ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 9 MAY 2024
SHIMOGA : ಲೋಕಸಭೆ ಚುನಾವಣೆಯನ್ನು ಹಬ್ಬದ ರೀತಿ ನಡೆಸಲಾಗಿದೆ. ಗ್ಯಾರಂಟಿಗಳನ್ನು ಈಡೇರಿಸಿದ್ದರಿಂದ ಈ ಬಾರಿ ಗೀತಾ ಶಿವರಾಜ್ ಕುಮಾರ್ ಅವರ ಗೆಲುವು ನಿಶ್ಚಿತ ಎಂದು ಸಚಿವ ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಸಚಿವರು ಏನೆಲ್ಲ ಹೇಳಿದರು? ಇಲ್ಲಿದೆ 3 ಪ್ರಮುಖ ಸಂಗತಿ.
ಮಿನಿಸ್ಟರ್ ಹೇಳಿದ 3 ಪ್ರಮುಖಾಂಶ
ಮತದಾರರು ಮತ್ತು ರಾಜಕಾರಣಿಗಳ ನಡುವೆ ಉತ್ತಮ ಬಾಂಧವ್ಯ ಬೆಸೆಯುವ ಚುನಾವಣೆ ಇದಾಗಿದ್ದು, ಈ ಬಾರಿ ಲೋಕಸಭೆ ಚುನಾವಣೆಯನ್ನು ಹಬ್ಬದ ರೀತಿ ನಡೆಸಲಾಗಿದೆ. ಚುನಾವಣೆಗಳು ಬಂದಾಗ ಮಾತ್ರ ರಾಜಕಾರಣಿಗಳು ಮತದಾರರ ಬಳಿ ಹೋಗಿ ಮತ ಕೇಳುವುದಾಗುತ್ತಿದೆ. ಆದರೆ ಈ ಸಲ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದ ಮತದಾರರ ಮನೆ ಮನೆಗೂ ತೆರಳಿ ಮನವರಿಕೆ ಮಾಡಿಕೊಡಲಾಗಿದೆ.
ಲೋಕಸಭೆ ಚುನಾವಣೆಯಲ್ಲಿ ನಾವು ಯಾವುದೇ ಒಬ್ಬ ವ್ಯಕ್ತಿ ಕೇಂದ್ರಿತ ಅಥವಾ ಜಾತಿ, ಧರ್ಮದ ಆಧಾರದ ಮೇಲೆ ಮತ ಕೇಳಲಿಲ್ಲ. ವಿಶ್ವಾಸದ ಮೇಲೆ ಗ್ಯಾರಂಟಿಗಳನ್ನು ಜನರಿಗೆ ಕೊಟ್ಟಿದ್ದೇವೆ. ಗ್ಯಾರಂಟಿ ಕೊಡದೇ ಇದ್ದಿದ್ದರೆ ಮತದಾರರ ಬಳಿ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಮಾತು ಉಳಿಸಿಕೊಂಡಿದ್ದೇ ನಮಗೆ ದೊಡ್ಡ ಆಸ್ತಿಯಾಯಿತು.
ಗ್ಯಾರಂಟಿ ಮೂಲಕ ಕಷ್ಟದಲ್ಲಿರುವವರಿಗೆ ಸರ್ಕಾರ ಸಹಾಯ ಮಾಡಿದೆ. ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಸರ್ಕಾರದ ಋಣ ತೀರಿಸಿರುವ ವಿಶ್ವಾಸವಿದೆ. ದೊಡ್ಡಮಟ್ಟದಲ್ಲಿ ಗೀತಾ ಶಿವರಾಜ್‌ಕುಮಾರ್ ಗೆಲ್ಲುತ್ತಾರೆ. ಛಲದಿಂದ ಅವರು ಚುನಾವಣೆಯನ್ನು ಎದುರಿಸಿದ್ದಾರೆ. ಹಾಗಾಗಿ ನಾನು ಇಷ್ಟೇ ಮತಗಳ ಅಂತರದಿಂದ ಗೆಲ್ಲುತ್ತಾರೆಂದು ನಂಬರ್ ಹೇಳುವುದಿಲ್ಲ. ಭವಿಷ್ಯ ಹೇಳಲು ನಾನು ಜ್ಯೋತಿಷಿಯಲ್ಲ.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್, ಮುಖಂಡರಾದ ಆಯನೂರು ಮಂಜುನಾಥ, ಆರ್.ಎಂ.ಮಂಜುನಾಥ ಗೌಡ, ಮುಖಂಡರಾದ ಕಲಗೋಡು ರತ್ನಾಕರ್, ಎಂ.ಶ್ರೀಕಾಂತ್, ಎಸ್.ರವಿಕುಮಾರ್, ಶ್ರೀನಿವಾಸ್ ಕರಿಯಣ್ಣ, ಜಿ.ಡಿ.ಮಂಜುನಾಥ, ಎಸ್.ಕೆ.ಮರಿಯಪ್ಪ, ಎಸ್.ಪಿ.ಶೇಷಾದ್ರಿ, ಗಿರೀಶ್, ವೈ.ಎಚ್.ನಾಗರಾಜ್, ಕಲೀಂ, ಶಿವಕುಮಾರ್, ಶ್ರೀಧರ್, ವಿಜಯಕುಮಾರ್, ಹೆಚ್.ಪಾಲಾಕ್ಷಿ ಸುದ್ದಿಗೋಷ್ಠಿಯಲ್ಲಿದ್ದರು.
ಶಿವರಾಜ್ ಕುಮಾರ್‌ಗೆ ಆರೋಗ್ಯ ಸಮಸ್ಯೆ ನಟ ಶಿವರಾಜ್‌ಕುಮಾರ್ ಅವರಿಗೆ ಸಣ್ಣ ಪ್ರಮಾಣದ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ತೆರಳಿದ್ದಾರೆ. ಹಾಗಾಗಿ ಗೀತಾ ಕೂಡ ಜತೆಗೆ ತೆರಳಿದ್ದು ನಾಲೈದು ದಿನಗಳ ನಂತರ ಶಿವಮೊಗ್ಗಕ್ಕೆ ಆಗಮಿಸುವರು. ಉಳಿದಂತೆ ಗೀತಾ ಪರ ಎಲ್ಲ ಕಾರ್ಯಕರ್ತರು, ಮತದಾರರು ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ಮಧು ಬಂಗಾರಪ್ಪ ತಿಳಿಸಿದರು.
ಇದನ್ನೂ ಓದಿ – ಕೋರ್ಟ್ ಮೊರೆ ಹೋದ ಈಶ್ವರಪ್ಪ, ಜಯನಗರ ಠಾಣೆಯಲ್ಲಿ ದಾಖಲಾಯ್ತು ಪ್ರಕರಣ, ಏನಿದು ಕೇಸ್?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422