ಶಿವಮೊಗ್ಗದಲ್ಲಿ ತಾಪಮಾನ ತುಸು ಇಳಿಕೆ, ಅಲ್ಲಲ್ಲಿ ಮಳೆ ಸಾಧ್ಯತೆ, ಇವತ್ತು ಹೇಗಿದೆ ಹವಾಮಾನ? ಇಲ್ಲಿದೆ ರಿಪೋರ್ಟ್

SHIVAMOGGA LIVE NEWS | 11 MAY 2024 (ಈ ಸುದ್ದಿಯನ್ನು ಇನ್ನು 46 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

WEATHER REPORT : ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ತಾಪಮಾನ ತುಸು ಇಳಿಕೆಯಾಗುವ ಸಾಧ್ಯತೆ ಇದೆ. ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್‌ಗೆ ತಗ್ಗಿದೆ. ಕನಿಷ್ಠ 24 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಕೆಎಸ್‌ಎಂಡಿಎನ್‌ಸಿ ವರದಿಯಲ್ಲಿ ತಿಳಿಸಲಾಗಿದೆ.

ಬೆಳಗ್ಗೆ 8 ಗಂಟೆಗೆ ಶಿವಮೊಗ್ಗದಲ್ಲಿ 29.1 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಬೆಳಗ್ಗೆ 10ಕ್ಕೆ 34 ಡಿಗ್ರಿ, ಮಧ್ಯಾಹ್ನ 12ಕ್ಕೆ 36.7 ಡಿಗ್ರಿ, ಮಧ್ಯಾಹ್ನ 2ಕ್ಕೆ 36.9 ಡಿಗ್ರಿ, ಸಂಜೆ 5ಕ್ಕೆ 27.5 ಡಿಗ್ರಿ, ರಾತ್ರಿ 8ಕ್ಕೆ 25.3 ಡಿಗ್ರಿ, ರಾತ್ರಿ 10ಕ್ಕೆ 24.6 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರುವ ಸಾಧ್ಯತೆ ಇದೆ.

ಅಲ್ಲಲ್ಲಿ ಸಾಧಾರಣ ಮಳೆ

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ಜಿಲ್ಲೆಯ ವಿವಿಧೆಡೆ ಮೋಡ ಕವಿದ ವಾತಾವರಣ ಇತ್ತು. ಇವತ್ತು ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಂಭವವಿದೆ. ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 11 ಗಂಟೆ ಮಧ್ಯೆ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ – ಬೆಳಗ್ಗೆ ಜಮೀನಿಗೆ ಬಂದ ಶುಂಠಿ ಬೆಳೆಗಾರನಿಗೆ ಕಾದಿತ್ತು ಆಘಾತ, ಅದೇ ರೀತಿ ಮತ್ತೊಮ್ಮೆ ನಡೆಯಿತು ಕೃತ್ಯ

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

WEATHER-REPORT-GENERAL-IMAGE.webp

Leave a Comment