿಗೆ ಸಂಕಷ್ಟ
LATEST NEWS
- ಬೆಳಗ್ಗೆ ಲೇಔಟ್ಗೆ ಬಂದ ಲೆಕ್ಚರರ್ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್

- ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

- ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

- ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

- ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್, ಯಾಕೆ?

About The Editor
ನಿತಿನ್ ಆರ್.ಕೈದೊಟ್ಲು
















