SHIVAMOGGA LIVE NEWS | 28 APRIL 2024
SHIMOGA : ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣದ ಆರೋಪಿ ಫಯಾಜ್ಗಿಂತಲು ಹತ್ತು ಪಟ್ಟು ಹೆಚ್ಚು ಶಿಕ್ಷೆಯನ್ನು ಹಾಸನದ ರಾಜಕಾರಣಿಗೆ ನೀಡಬೇಕು ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಾಸನದ ಪೆನ್ಡ್ರೈವ್ ವಿಚಾರವಾಗಿ ಮೂರು ಪ್ರಮುಖ ವಿಷಯ ತಿಳಿಸಿದರು.
ಆಯನೂರು ಹೇಳಿದ 3 ಪ್ರಮುಖಾಂಶ
ಹುಬ್ಬಳ್ಳಿಯ ನೇಹಾ ಹತ್ಯೆ ನಡೆಸಿದ ಆರೋಪಿಯ ವಿರುದ್ಧ ನಡೆದ ಹೋರಾಟಕ್ಕಿಂತ ಹೆಚ್ಚಿನ ಹೋರಾಟ ಹಾಸನದ ರಾಜಕಾರಣಿಯೊಬ್ಬರು ಮಹಿಳೆಯರ ಮೇಲೆ ನಡೆಸಿರುವ ದೌರ್ಜನ್ಯದ ವಿರುದ್ಧ ನಡೆಯಬೇಕು. ಮಹಿಳೆಯರ ಮೇಲೆ ಹಾಸನದ ರಾಜಕಾರಣಿಯೊಬ್ಬರು ಸರಣಿ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ. ಅದರಲ್ಲೂ ಮನೆ ಕೆಲಸಕ್ಕೆ ಬಂದ ಬಡ ಕೂಲಿಕಾರ ಹೆಣ್ಣು ಮಗಳ ಮೇಲೆ ನಡೆದಿರುವ ದೌರ್ಜನ್ಯ ನನ್ನ ಮನಸ್ಸನ್ನು ಘಾಸಿ ಮಾಡಿದೆ.
ನೇಹಾ ಹತ್ಯೆ ಆರೋಪಿ ಫಯಾಜ್ಗೆ ನೀಡುವುದಕ್ಕಿಂತ ಹತ್ತು ಪಟ್ಟು ಹೆಚ್ಚು ಶಿಕ್ಷೆ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ರಾಜಕಾರಣಿಗೆ ನೀಡಬೇಕು. ಈ ಬಗ್ಗೆ ಬಿಜೆಪಿ, ಎನ್ಡಿಎಯ ಯಾವ ನಾಯಕರು ಮಾತನಾಡದೆ ಮೌನವಾಗಿ ಬೆಂಬಲಿಸುತ್ತಿದ್ದಾರೆ. ಮಾತೆಯರು, ನಾರಿಶಕ್ತಿ, ಮಹಿಳೆಯ ಗೌರವದ ಬಗ್ಗೆ ಮಾತನಾಡುವ ಬಿಜೆಪಿಯವರು ಕೂಲಿ ಕಾರ್ಮಿಕ ಮಹಿಳೆಯಿಂದ ಹಿಡಿದು ಮಹಿಳಾ ಪೊಲೀಸ್ ಅಧಿಕಾರಿವರೆಗೆ ಸರಣಿ ದೌರ್ಜನ್ಯ ನಡೆದಿದ್ದರೂ, ಅದನ್ನು ಖಂಡಿಸಿಲ್ಲ.
ವಿಡಿಯೊಗಳಲ್ಲಿನ ಹೆಣ್ಣುಮಕ್ಕಳ ಸಂಸಾರಗಳು ಹಾಳಾಗಿವೆ. ಇಂತಹ ದುಷ್ಟ ರಾಜಕಾರಣಿ ವಿರುದ್ಧ ಕ್ರಮ ತೆಗೆದುಕೊಳ್ಳಿ ಎನ್ನುವ ಒಂದೂ ಮಾತನ್ನು ಬಿಜೆಪಿ ಆಡುತ್ತಿಲ್ಲ. ಈ ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿ ಇರುವುದರಿಂದ ಸುಪ್ರೀಂ ಕೋರ್ಟ್ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು. ಜತೆಗೆ ಮಹಿಳಾ ಆಯೋಗ ಸ್ವಯಂ ಪ್ರೇರಿತವಾಗಿ ಸುಮೊಟೊ ಕೇಸ್ ದಾಖಲಿಸಿ, ದೌರ್ಜನ್ಯ ನಡೆಸಿದವರನ್ನು ಬಂಧಿಸಬೇಕು.
[su_note note_color=”#b7d6ff” text_color=”#000000″ radius=”0″]
ಶಿವಮೊಗ್ಗದಲ್ಲೂ ಹಾಸನ ಪೆನ್ಡ್ರೈವ್ ವಿಡಿಯೋಗಳು
SHIMOGA : ಹಾಸನದ ಪೆನ್ಡ್ರೈವ್ ವಿಡಿಯೋಗಳು ಶಿವಮೊಗ್ಗದಲ್ಲಿಯು ಸಂಚಲನ ಸೃಷ್ಟಿಸಿದೆ. ಶಿವಮೊಗ್ಗದಲ್ಲಿಯು ಹಲವರ ಮೊಬೈಲ್ಗಳಲ್ಲಿ ವಿಡಿಯೋ, ಫೋಟೊಗಳು ಹರಿದಾಡುತ್ತಿವೆ. ವಾಟ್ಸಪ್, ಟೆಲಿಗ್ರಾಂ ಆಪ್ಗಳಲ್ಲಿ ವಿಡಿಯೋಗಳು ಷೇರ್ ಆಗುತ್ತಿವೆ.[/su_note]
[su_note note_color=”#ffe9b7″ text_color=”#000000″ radius=”0″]
ಪೆನ್ಡ್ರೈವ್ ತನಿಖೆಗೆ ಎಸ್ಐಟಿ : ಸಿದ್ದರಾಮಯ್ಯ
BANGALORE : ಹಾಸನದ ಪೆನ್ ಡ್ರೈವ್ ವಿಚಾರದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಟ್ವಿಟರ್ನಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ.
ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನಿಸಿದೆ.
ಹಾಸನ ಜಿಲ್ಲೆಯಲ್ಲಿ ಅಶ್ಲೀಲ ವೀಡಿಯೋ ತುಣುಕುಗಳು ಹರಿದಾಡುತ್ತಿದ್ದು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಈ ಹಿನ್ನೆಲೆಯಲ್ಲಿ ಎಸ್.ಐ.ಟಿ ತನಿಖೆ ನಡೆಸುವಂತೆ ಮಹಿಳಾ…— Siddaramaiah (@siddaramaiah) April 27, 2024
[/su_note]
ಇದನ್ನೂ ಓದಿ – ಶಿವಮೊಗ್ಗಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಭೇಟಿಗೆ ದಿನಾಂಕ ನಿಗದಿ





