ಶಿವಮೊಗ್ಗದಲ್ಲಿ 3 ಮರ್ಡರ್‌, ಬಂಧಿತರ ಹೆಸರು ಬಹಿರಂಗ, ಬಿಗಿ ಬಂದೋಬಸ್ತ್‌ನಲ್ಲಿ ಯಾಸಿನ್‌ ಅಂತ್ಯಸಂಸ್ಕಾರ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 11 MAY 2024

SHIMOGA : ಲಷ್ಕರ್‌ ಮೊಹಲ್ಲಾದಲ್ಲಿನ ಗ್ಯಾಂಗ್‌ ವಾರ್‌ ಮತ್ತು ಮೂವರ ಕೊಲೆ ಪ್ರಕರಣ ಸಂಬಂಧ ಪೊಲೀಸರು 18 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರ ಹೆಸರುಗಳನ್ನ (names of arrested) ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ಪ್ರಕಟಿಸಿದ್ದಾರೆ.

ಲಷ್ಕರ್‌ ಮೊಹಲ್ಲಾದಲ್ಲಿ ಯಾಸೀನ್‌ ಖುರೇಷಿ ಮೇಲೆ ಆದಿಲ್‌ ಪಾಷಾನ ಗ್ಯಾಂಗ್‌ ದಾಳಿ ನಡೆಸಿತ್ತು. ದಾಳಿ ನಡೆಸಿದ ಆದಿಲ್‌ ಗ್ಯಾಂಗ್‌ನ ಆದಿಲ್‌ ಪಾಷಾ, ಶಾಕಿಬ್‌, ಸಂಗೀರ್‌, ಸಮೀರ್‌ ಅಲಿಯಸ್‌ ಅಫ್ಫು, ಇಬ್ರಾರ್‌ ಅಲಿ ಅಲಿಯಾಸ್‌ ಇಬ್ಬು, ಇಮ್ರಾನ್‌ ಅಲಿಯಾಸ್‌ ನಿಮ್ಮು, ಪರ್ವೇಜ್‌, ಪ್ರತಾಪ್‌ ಅಲಿಯಾಸ್‌ ಅಣ್ಣನನ್ನು ಬಂಧಿಸಲಾಗಿದೆ. ಗೌಸ್‌ ಮತ್ತು ಖಲಂದರ್‌ ಅಲಿಯಾಸ್‌ ಸೇಬು ಎಂಬುವವರು ಸ್ಥಳದಲ್ಲೇ ಹತ್ಯೆಯಾಗಿದ್ದಾರೆ.

ಯಾಸಿನ್‌ ಖುರೇಶಿ ಗ್ಯಾಂಗ್‌ನ ಯಾಸಿನ್‌ ಖೂರೇಶಿ ಸಾವನ್ನಪ್ಪಿದ್ದಾನೆ. ಮೊಹಮ್ಮದ್‌ ರಿಜ್ವಾನ್‌ ಅಲಿಯಾಸ್‌ ತೊಟ್ಟು, ಆರ್ಯನ್‌ ಖಾನ್‌, ಶಾಬಾಜ್‌ ಖಾನ್‌, ಅಜರ್‌, ಯಾಸೀನ್‌ ಅಲಿಯಾಸ್‌ ಬ್ಯಾಟ್‌, ಸುಹೇಬ್‌ ಅಲಿಯಾಸ್‌ ಡೇಂಜರ್‌, ಸೋಹೇಲ್‌ ಅಲಿಯಾಸ್‌ ಕೊಂಗಾಟಿ, ರಿಜ್ವಾನ ಪಾಷಾ ಬಂಧಿತರು.

ಯಾಸೀನ್‌ ಅಂತ್ಯ ಸಂಸ್ಕಾರ

Yasin-Khureshi-Lashkar-Mohalla-Janata-Mutton-Stall

ಶಿವಮೊಗ್ಗದ ಖಬರಸ್ಥಾನದಲ್ಲಿ ಯಾಸೀನ್‌ ಖುರೇಶಿ ಅಂತ್ಯ ಸಂಸ್ಕಾರ ನೆರವೇರಿತು. ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು. ಅಹಿತಕರ ಘಟನೆ ತಡೆಗೆ ಶಿವಮೊಗ್ಗ ನಗರದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಮೆರವಣಿಗೆ ಸಾಗುವ ಮರ್ಗದುದ್ದಕ್ಕು ಪೊಲೀಸರನ್ನು ನಿಯೋಜಿಸಲಾಗಿತ್ತು.

ಇದನ್ನೂ ಓದಿ – ಬೆಳಗ್ಗೆ ಜಮೀನಿಗೆ ಬಂದ ಶುಂಠಿ ಬೆಳೆಗಾರನಿಗೆ ಕಾದಿತ್ತು ಆಘಾತ, ಅದೇ ರೀತಿ ಮತ್ತೊಮ್ಮೆ ನಡೆಯಿತು ಕೃತ್ಯ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment