ಶಿವಮೊಗ್ಗದಲ್ಲಿ ಡಬಲ್‌ ಮರ್ಡರ್‌, ಜಿಲ್ಲಾ ರಕ್ಷಣಾಧಿಕಾರಿ ಮೊದಲ ರಿಯಾಕ್ಷನ್‌

SHIVAMOGGA LIVE NEWS | 8 MAY 2024 (ಈ ಸುದ್ದಿಯನ್ನು ಇನ್ನು 39 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

SHIMOGA : ಲಷ್ಕರ್‌ ಮೊಹಲ್ಲಾದಲ್ಲಿ ನಡೆದ ಡಬಲ್‌ ಮರ್ಡರ್‌ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ಭೇಟಿ ನೀಡಿ ಪರಿಶೀಲಿಸಿದರು. ಪೊಲೀಸ್‌ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಎಸ್‌ಪಿ ಹೇಳಿದ್ದೇನು?

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

‘ಸಂಜೆ 5.30ರ ಹೊತ್ತಿಗೆ ಸ್ಥಳೀಯ ವ್ಯಕ್ತಿಯೊಬ್ಬನ ಮೇಲೆ ಹೊರಗಿನಿಂದ ಬಂದ ಯುವಕರು ಹಲ್ಲೆ ನಡೆಸಿದರು. ಈ ವೇಳೆ ಸ್ಥಳೀಯ ವ್ಯಕ್ತಿಯ ಸ್ನೇಹಿತರು ಹಲ್ಲೆಕೋರರ ಮೇಲೆ ದಾಳಿ ನಡೆಸಿದರು. ಚೂಪಾದ ವಸ್ತುಗಳಿಂದ ಹಲ್ಲೆ ನಡೆಸಿ, ಕಲ್ಲುಗಳನ್ನು ಎತ್ತಿ ಹಾಕಿ ಹತ್ಯೆ ಮಾಡಿದ್ದಾರೆ.  ಸುಹೇಲ್‌ ಅಲಿಯಾಸ್‌ ಖಲಂದರ್‌ ಅಲಿಯಸ್‌ ಸೇಬು ಮತ್ತು ಗೌಸ್‌ ಎಂಬುವವರು ಹತ್ಯೆಯಾಗಿದ್ದಾರೆ. ಈ ಪೈಕಿ ಒಬ್ಬಾತ ಕೆ.ಆರ್‌.ಪುರಂ ನಿವಾಸಿ. ಮತ್ತೊಬ್ಬ ಅಣ್ಣಾನಗರದವನು. ಆರೋಪಿಗಳ ಗುರುತು ಪತ್ತೆಯಾಗಿದೆ, ಬಂಧಿಸಲಾಗುತ್ತದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ತಿಳಿಸಿದರು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ನಡು ರಸ್ತೆಯಲ್ಲಿ ಇಬ್ಬರ ಭೀಕರ ಹತ್ಯೆ

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

SP-Mithun-Kumar-Visit-Lashkar-Mohalla.

Leave a Comment