ಮುಂಗಾರು ಬಗ್ಗೆ ಹವಾಮಾನ ಅಧ್ಯಯನ ಸಂಸ್ಥೆಗಳ ಮಹತ್ವದ ಭವಿಷ್ಯ, ಈ ಬಾರಿ ಮಳೆಯಾಗುತ್ತಾ? ಮತ್ತೆ ಕೈ ಕೊಡುತ್ತಾ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 7 MAY 2024

RAINFALL REPORT : ದೇಶಾದ್ಯಂತ ಈ ಬಾರಿ ಮುಂಗಾರು ಉತ್ತಮವಾಗಿರಲಿದೆ ಎಂದು ವಿವಿಧ ಹವಾಮಾನ ಅಧ್ಯಯನ ಸಂಸ್ಥೆಗಳು ವರದಿ ಮಾಡಿವೆ. ಇದರಿಂದ ದೇಶದ ರೈತರ ಮೊಗದಲ್ಲಿ ಮಂದಾಹಸ ಮೂಡಿದೆ. ಬಿಸಿಲಿನಿಂದ ಹೈರಾಣಾಗಿರುವ ಜನರು ತುಸು ನೆಮ್ಮದಿಯ ನಿಟ್ಟುಸಿರು ಬಿಟಿದ್ದಾರೆ.

ಭಾರತೀಯ ಹವಾಮಾನ ಇಲಾಖೆಯ ಜಿಯೋಜಿಟ್‌ ಇನ್‌ಸೈಟ್‌ ವರದಿ ಪ್ರಕಾರ, ಈ ಬಾರಿ ಮುಂಗಾರು ವಾಡಿಕೆಗಿಂತಲೂ ಉತ್ತಮವಾಗಿರಲಿದೆ. ಸಾಮಾನ್ಯಕ್ಕಿಂತಲೂ ಹೆಚ್ಚು ಮಳೆಯಾಗಲಿದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಶೇ.106ರಷ್ಟು ಮಳೆ ಸುರಿಯುವ ಸಂಭವವಿದೆ ಎಂದು ಅಂದಾಜಿಸಿದೆ.

ಸ್ಕೈಮೇಟ್‌ ಸಂಸ್ಥೆ ಮತ್ತು ಏಷ್ಯಾ ಪೆಸಿಫಿಕ್‌ ಎಕಾನಾಮಿಕ್‌ ಕೋಆಪರೇಷನ್‌ ಸಂಸ್ಥೆಗಳು, ಮುಂಗಾರು ಉತ್ತಮವಾಗಿರಲಿದೆ ಎಂದು ತಿಳಿಸಿವೆ.

ಎನ್‌ ನೀನೊ ಚಂಡಮಾರುತ ಸೇರಿದಂತೆ ನಾನಾ ಕಾರಣಕ್ಕೆ ಕಳೆದ ವರ್ಷ ಮುಂಗಾರು ದುರ್ಬಲಗೊಂಡಿತ್ತು. ನಂತರ ಉತ್ತಮ ಮಳೆಯಾಗುವ ಪ್ರದೇಶದಲ್ಲಿ ಕಡಿಮೆ ಮಳೆಯಾಗಿತ್ತು. ರಾಜಸ್ಥಾನ, ಸೌರಾಷ್ಟ್ರ, ಕಚ್‌ ಸೇರಿದಂತೆ ಹಲವು ಕಡೆ ಭಾರಿ ಮಳೆಯಾಗಿತ್ತು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಮೂರು ದಿನ ಮಳೆ ಸಂಭವ, ಇವತ್ತು ಎಷ್ಟಿರುತ್ತೆ ತಾಪಮಾನ? ಇಲ್ಲಿದೆ ಇಡೀ ದಿನದ ರಿಪೋರ್ಟ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment