ಬೆಳಗ್ಗೆ ಜಮೀನಿಗೆ ಬಂದ ಶುಂಠಿ ಬೆಳೆಗಾರನಿಗೆ ಕಾದಿತ್ತು ಆಘಾತ, ಅದೇ ರೀತಿ ಮತ್ತೊಮ್ಮೆ ನಡೆಯಿತು ಕೃತ್ಯ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 10 MAY 2024

KUMSI : ಒಂದೇ ಜಮೀನಿನಲ್ಲಿ ಎರಡು ಬಾರಿ ಶುಂಠಿ ಕಳ್ಳತನವಾಗಿದೆ. ಬೆಳೆಗಾರ ಇಲ್ಲದ ಸಂದರ್ಭ ಗಮನಿಸಿ 9 ಕ್ವಿಂಟಾಲ್‌ ಶುಂಠಿ ಕಳವು ಮಾಡಿರುವ ಶಂಕೆ ಇದೆ ಎಂದು ಆರೋಪಿಸಲಾಗಿದೆ. ಹಿಟ್ಟಗೊಂಡನಕೊಪ್ಪ ಗ್ರಾಮದಲ್ಲಿ ಜಮೀನು ಗುತ್ತಿಗೆ ಪಡೆದು ಕುಂಸಿಯ ದೇವೇಂದ್ರ ಎಂಬುವವರು ಶುಂಠಿ ಬೆಳೆದಿದ್ದರು. ನಿತ್ಯ ಜಮೀನಿಗೆ ಹೋಗಿ ಬರುತ್ತಿದ್ದರು.

ಏಪ್ರಿಲ್‌ 29ರ ರಾತ್ರಿ ಜಮೀನಿನಲ್ಲಿ ಬೆಳೆದಿದ್ದ ಸುಮಾರು 7 ಕ್ವಿಂಟಾಲ್‌ ಶುಂಠಿ ಕಳವು ಮಾಡಲಾಗಿತ್ತು. ಈ ಹಿನ್ನೆಲೆ ರಾತ್ರಿ ವೇಳೆ ಜಮೀನಿನಲ್ಲಿ ದೇವೇಂದ್ರ ಕಾವಲು ಕಾಯಲು ಆರಂಭಿಸಿದರು. ಮೇ 4ರಂದು ಮದುವೆ ಸಮಾರಂಭಕ್ಕೆ ದೇವೇಂದ್ರ ತೆರಳಿದ್ದರು. ಆ ರಾತ್ರಿ ನಾಲ್ಕು ಚೀಲ ಶುಂಠಿ ಕಳುವಾಗಿತ್ತು. ಬೆಳೆಗಾರ ಇಲ್ಲದ ಸಂದರ್ಭವನ್ನೆ ಗಮನಿಸಿ 92 ಸಾವಿರ ರೂ. ಮೌಲ್ಯದ ಶುಂಠಿ ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಕುಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಆಗುಂಬೆ ಬಳಿ ಅಪಘಾತ, ಒಬ್ಬ ಸಾವು, ಕ್ಯಾಂಟರ್‌ ಜಖಂ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment